
ಎಐ ಮೇಲೆ ಅತೀ ಅವಲಂಬನೆ ಅಪಾಯಕಾರಿ; ವಕೀಲ ವೃತ್ತಿಗೇ ಮಾರಕ- ಕರ್ನಾಟಕ ಹೈಕೋರ್ಟ್
ಎಐ ಮೇಲೆ ಅತೀ ಅವಲಂಬನೆ ಅಪಾಯಕಾರಿ; ವಕೀಲ ವೃತ್ತಿಗೇ ಮಾರಕ- ಕರ್ನಾಟಕ ಹೈಕೋರ್ಟ್
ಕೃತಕ ಬುದ್ಧಿಮತ್ತೆ (ಆರ್ಟಿಫೀಷಿಯಲ್ ಇಂಟೆಲಿಜೆನ್ಸಿ)ಯನ್ನು ಅತಿಯಾಗಿ ಅವಲಂಬಿಸುವುದು ಅತ್ಯಂತ ಅಪಾಯಕಾರಿ. ಅದು ವೃತ್ತಿಯನ್ನೇ ನಾಶಪಡಿಸುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಕೇಂದ್ರ ಸರ್ಕಾರವು ಸಹಯೋಗ್ ಪೋರ್ಟಲ್ ಆರಂಭಿಸಿರುವುದು ಮತ್ತು ಅದನ್ನು ಬಳಸಿರುವುದನ್ನು ಪ್ರಶ್ನಿಸಿ ಎಕ್ಸ್ ಕಾರ್ಪ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಕೃತಕ ಬುದ್ಧಿಮತ್ತೆಯು ತನ್ನ ಕಕ್ಷಿದಾರನ ಹೆಸರಿನಲ್ಲಿ ತೀರ್ಪೊಂದನ್ನೇ ತಿರುಚಿತ್ತು ಎಂಬುದನ್ನು ವಕೀಲರೊಬ್ಬರು ಒಪ್ಪಬೇಕಾಯಿತು. ನಕಲಿ ಸೈಟೇಶನ್‌ನಿಂದಾಗಿ ದಂಡವೂ ವಿಧಿಸಲ್ಪಟ್ಟಿದೆ ಎಂಬುದನ್ನು ನ್ಯಾಯಪೀಠ ನೆನಪಿಸಿತು.
ಕೃತಕ ಬುದ್ಧಿಮತ್ತೆ ಮೇಲೆ ಅತಿಯಾದ ಅವಲಂಬನೆ ಕಾನೂನು ವೃತ್ತಿಗೆ ಕಂಟಕವಾಗಬಹುದು. ಕೃತಕ ಬುದ್ದಿಮತ್ತೆ ಅವಲಂಬಿಸುವುದು ಬುದ್ದಿಮತ್ತೆಯನ್ನೇ ಕೃತಕಗೊಳಿಸುವಂತಾಗಬಾರದು ಎಂದು ಎಚ್ಚರಿಕೆಯ ನುಡಿಗಳನ್ನು ನ್ಯಾಯಮೂರ್ತಿಗಳು ಆಡಿದರು.