-->
ಬ್ಯಾಂಕ್ ಖಾತೆಗೆ ನಾಲ್ಕು ಜನರ ನಾಮನಿರ್ದೇಶನಕ್ಕೆ ಅವಕಾಶ: ಹೊಸ ನಿಯಮ ಇನ್ನೊಂದು ವಾರದಲ್ಲಿ ಜಾರಿಗೆ

ಬ್ಯಾಂಕ್ ಖಾತೆಗೆ ನಾಲ್ಕು ಜನರ ನಾಮನಿರ್ದೇಶನಕ್ಕೆ ಅವಕಾಶ: ಹೊಸ ನಿಯಮ ಇನ್ನೊಂದು ವಾರದಲ್ಲಿ ಜಾರಿಗೆ

ಬ್ಯಾಂಕ್ ಖಾತೆಗೆ ನಾಲ್ಕು ಜನರ ನಾಮನಿರ್ದೇಶನಕ್ಕೆ ಅವಕಾಶ: ಹೊಸ ನಿಯಮ ಇನ್ನೊಂದು ವಾರದಲ್ಲಿ ಜಾರಿಗೆ




ತನ್ನ ಬ್ಯಾಂಕ್ ಖಾತೆಗೆ ಗರಿಷ್ಠ ನಾಲ್ಕು ಮಂದಿಯನ್ನು ನಾಮನಿರ್ದೇಶನ ಮಾಡುವ ಸೌಲಭ್ಯವನ್ನು ಖಾತೆದಾರರಿಗೆ ನೀಡಲಾಗುವುದು. ಈ ಹೊಸ ನಿಯಮ 2025ರ ನವೆಂಬರ್ 1ರಿಂದ ಜಾರಿಗೆ ಬರಲಿದೆ.


ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಕಾನೂನುಗಳಿಗೆ ತಿದ್ದುಪಡಿ ತರಲಾಗಿದೆ. ನಾಮನಿರ್ದೇಶನಕ್ಕೆ ಸಂಬಂಧಿಸಿದ ನಿಯಮದಲ್ಲಿಯೂ ತಿದ್ದುಪಡಿ ಆಗಿದೆ.


ಖಾತೆಗಳಿಗೆ ಗ್ರಾಹಕರು ಗರಿಷ್ಠ ನಾಲ್ಕು ಮಂದಿಯ ಹೆಸರನ್ನು ನಾಮನಿರ್ದೇಶನ ಮಾಡಬಹುದು. ಇಷ್ಟು ಹೆಸರುಗಳನ್ನು ಒಂದೇ ಬಾರಿಗೆ ಅಥವಾ ಒಂದಾದ ನಂತರ ಇನ್ನೊಂದರಂತೆ ನಾಮನಿರ್ದೇಶನ ಮಾಡಲು ಅವಕಾಶ ಇದೆ. ಇದರಿಂದಾಗಿ ಠೇವಣಿದಾರರ ಹಾಗೂ ನಾಮನಿರ್ದೇಶಿತ ವ್ಯಕ್ತಿಗಳ ಕ್ಷೇಮ್ ಇತ್ಯರ್ಥ ಸರಳವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.


ಲಾಕರ್‌ಗಳಲ್ಲಿ ಇರುವ ವಸ್ತುಗಳಿಗೆ ಒಬ್ಬರ ನಂತರ ಇನ್ನೊಬ್ಬರ ಹೆಸರನ್ನು ನಾಮನಿರ್ದೇಶನ ಮಾಡಲು ಮಾತ್ರ ಅವಕಾಶ ಇದೆ.


'ಠೇವಣಿದಾರರು ನಾಲ್ಕು ಜನರ ಹೆಸರನ್ನು ನಾಮನಿರ್ದೇಶನ ಮಾಡಿ, ಪ್ರತಿ ವ್ಯಕ್ತಿಯು ಠೇವಣಿ ಮೊತ್ತದಲ್ಲಿ ಎಷ್ಟು ಪ್ರಮಾಣದ ಮೊತ್ತಕ್ಕೆ ಹಕ್ಕುದಾರ ಎಂಬುದನ್ನು ಸ್ಪಷ್ಟಪಡಿಸಬಹುದು' ಎಂದು ಪ್ರಕಟಣೆಯು ಹೇಳಿದೆ.


Ads on article

Advertise in articles 1

advertising articles 2

Advertise under the article