-->
ರಸ್ತೆ ರಂಪಾಟ ಪ್ರಕರಣದ ಎಫೆಕ್ಟ್‌: ಮಾಲೂರು ಜಡ್ಜ್‌ಗೆ ವರ್ಗಾವಣೆ

ರಸ್ತೆ ರಂಪಾಟ ಪ್ರಕರಣದ ಎಫೆಕ್ಟ್‌: ಮಾಲೂರು ಜಡ್ಜ್‌ಗೆ ವರ್ಗಾವಣೆ

ರಸ್ತೆ ರಂಪಾಟ ಪ್ರಕರಣದ ಎಫೆಕ್ಟ್‌: ಮಾಲೂರು ಜಡ್ಜ್‌ಗೆ ವರ್ಗಾವಣೆ





ಬೀದಿಯಲ್ಲಿ ಗಲಾಟೆ ಮಾಡಿಕೊಂಡು ಭಾರೀ ವಿವಾದಕ್ಕೆ ಕಾರಣವಾಗಿದ್ದ ಮಾಲೂರು ಪ್ರಧಾನ ಸಿವಿಲ್ ನ್ಯಾಯಾಧೀಶೆ ಗಾಯತ್ರಿ ಅವರನ್ನು ಹುಮನಾಬಾದ್‌ಗೆ ವರ್ಗಾವಣೆ ಮಾಡಲಾಗಿದೆ.


ವಿವಾದಿತ ಜಡ್ಜ್ ಗಾಯತ್ರಿ ಅವರ ವರ್ತನೆ ಬಗ್ಗೆ ವ್ಯಾಪಕ ಟೀಕೆ ಕೇಳಿಬಂದಿತ್ತು. ಆ ಪ್ರಕರಣದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ವಿವಾದ ಸೃಷ್ಟಿಯಾಗಿತ್ತು.


ಈ ಬಗ್ಗೆ ಹೈಕೋರ್ಟ್‌ ರಿಜಿಸ್ಟ್ರಾರ್ ಚಂದ್ರಶೇಖರ ರೆಡ್ಡಿ ಅವರು ಬುಧವಾರ ಅಧಿಸೂಚನೆ ಹೊರಡಿಸಿದ್ದು, ಗಾಯತ್ರಿ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹುಮನಾಬಾದ್‌ನಲ್ಲಿ ಖಾಲಿ ಇರುವ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.


ಮಾಲೂರು ನ್ಯಾಯಾಧೀಶರಾಗಿದ್ದ ಸಂದರ್ಭದಲ್ಲಿ ಗಾಯತ್ರಿ ಅವರು ತಮ್ಮ ಖಾಸಗಿ ಇನ್ನೋವಾ ಕಾರಿನಲ್ಲಿ ಸಾಗುತ್ತಿದ್ದಾಗ ರಸ್ತೆಯಲ್ಲಿ ಬಂದ ಯುವಕ ಕೆ.ಎಂ. ವಿನಯ್ ಎಂಬವರ ಜೊತೆಗೆ ದರ್ಪದಿಂದ ವರ್ತಿಸಿ ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಆರೋಪಕ್ಕೆ ಗುರಿಯಾಗಿದ್ದರು.


ಈ ಬಗ್ಗೆ ಬೆಂಗಳೂರು ವಕೀಲರ ಸಂಘ ಕೋಲಾರ ಜಿಲ್ಲೆಯ ಉಸ್ತುವಾರಿ ಮತ್ತು ಆಡಳಿತಾತ್ಮಕ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿಗೆ ಮನವಿ ಮಾಡಿತ್ತು.

Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu