-->
ನ್ಯಾಯವಾದಿಗಳ ಸಂರಕ್ಷಣಾ ಕಾಯ್ದೆ: ಮಸೂದೆ ಅಂಗೀಕಾರ, ವಕೀಲರ ಸ್ವಾಗತ

ನ್ಯಾಯವಾದಿಗಳ ಸಂರಕ್ಷಣಾ ಕಾಯ್ದೆ: ಮಸೂದೆ ಅಂಗೀಕಾರ, ವಕೀಲರ ಸ್ವಾಗತ

ನ್ಯಾಯವಾದಿಗಳ ಸಂರಕ್ಷಣಾ ಕಾಯ್ದೆ: ಮಸೂದೆ ಅಂಗೀಕಾರ, ವಕೀಲರ ಸ್ವಾಗತ


ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಮಸೂದೆ 2023ಕ್ಕೆ ಕರ್ನಾಟಕ ವಿಧಾನಸಭೆ ಅಂಗೀಕಾರ ನೀಡಿದೆ.ವಕೀಲರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತಡೆಯುವ ಉದ್ದೇಶದಿಂದ ಈ ಮಹತ್ವಾಕಾಂಕ್ಷಿ ಮಸೂದೆಯನ್ನು ಮಂಡಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವಿಧೇಯಕವನ್ನು ಸದನದಲ್ಲಿ ಮಂಡಿಸಿದರು.ರಾಜ್ಯದ ವಕೀಲರ ಸಮುದಾಯ ಈ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿ ವ್ಯಾಪಕ ಹೋರಾಟ ನಡೆಸಿತ್ತು. ಬೆಳಗಾವಿ ಚಲೋ, ರಾಜ್ಯ ರಾಜಧಾನಿಗೆ ಪಾದಯಾತ್ರೆ, ಬೆಂಗಳೂರು ಚಲೋ... ಹೀಗೆ ವಿವಿಧ ವಕೀಲರ ಸಂಘಗಳ ಹೋರಾಟದ ಫಲವಾಗಿ ಸರ್ಕಾರ ಈ ಕಾಯ್ದೆಯನ್ನು ಸದನದಲ್ಲಿ ಮಂಡಿಸಿತ್ತು.ವಕೀಲರ ಸಂರಕ್ಷಣೆಯ ಉದ್ದೇಶದಿಂದ ಮಂಡಿಸಲಾದ ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಮಸೂದೆ 2023 ಅಂಗೀಕಾರ ನೀಡಿರುವ ಕ್ಷಣವನ್ನು ಐತಿಹಾಸಿಕ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಬಣ್ಣಿಸಿದೆ. 


ಬೆಂಗಳೂರು ವಕೀಲರ ಸಂಘ(AAB), ಅಧಿವ್ಯಕ್ತ ಪರಿಷತ್, ಅಖಿಲ ಭಾರತ ವಕೀಲರ ಒಕ್ಕೂಟ(AILU)ದ ರಾಜ್ಯ ಘಟಕವೂ ಈ ಮಸೂದೆಯನ್ನು ಅಂಗೀಕರಿಸಿರುವುದನ್ನು ಸ್ವಾಗತಿಸಿದೆ.Historical Moment for Advocates of Karnataka..Ads on article

Advertise in articles 1

advertising articles 2

Advertise under the article