-->
ಕೋವಿಡ್ ಲಸಿಕೆ ಹೃದಯ ಸ್ತಂಭನಕ್ಕೆ ಕಾರಣ ಎಂದ ವಿಶ್ವದ ಅನೇಕ ಅಧ್ಯಯನಗಳು!

ಕೋವಿಡ್ ಲಸಿಕೆ ಹೃದಯ ಸ್ತಂಭನಕ್ಕೆ ಕಾರಣ ಎಂದ ವಿಶ್ವದ ಅನೇಕ ಅಧ್ಯಯನಗಳು!

ಕೋವಿಡ್ ಲಸಿಕೆ ಹೃದಯ ಸ್ತಂಭನಕ್ಕೆ ಕಾರಣ ಎಂದ ವಿಶ್ವದ ಅನೇಕ ಅಧ್ಯಯನಗಳು!

ಸಿಎಂ ಸಿದ್ದರಾಮಯ್ಯ ಆಘಾತಕಾರಿ ಹೇಳಿಕೆ






ಕೋವಿಡ್ ಲಸಿಕೆ ಹೃದಯ ಸ್ತಂಭನಕ್ಕೆ ಕಾರಣ ಎಂಬುದಾಗಿ ವಿಶ್ವದ ಅನೇಕ ಅಧ್ಯಯನಗಳು ಹೇಳಿವೆ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.


ಹಾಸನದಲ್ಲಿ ಯುವ ಸಮುದಾಯಕ್ಕೆ ಹೃದಯಾಘಾತದ ಪರಿಣಾಮಗಳು ಗಂಭೀರವಾಗಿರುವ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಕೋವಿಡ್ ಲಸಿಕೆಗಳೂ ಹೃದಯಾಘಾತಕ್ಕೆ ಕಾರಣ ಇರಬಹುದು ಎಂದು ಆತಂಕ ವ್ಯಕ್ತಪಡಿಸಿದರು.


ವಿಶ್ವದ ಅನೇಕ ಅಧ್ಯಯನಗಳ ಆಧಾರದಲ್ಲಿ ಹೇಳುವುದಾದರೆ, ಕೋವಿಡ್ ಲಸಿಕೆಗಳೂ ಈ ಆತಂಕಕಾರಿ ಘಟನೆಗಳಿಗೆ ಕಾರಣ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಸರಣಿ ಸಾವುಗಳ ನೈಜ ಕಾರಣ ಪತ್ತೆ ಮಾಡಿ. ಹಠಾತ್ ಸಾವುಗಳನ್ನು ತಡೆಯಲು ನಾವು ಸಂಪೂರ್ಣ ಬದ್ಧರಾಗಿದ್ದೇವೆ. ಈ ಉದ್ದೇಶದಿಂದಲೇ ಹೃದಯ ಜ್ಯೋತಿ, ಗೃಹ ಆರೋಗ್ಯದಂತಹ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಸಾರ್ವಜನಿಕ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ ಎಂದು ಅವರು ವಿವರಿಸಿದರು.


ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ರವೀಂದ್ರ ನಾಥ್ ಅವರ ನೇತೃತ್ವದ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿ ಅಧ್ಯಯನ ಮಾಡಿ, ವಿವರವಾದ ವರದಿಯನ್ನು ನೀಡಲಿದೆ ಎಂದು ಅವರು ಭರವಸೆ ನೀಡಿದರು.


Ads on article

Advertise in articles 1

advertising articles 2

Advertise under the article