-->
ಎಂಪಿ, ಎಮ್ಮೆಲ್ಲೆಗಳಿಗೆ ಸೆಲ್ಯೂಟ್‌: ಪೊಲೀಸ್ ಸಿಬ್ಬಂದಿಗೆ ಡಿಜಿಪಿ ಆದೇಶ- ಕೆರಳಿದ ಕೈ, ಕಮಲ

ಎಂಪಿ, ಎಮ್ಮೆಲ್ಲೆಗಳಿಗೆ ಸೆಲ್ಯೂಟ್‌: ಪೊಲೀಸ್ ಸಿಬ್ಬಂದಿಗೆ ಡಿಜಿಪಿ ಆದೇಶ- ಕೆರಳಿದ ಕೈ, ಕಮಲ

ಎಂಪಿ, ಎಮ್ಮೆಲ್ಲೆಗಳಿಗೆ ಸೆಲ್ಯೂಟ್‌: ಪೊಲೀಸ್ ಸಿಬ್ಬಂದಿಗೆ ಡಿಜಿಪಿ ಆದೇಶ- ಕೆರಳಿದ ಕೈ, ಕಮಲ





ಸಂಸತ್ ಸದಸ್ಯರು ಮತ್ತು ವಿಧಾನ ಸಭಾ ಸದಸ್ಯರಿಗೆ ಸೆಲ್ಯೂಟ್ ಗೌರವ ನೀಡಬೇಕು ಎಂಬ ಮಧ್ಯಪ್ರದೇಶ ಪೊಲೀಸ್ ಮಹಾ ನಿರ್ದೇಶಕ ಕೈಲಾಸ್ ಮಖ್ವಾನ ಅವರ ಆದೇಶ ವಿವಾದಕ್ಕೆ ತಿರುಗಿದೆ.


ಈ ಆದೇಶದ ಬಗ್ಗೆ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ವ್ಯಾಪಕ ಟೀಕೆಗೆ ವ್ಯಕ್ತವಾಗಿದೆ.


ಖಾಕಿ ಧರಿಸಿದ ಪೊಲೀಸ್ ಸಿಬ್ಬಂದಿ ಮಾನ್ಯ ಶಾಸಕರು, ಸಂಸದರಿಗೆ ಸೆಲ್ಯುಟ್‌ ಮೂಲಕ ಗೌರವದ ವಂದನೆಯನ್ನು ನೀಡಬೇಕು ಎಂದು ಹಿಂದಿ ಭಾಷೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದರು. ಇದುವರೆಗೆ ಅದು ಕೇವಲ "ಗೌರವದ ವಂದನೆ"ಗೆ ಮಾತ್ರ ಸೀಮಿತವಾಗಿತ್ತು.


ಈ ವಂದನೆ, ಔಪಚಾರಿಕ ಭೇಟಿ ಸಹಿತ ಎಲ್ಲ ಸರ್ಕಾರಿ ಕಾರ್ಯಕ್ರಮಗಳು ಮತ್ತು ಸಭೆ-ಸಮಾರಂಭಗಳಿಗೆ ಅನ್ವಯವಾಗಿತ್ತು.


ಬುಡಕಟ್ಟು ವ್ಯವಹಾರಗಳ ಸಚಿವ ವಿಜಯ್ ಶಾ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ತನಗೆ ಪೊಲೀಸರು ಸೂಕ್ತ ಗೌರವ ನೀಡಿಲ್ಲ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಡಿಜಿಪಿ ಈ ಆದೇಶವನ್ನು ಹೊರಡಿಸಿದ್ದರು.


ಈ ಆದೇಶವನ್ನು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತೇಂದ್ರ ಪತ್ವಾರಿ ಟೀಕಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಮತ್ತು ಶಿಸ್ತು ಹದಗೆಟ್ಟಿದೆ. ಸೆಲ್ಯೂಟ್ ಮೂಲಕ ಇದನ್ನು ಸುಧಾರಿಸಬಹುದು ಎಂದು ಮೋಹನ್ ಯಾದವ್ ಸರ್ಕಾರ ಭಾವಿಸಿದಂತಿದೆ ಎಂದು ತಿವಿದಿದ್ದಾರೆ.


ಬಿಜೆಪಿ ಕೂಡ ಈ ನಡೆಯನ್ನು ಟೀಕಿಸಿದೆ. ಬಿಜೆಪಿ ರಾಜ್ಯ ಅಧ್ಯಕ್ಷ ವಿ.ಡಿ. ಶರ್ಮಾ, ಗೌರವವು ಸೆಲ್ಯೂಟ್‌ನಿಂದ ಬರುವುದಿಲ್ಲ. ಅದನ್ನು ಜನಪ್ರತಿನಿಧಿಗಳು ತಮ್ಮ ನಡವಳಿಕೆ ಮತ್ತು ಉತ್ತಮ ಕೆಲಸದಿಂದ ಸಂಪಾದಿಸಬೇಕು ಎಂದು ನೀತಿಪಾಠ ಹೇಳಿದ್ದಾರೆ.


Ads on article

Advertise in articles 1

advertising articles 2

Advertise under the article