
ಪೊಲೀಸರು ಆರೋಪಿಗಳಿಗೆ ವಾಟ್ಸ್ಯಾಪ್, ಇಮೇಲ್ ಮೂಲಕ ನೋಟೀಸ್ ಕಳಿಸುವಂತಿಲ್ಲ- ಸುಪ್ರೀಂ ಕೋರ್ಟ್
Sunday, June 29, 2025
ಪೊಲೀಸರು ಆರೋಪಿಗಳಿಗೆ ವಾಟ್ಸ್ಯಾಪ್, ಇಮೇಲ್ ಮೂಲಕ ನೋಟೀಸ್ ಕಳಿಸುವಂತಿಲ್ಲ- ಸುಪ್ರೀಂ ಕೋರ್ಟ್
ಪೊಲೀಸರು ಆರೋಪಿಗಳಿಗೆ ಕಾನೂನುಬದ್ಧವಾಗಿ ನೀಡಬೇಕಿರುವ ಬಂಧನ ಪೂರ್ವ ನೋಟೀಸ್‌ಗಳನ್ನು ವಾಟ್ಸ್ಯಾಪ್, ಇಮೇಲ್ ಮೂಲಕ ನೋಟೀಸ್ ಕಳಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಎಂ.ಎಂ. ಸುಂದರೇಶ್ ಮತ್ತು ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ಪೊಲೀಸರು ಅಥವಾ ಕಾನೂನು ಜಾರಿ ಸಂಸ್ಥೆಗಳು ಆರೋಪಿಯನ್ನು ಬಂಧಿಸುವ ಮೊದಲು ಸಿಆರ್‌ಪಿಸಿ ಸೆಕ್ಷನ್ 41a ಅಥವಾ ಭಾರತೀಯ ನಾಗರಿಕ ಸುರಕ್ಷಾ ಸಂಹಿತ ಸೆಕ್ಷನ್ 35 ಪ್ರಕಾರ ನೀಡಬೇಕಾದ ನೋಟೀಸ್ ಜಾರಿ ವಿಧಾನ ನಿಗದಿತ ಸೇವಾ ವಿಧಾನದ ಮೂಲಕವೇ ತಲುಪಬೇಕು ಎಂದು ತಾಕೀತು ಮಾಡಿದೆ.
ಈ ತೀರ್ಪಿನ ಪ್ರತಿಯನ್ನು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಇಲಾಖೆಗೆ ತಲುಪಿಸುವಂತೆ ಸುಪ್ರೀಂ ಕೋರ್ಟ್‌ನ ರಿಜಸ್ಟ್ರಿಗೆ ನ್ಯಾಯಪೀಠ ಸೂಚನೆ ನೀಡಿದೆ.