ಪ್ರಕರಣದಿಂದ ಡಿಸ್‌ಚಾರ್ಜ್: ಸಹ ಆರೋಪಿಗೂ ಬಿಡುಗಡೆ ಭಾಗ್ಯ ಷರತ್ತುಬದ್ಧ- ಸುಪ್ರೀಂ ಕೋರ್ಟ್
ಪ್ರಕರಣದಿಂದ ಡಿಸ್‌ಚಾರ್ಜ್: ಸಹ ಆರೋಪಿಗೂ ಬಿಡುಗಡೆ ಭಾಗ್ಯ ಷರತ್ತುಬದ್ಧ- ಸುಪ್ರೀಂ ಕೋರ್ಟ್
ನ್ಯಾಯಾಲಯವು ಯಾವುದೇ ಒಂದು ಕ್ರಿಮಿನಲ್ ಪ್ರಕರಣದಿಂದ ಆರೋಪಿಯನ್ನು ದೋಷಾರೋಪಣೆಯಿಂದ ಡಿಸ್‌ಚಾರ್ಜ್ ಮಾಡಿದ್ದರೆ ಸಹ ಆರೋಪಿಗೂ ಬಿಡುಗಡೆ ಭಾಗ್ಯ ಸಿಗುತ್ತದೆ. ಆದರೆ, ಅದು ಷರತ್ತುಬದ್ಧವಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಪಂಕಜ್ ಮಿತ್ತಲ್ ಮತ್ತು ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಸಹ ಆರೋಪಿತನು ತನ್ನ ವಿರುದ್ಧದ ಪ್ರಕರಣದಿಂದ ಬಿಡುಗಡೆಗೊಂಡಿದ್ದಲ್ಲಿ, ವಿಚಾರಣೆ ಬಾಕಿ ಇರುವ ಆರೋಪಿಯ ವಿರುದ್ಧದ ಸಾಕ್ಷ್ಯವು ಗುಣಾತ್ಮಕವಾಗಿ ಹೆಚ್ಚು ಬಲವಾದದ್ದಾಗಿಲ್ಲದಿದ್ದರೆ, ಆರೋಪಿಗೂ ಸಮಾನ ಪರಿಗಣನೆ ಪಡೆಯುವ ಹಕ್ಕಿದೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
Accused Entitled To Parity With Discharged Co-Accused If Evidence Against Him Is Not Qualitatively Stronger: Supreme Court
ಪ್ರಕರಣ: ಸುಶಾಂತಾ ಕುಮಾರ್ ದುಲೇ ವಿರುದ್ಧ ಒಡಿಶಾ ರಾಜ್ಯ (ವಿಜಿಲೆನ್ಸ್)
ಸುಪ್ರೀಂ ಕೋರ್ಟ್, 2026 INSC 510, Dated: 18-05-2026