-->
Rajasthan HC - ಲವ್.. ಸೆಕ್ಸ್... ಬ್ರೇಕ್‌ ಅಪ್‌... ಬಳಿಕ ಅತ್ಯಾಚಾರ ದೂರು: ಮಹತ್ವದ ತೀರ್ಪು ನೀಡಿದ ರಾಜಸ್ತಾನ ಹೈಕೋರ್ಟ್

Rajasthan HC - ಲವ್.. ಸೆಕ್ಸ್... ಬ್ರೇಕ್‌ ಅಪ್‌... ಬಳಿಕ ಅತ್ಯಾಚಾರ ದೂರು: ಮಹತ್ವದ ತೀರ್ಪು ನೀಡಿದ ರಾಜಸ್ತಾನ ಹೈಕೋರ್ಟ್

ಲವ್.. ಸೆಕ್ಸ್... ಬ್ರೇಕ್‌ ಅಪ್‌... ಬಳಿಕ ಅತ್ಯಾಚಾರ ದೂರು: ಮಹತ್ವದ ತೀರ್ಪು ನೀಡಿದ ರಾಜಸ್ತಾನ ಹೈಕೋರ್ಟ್






ಲವ್.. ಸೆಕ್ಸ್... ಬ್ರೇಕ್‌ ಅಪ್‌... ಬಳಿಕ ಅತ್ಯಾಚಾರ ದೂರು.. ಇಂತಹ ಅತ್ಯಾಚಾರ ಪ್ರಕರಣ ಹೆಚ್ಚಾಗಿ ಪುರುಷರಿಗೆ ಕಂಟಕವಾಗಿ ಪರಿಣಮಿಸುವುದೇ ಹೆಚ್ಚು.



ಆದರೆ, ಇದೀಗ ರಾಜಸ್ತಾನ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಲವ್, ಸೆಕ್ಸ್, ಬ್ರೇಕ್‌ ಅಪ್‌ನಿಂದ ಅಂತ್ಯವಾಗುವ ಸಂಬಂಧದಲ್ಲಿ ಅತ್ಯಾಚಾರಕ್ಕೆ ಎಡೆ ಇಲ್ಲ ಎಂದು ಹೇಳಿದೆ. ಅಲ್ಲದೆ, ಈ ಕುರಿತು ದಾಖಲಾದ FIRನ್ನು ರದ್ದುಗೊಳಿಸಿದೆ.



ಈ ಪ್ರಕರಣದಲ್ಲಿ ದೂರುದಾರರೊಂದಿಗೆ ಆರೋಪಿಯು ಸಮ್ಮತಿಯ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದು ತೀರ್ಪು ನೀಡಿದ ರಾಜಸ್ಥಾನ ಹೈಕೋರ್ಟ್‌ನ ಜೈಪುರ ಪೀಠ, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನ ವಿರುದ್ಧ ದಾಖಲಿಸಲಾಗಿದ್ದ FIR ರದ್ದುಗೊಳಿಸಿದೆ.


ಪ್ರಕರಣ: ರಾಧಾಕೃಷ್ಣನ್ ಮೀನಾ Vs ರಾಜಸ್ಥಾನ ಸರ್ಕಾರ (ರಾಜಸ್ತಾನ ಹೈಕೋರ್ಟ್)



ಈ ಪ್ರಕರಣದಲ್ಲಿ ಅತ್ಯಾಚಾರದಂತಹ ಯಾವುದೇ ಕೃತ್ಯ ನಡೆದಿಲ್ಲ ಎಂದ ತೀರ್ಪು ನೀಡಿದ ಫರ್ಜಂದ್ ಅಲಿ ಹೇಳಿದ್ದು, ಸಂತ್ರಸ್ತೆ ಎರಡು ವರ್ಷಗಳ ಕಾಲ ಅರ್ಜಿದಾರರೊಂದಿಗೆ ಲೈಂಗಿಕ ಸಂಬಂಧ ಮುಂದುವರೆಸಿದ್ದರು ಎಂಬುದನ್ನು ಗಮನಿಸಿದ್ದಾರೆ.



FIR ದಾಖಲಿಸುವಲ್ಲಿ ವಿಳಂಬ ಮತ್ತು ಉಭಯ ಪಕ್ಷಕಾರರ ನಡುವಿನ ವಾಟ್ಸಾಪ್‌ ಸಂದೇಶ ಆಧರಿಸಿ ನ್ಯಾಯಾಲಯ ಸಂತ್ರಸ್ತೆಯ ಹೇಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿತು. "ಬ್ರೇಕಪ್‌ನಲ್ಲಿ ಅಂತ್ಯ ಕಾಣುವ ಜೋಡಿಯ ಲೈಂಗಿಕ ಸಂಬಂಧದ ವಾಡಿಕೆಯ ಪ್ರಕರಣ ಇದು" ಎಂದು ಅದು ಅಭಿಪ್ರಾಯಪಟ್ಟಿತು.



ಮದುವೆ ಭರವಸೆ ನೀಡಿ ಅತ್ಯಾಚಾರ ಮಾಡಲಾಗಿದೆ ಎಂದು ಅರ್ಜಿದಾರರ ವಿರುದ್ಧ FIR ದಾಖಲಿಸಲಾಗಿತ್ತು. ಅರ್ಜಿದಾರರು ಈ FIRನ್ನು ಉತ್ಪ್ರೇಕ್ಷಿತ ಎಂದು ಆರೋಪಿಸಿ ರದ್ದುಗೊಳಿಸಲು ಕೋರಿದ್ದರು.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200