
ಸಂಜೆ ಕೋರ್ಟ್ ಪ್ರಸ್ತಾಪಕ್ಕೆ ವಿರೋಧ: ಬೆಂಗಳೂರು ವಕೀಲರ ಸಂಘದ ಪತ್ರ
ಸಂಜೆ ಕೋರ್ಟ್ ಪ್ರಸ್ತಾಪಕ್ಕೆ ವಿರೋಧ: ಬೆಂಗಳೂರು ವಕೀಲರ ಸಂಘದ ಪತ್ರ
ರಾಜ್ಯದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಸಂಜೆ ಕೋರ್ಟ್ ಪ್ರಸ್ತಾಪಕ್ಕೆ ಬೆಂಗಳೂರು ವಕೀಲರ ಸಂಘ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ಪ್ರಧಾನ ಜಿಲ್ಲಾ ನ್ಯಾಯಾಧೀಶರಿಗೆ ಬೆಂಗಳೂರು ವಕೀಲರ ಸಂಘ ಪತ್ರ ಬರೆದಿದೆ.
ವಕೀಲರಿಗೆ ವೃತ್ತಿ ಜೀವನ ಹಾಘೂ ಕೌಟುಂಬಿಕ ಜೀವನದ ಸಮತೋಲನ ಕಾಯ್ದುಕೊಳ್ಳಲು ಕಡಿಮೆ ಅವಕಾಶ ಇದೆ. ಇಂತಹ ಪರಿಸ್ಥಿತಿಯಲ್ಲಿ ವಕೀಲರು ಸಂಜೆ ನ್ಯಾಯಾಲಯಕ್ಕೆ ಸಮಯ ನೀಡುತ್ತಾರೆ ಎಂದು ನಿರೀಕ್ಷಿಸುವುದು ಸಮಂಜಸವಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.
ವಕೀಲರಿಗೆ ಈಗಾಗಲೇ ವೃತ್ತಿ ಜೀವನದ ಸಾಕಷ್ಟು ಒತ್ತಡವಿದೆ. ಅವರ ಜೀವನ ಮತ್ತು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ನ್ಯಾಯಾಲಯಗಳಲ್ಲಿ ಪ್ರಕರಣಗಳಿಗೆ ಕಾಯುವಿಕೆ, ಕಕ್ಷಿದಾರರು, ನ್ಯಾಯಾಧೀಶರು ಮತ್ತು ನ್ಯಾಯಾಲಯದ ಸಿಬ್ಬಂದಿಯಿಂದ ಎದುರಾಗುವ ಒತ್ತಡದಿಂದಾಗಿ ವಕೀಲರು ಅಧಿಕ ರಕ್ತದೊತ್ತಡ ಮತ್ತು ಇತರ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಪತ್ರದಲ್ಲಿ ವಿಷದಪಡಿಸಲಾಗಿದೆ.
ಈ ಎಲ್ಲ ಕಾರಣಗಳಿಂದ ರಾಜ್ಯದಲ್ಲಿ ಆರಂಭಿಸಲು ಉದ್ದೇಶಿಸಿರುವ ಸಂಜೆ ಕೋರ್ಟ್‌ಗೆ ವಕೀಲರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದ್ದು, ತಕ್ಷಣವೇ ಈ ಪ್ರಸ್ತಾಪವನ್ನು ಕೈಬಿಡಬೇಕು ಎಂದು ಬೆಂಗಳೂರು ವಕೀಲರ ಸಂಘ ಒತ್ತಾಯಿಸಿದೆ.