
ಆರೋಪಿಗಳ ಜೊತೆಗಿನ ವಕೀಲರ ಸಂವಹನ: ಬಹಿರಂಗಪಡಿಸದಂತೆ ಕಾನೂನು ರಕ್ಷಣೆ- ಹೈಕೋರ್ಟ್ ತೀರ್ಪು
ಆರೋಪಿಗಳ ಜೊತೆಗಿನ ವಕೀಲರ ಸಂವಹನ: ಬಹಿರಂಗಪಡಿಸದಂತೆ ಕಾನೂನು ರಕ್ಷಣೆ- ಹೈಕೋರ್ಟ್ ತೀರ್ಪು
ವಕೀಲರು ತಮ್ಮ ಕಕ್ಷಿದಾರರೊಂದಿಗೆ ನಡೆಸುವ ಮಾತುಕತೆ ಮತ್ತು ಚರ್ಚೆಯನ್ನು ಬಹಿರಂಗಪಡಿಸುವಂತಿಲ್ಲ. ಅದಕ್ಕೆ ಕಾನೂನಿನ ರಕ್ಷಣೆ ಇದೆ ಎಂದು ಜಾರ್ಖಂಡ್ ಹೈಕೋರ್ಟ್ ತೀರ್ಪು ನೀಡಿದೆ.
ಅಗ್ನಿವ ಸರ್ಕಾರ್ ವಿರುದ್ಧ ಭಾರತ ಸರ್ಕಾರ ಮತ್ತಿತರರು ಪ್ರಕರಣದಲ್ಲಿ ಜಾರ್ಖಂಡ್ ಹೈಕೋರ್ಟ್ ನ್ಯಾಯಮೂರ್ತಿ ಆನಂದ್ ಸೇನ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ವಕೀಲರು ತಮ್ಮ ಕಕ್ಷಿದಾರರ ಜೊತೆಗೆ ಸಂವಹನ ನಡೆಸುವ ಸವಲತ್ತು ಪಡೆದುಕೊಂಡಿದ್ದಾರೆ. ಈ ಸಂವಹನ, ಮಾಹಿತಿಯನ್ನು ಬಹಿರಂಗಪಡಿಸುವಂತೆ ಒತ್ತಾಯಿಸುವಂತಿಲ್ಲ. ಅದರ ಗೌಪ್ಯತೆಗೆ ಕಾನೂನು ರಕ್ಷಣೆ ಇದೆ ಎಂಬುದನ್ನು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಪ್ರಕರಣವೊಂದರಲ್ಲಿ ಆರೋಪಿಗಳ ಪರ ವಕಾಲತ್ತು ಮಾಡಿದ್ದ ವಕೀಲರಿಗೆ ರೈಲ್ವೇ ಪೊಲೀಸರು ಸಮನ್ಸ್ ನೀಡಿರುವ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ, ಈ ಘಟನೆ ದುರದೃಷ್ಟಕರ ಮತ್ತು ಕಳವಳಕಾರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರ ಕ್ರಮದಿಂದ ನಾವು ವಿಚಲಿತರಾಗಿದ್ದೇವೆ ಎಂದು ನ್ಯಾಯಪೀಠ ನುಡಿಯಿತು.
ಕಕ್ಷಿದಾರರ ಸ್ಥಿತಿ ಏನೇ ಇರಲಿ, ವಕೀಲರು ಮತ್ತು ಕಕ್ಷಿದಾರರ ನಡುವಿನ ಮಾತುಕತೆ ವಿಶೇಷ ಸಂವಹನವಾಗಿದ್ದು, ಆರೋಪಿಯೊಂದಿಗೆ ತಾವು ಏನು ಸಂವಹನ ನಡೆಸಿದ್ದೇವೆ ಎಂಬುದನ್ನು ವಕೀಲರಿಗೆ ಯಾವುದೇ ತನಿಖಾಧಿಕಾರಿ ತನ್ನ ಮುಂದೆ ಬಹಿರಂಗಪಡಿಸುವಂತೆ ಒತ್ತಾಯಿಸುವಂತಿಲ್ಲ ಎಂದು ನ್ಯಾಯಪೀಠ ಪೊಲೀಸರಿಗೆ ಪಾಠ ಮಾಡಿದೆ.
ಅಗ್ನಿವ ಸರ್ಕಾರ್ ವಿರುದ್ಧ ಭಾರತ ಸರ್ಕಾರ ಮತ್ತಿತರರು
ಜಾರ್ಖಂಡ್ ಹೈಕೋರ್ಟ್, W.P. (Cr) 511/2025 Dated 25-07-2025