-->
ಭೂ ಮಾಲೀಕರಿಗೆ ನೋಟೀಸ್ ನೀಡದೆ ಸರ್ಕಾರ ಭೂಸ್ವಾದೀನ ಮಾಡುವಂತಿಲ್ಲ: ಕರ್ನಾಟಕ ಹೈಕೋರ್ಟ್‌

ಭೂ ಮಾಲೀಕರಿಗೆ ನೋಟೀಸ್ ನೀಡದೆ ಸರ್ಕಾರ ಭೂಸ್ವಾದೀನ ಮಾಡುವಂತಿಲ್ಲ: ಕರ್ನಾಟಕ ಹೈಕೋರ್ಟ್‌

ಭೂ ಮಾಲೀಕರಿಗೆ ನೋಟೀಸ್ ನೀಡದೆ ಸರ್ಕಾರ ಭೂಸ್ವಾದೀನ ಮಾಡುವಂತಿಲ್ಲ: ಕರ್ನಾಟಕ ಹೈಕೋರ್ಟ್‌





ಭೂಮಾಲೀಕರಿಗೆ ನೋಟೀಸ್ ನೀಡದೆ ಖಾಸಗಿ ಭೂಮಿಯನ್ನು ಸರ್ಕಾರಿ ಆಸ್ತಿಯನ್ನಾಗಿ ಘೋಷಿಸುವುದು ಕಾನೂನುಬಾಹಿರ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.


ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.


ಒಂದು ವೇಳೆ, ಖಾಸಗಿ ಭೂಮಿ ಸಾರ್ವಜನಿಕ ಬಳಕೆಗಾಗಿ ಸರ್ಕಾರಕ್ಕೆ ಭೂಮಿ ಅಗತ್ಯವಿದ್ದರೆ , ಅದಕ್ಕೆ ಸರಿಯಾದ ಸ್ವಾಧೀನ ಕಾರ್ಯವಿಧಾನಗಳನ್ನು ಅನುಸರಿಸಬೇಕು ಎಂದು ನ್ಯಾಯಪೀಠ ತಾಕೀತು ಮಾಡಿದ್ದು, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಭೂ ಮಾಲೀಕರಿಗೆ ಪರಿಹಾರ ನೀಡಬೇಕು ಎಂದು ಹೇಳಿದೆ.


ಕರ್ನಾಟಕ ಭೂ ಸುಧಾರಣೆ ಕಾಯ್ದೆಯಡಿ ಭೂಮಾಲೀಕರಿಗೆ ನೋಟೀಸ್ ನೀಡದೆ ಖಾಸಗಿ ಭೂಮಿಯನ್ನು ಸರ್ಕಾರಿ ಆಸ್ತಿಯನ್ನಾಗಿ ಸೆಕ್ಷನ್ 30A ಅಡಿಯಲ್ಲಿ ಘೋಷಿಸುವುದು ಸರಿಯಾದ ಕಾನೂನು ಕ್ರಮವಲ್ಲ ಎಂದು ಅದು ಅಭಿಪ್ರಾಯಪಟ್ಟಿದೆ.


ಸಾರ್ವಜನಿಕ ಬಳಕೆಗಾಗಿ ಸರ್ಕಾರಕ್ಕೆ ಭೂಮಿ ಅಗತ್ಯವಿದ್ದರೆ ಸರಿಯಾದ ಸ್ವಾಧೀನ ಕಾರ್ಯವಿಧಾನಗಳನ್ನು ಅನುಸರಿಸಬೇಕು ಹಾಗೂ ಭೂ ಮಾಲೀಕರಿಗೆ ಪರಿಹಾರ ನೀಡಿದ ನಂತರವೇ ಭೂಸ್ವಾದೀನ ಮಾಡಬೇಕು ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.

Ads on article

Advertise in articles 1

advertising articles 2

Advertise under the article