-->
 ಇ-ಫೈಲಿಂಗ್‌ ಮೂಲಕ ದಾವೆ ದಾಖಲಿಸಿಕೊಳ್ಳಲು ನ್ಯಾಯಾಂಗ ಸಿಬ್ಬಂದಿಗೆ ನಿರ್ದೇಶನ: ಆಗಸ್ಟ್ 1ರಿಂದಲೇ ಹೊಸ ವ್ಯವಸ್ಥೆ ಜಾರಿ

ಇ-ಫೈಲಿಂಗ್‌ ಮೂಲಕ ದಾವೆ ದಾಖಲಿಸಿಕೊಳ್ಳಲು ನ್ಯಾಯಾಂಗ ಸಿಬ್ಬಂದಿಗೆ ನಿರ್ದೇಶನ: ಆಗಸ್ಟ್ 1ರಿಂದಲೇ ಹೊಸ ವ್ಯವಸ್ಥೆ ಜಾರಿ

 ಇ-ಫೈಲಿಂಗ್‌ ಮೂಲಕ ದಾವೆ ದಾಖಲಿಸಿಕೊಳ್ಳಲು ನ್ಯಾಯಾಂಗ ಸಿಬ್ಬಂದಿಗೆ ನಿರ್ದೇಶನ: ಆಗಸ್ಟ್ 1ರಿಂದಲೇ ಹೊಸ ವ್ಯವಸ್ಥೆ ಜಾರಿ

ಮಹತ್ವದ ಸೂಚನೆಯೊಂದರಲ್ಲಿ ಇ-ಫೈಲಿಂಗ್‌ ಮೂಲಕ ದಾವೆ ದಾಖಲಿಸಿಕೊಳ್ಳಲು ನ್ಯಾಯಾಂಗ ಸಿಬ್ಬಂದಿಗೆ ನಿರ್ದೇಶನ ನೀಡಲಾಗಿದೆ. ಈ ಹೊಸ ವ್ಯವಸ್ಥೆ 2025ರ ಆಗಸ್ಟ್ 1ರಿಂದಲೇ ಜಾರಿಗೆ ಬಂದಿದೆ.

ಸರಕಾರದ ವಿವಿಧ ಇಲಾಖೆಗಳು, ನಿಗಮ, ಮಂಡಳಿ ಹಾಗೂ ಸರಕಾರದ ಸ್ವಾಮ್ಯದ ಬ್ಯಾಂಕ್ ಮುಂತಾದ ಸಂಸ್ಥೆಗಳು ಇ ಫೈಲಿಂಗ್ ಮೂಲಕ ಮಾತ್ರವೇ ದಾವೆಗಳನ್ನು ದಾಖಲಿಸತಕ್ಕದ್ದು. ಇ-ಫೈಲಿಂಗ್ ಮೂಲಕ ಹಾಜರುಪಡಿಸಲಾದ ದಾವೆಗಳನ್ನು ಮಾತ್ರ ದಾಖಲಿಸಿಕೊಳ್ಳುವಂತೆ ಎಲ್ಲಾ ನ್ಯಾಯಾಲಯದ ಸಿಬ್ಬಂದಿಗಳಿಗೆ ನಿರ್ದೇಶನ ನೀಡಲಾಗಿದೆ.

ಆದುದರಿಂದ ದಾವೆಯನ್ನು ನೋಂದಣಿ ಮಾಡುವ ಸಿಬ್ಬಂದಿಗಳು ಸರಕಾರ/ಸರಕಾರದ ಸ್ವಾಮ್ಯದ ಸಂಸ್ಥೆಗಳು ವಾದಿ ಆಗಿರುವ ದಾವೆಗಳನ್ನು ಭೌತಿಕ ರೂಪದಲ್ಲಿ ಸ್ವೀಕರಿಸಬಾರದು ಎಂದು ಈ ಮೂಲಕ ಸೂಚಿಸಲಾಗಿದೆ.

Ads on article

Advertise in articles 1

advertising articles 2

Advertise under the article