-->
ಬಿ ರಿಪೋರ್ಟ್ ಸಲ್ಲಿಸಲು ಲಕ್ಷಗಟ್ಟಲೆ ಲಂಚ- ಮಹಿಳಾ ಪೊಲೀಸ್ ಅಧಿಕಾರಿ ಅರೆಸ್ಟ್‌

ಬಿ ರಿಪೋರ್ಟ್ ಸಲ್ಲಿಸಲು ಲಕ್ಷಗಟ್ಟಲೆ ಲಂಚ- ಮಹಿಳಾ ಪೊಲೀಸ್ ಅಧಿಕಾರಿ ಅರೆಸ್ಟ್‌

ಬಿ ರಿಪೋರ್ಟ್ ಸಲ್ಲಿಸಲು ಲಕ್ಷಗಟ್ಟಲೆ ಲಂಚ- ಮಹಿಳಾ ಪೊಲೀಸ್ ಅಧಿಕಾರಿ ಅರೆಸ್ಟ್‌





ಪ್ರಕರಣವೊಂದರಲ್ಲಿ ಬಿ ರಿಪೋರ್ಟ್ ಸಲ್ಲಿಸಲು ಲಕ್ಷಗಟ್ಟಲೆ ಹಣವನ್ನು ಲಂಚ ಪಡೆಯುತ್ತಿದ್ದ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.


ಗೋವಿಂದರಾಜಪುರ ಠಾಣೆಯ ಪಿಎಸ್‌ಐ ಸಾವಿತ್ರ ಬಾಯಿ ಬಂಧಿತ ಪೊಲೀಸ್ ಅಧಿಕಾರಿ. ಎಚ್‌ಬಿಆರ್ ಲೇಔಟ್‌ ನಿವಾಸಿ ದೂರುದಾರ ಮೊಹಮ್ಮದ್ ಯೂನಸ್ ಎಂಬವರು ನೀಡಿದ್ದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಪ್ರಕರಣದ ದಾಖಲಿಸಿದ್ದರು.


ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಆರೋಪಿ ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಅಧಿಕಾರಿಯನ್ನು ಬಂಧಿಸಿದ್ದಾರೆ.


ದೂರುದಾರ ಮೊಹಮ್ಮದ್ ಯೂನಸ್ ವಿರುದ್ಧ ಯುವತಿಯೊಬ್ಬರು ಕೆ.ಜಿ. ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅಷ್ಟಕ್ಕೆ ಸುಮ್ಮನಾಗದ ಮೊಹಮ್ಮದ್ ಯೂನಸ್ ಯುವತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಕರಣ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿದ್ದರು.


ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಲು ಮಹಿಳಾ ಪೊಲೀಸ್ ಅಧಿಕಾರಿ ಸಾವಿತ್ರಿ ಬಾಯಿ 1.25 ಲಕ್ಷ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮೊಹಮ್ಮದ್ ಯೂನಸ್ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.


Ads on article

Advertise in articles 1

advertising articles 2

Advertise under the article