-->
'ಪತಿಯ ಮನೆಯಲ್ಲಿ ನೆಲೆಸುವುದು ಪತ್ನಿಯ ಹಕ್ಕು: ದೆಹಲಿ ಹೈಕೋರ್ಟ್‌

'ಪತಿಯ ಮನೆಯಲ್ಲಿ ನೆಲೆಸುವುದು ಪತ್ನಿಯ ಹಕ್ಕು: ದೆಹಲಿ ಹೈಕೋರ್ಟ್‌

'ಪತಿಯ ಮನೆಯಲ್ಲಿ ನೆಲೆಸುವುದು ಪತ್ನಿಯ ಹಕ್ಕು: ದೆಹಲಿ ಹೈಕೋರ್ಟ್‌





'ಪತಿಯ ಮನೆಯಲ್ಲಿ ನೆಲೆಸುವುದು ಪತ್ನಿಯ ಹಕ್ಕು' ಎಂದು ದೆಹಲಿ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.


ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಸಂಜೀವ್ ನರೂಲಾ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.


ಮದುವೆಯಾದ ನಂತರ ಮಹಿಳೆಯು ತನ್ನ ಪತಿಯ ಮನೆಯಲ್ಲಿ ನೆಲಸುವ ಹಕ್ಕನ್ನು ಪಡೆಯುತ್ತಾಳೆ. ಪತಿಯನ್ನು ಆತನ ಪೋಷಕರು ಮನೆಯಿಂದ ಹೊರಹಾಕಿದರೂ ಸೊಸೆಯು ಅ ಮನೆಯಲ್ಲಿ ಇರುವ ಹಕ್ಕನ್ನು ಹೊಂದಿರುತ್ತಾಳೆ ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.


ಮಹಿಳೆಯ ಅತ್ತೆ ಮತ್ತು ಮಾವ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಂಜೀವ್ ನರೂಲಾ ವಜಾಗೊಳಿಸಿ ಈ ತೀರ್ಪು ನೀಡಿದ್ದಾರೆ.


ಪ್ರಕರಣ ಏನು?

2010ರಲ್ಲಿ ಅರ್ಜಿದಾರರ ಮಗನ ವಿವಾಹವಾಗಿತ್ತು. ಬಳಿಕ ದಂಪತಿ ಮತ್ತು ಅರ್ಜಿದಾರರು ಒಂದೇ ಮನೆಯಲ್ಲಿ ವಾಸವಿದ್ದರು. ಒಂದು ವರ್ಷದ ಬಳಿಕ ಸಂಬಂಧ ಹಳಸಿ, ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಪರಸ್ಪರ ದಾಖಲಿಸಿಕೊಂಡಿದ್ದರು.


ಈ ಮಧ್ಯೆ ಅರ್ಜಿದಾರರು, ತಾವು ವಾಸವಿರುವ ನಿವಾಸವು ತಮ್ಮ ಸ್ವಯಾರ್ಜಿತವಾಗಿದ್ದು, ಇದರಲ್ಲಿ ಸೊಸೆಗೆ ವಾಸ ಮಾಡುವ ಹಕ್ಕಿಲ್ಲ ಎಂದು ಕೋರ್ಟ್‌ ಮೆಟ್ಟಿಲೇರಿದ್ದರು.

Ads on article

Advertise in articles 1

advertising articles 2

Advertise under the article