ಸಬ್ ಇನ್ಸ್‌ಪೆಕ್ಟರ್‌ನಿಂದ ಯುವ ವೈದ್ಯೆಯ ಅತ್ಯಾಚಾರ: ಡೆತ್ ನೋಟ್ ಬರೆದಿಟ್ಟು ವೈದ್ಯೆ ಆತ್ಮಹತ್ಯೆ
ಸಬ್ ಇನ್ಸ್‌ಪೆಕ್ಟರ್‌ನಿಂದ ಯುವ ವೈದ್ಯೆಯ ಅತ್ಯಾಚಾರ: ಡೆತ್ ನೋಟ್ ಬರೆದಿಟ್ಟು ವೈದ್ಯೆ ಆತ್ಮಹತ್ಯೆ
ಸಬ್ ಇನ್ಸ್‌ಪೆಕ್ಟರ್‌ವೊಬ್ಬ ಯುವ ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿದ ಹಿನ್ನೆಲೆಯಲ್ಲಿ ಮಾನಸಿಕ ಕಿರುಕುಳದಿಂದ ಬೇಸತ್ತ ವೈದ್ಯೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿದ ಘಟನೆ ಪುಣೆಯಲ್ಲಿ ನಡೆದಿದೆ.
ಸತಾರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ 28 ವರ್ಷದ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರು ಅತ್ಯಾಚಾರವೆಸಗಿ, ಮಾನಸಿಕ ಕಿರುಕುಳ ನೀಡಿದ್ದರು ಎಂದು ಅವರು ಸಾವಿಗೂ ಮುನ್ನ ಅಂಗೈನಲ್ಲಿ ಬರೆದಿಟ್ಟಿದ್ದಾರೆ.
ಪಲಠಾಣಾದಲ್ಲಿರುವ ಕೊಠಡಿಯೊಂದರಲ್ಲಿ ಹೋಟೆಲ್ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ವೈದ್ಯೆಯ ದೇಹವು ಪತ್ತೆಯಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೀಡ್ ಜಿಲ್ಲೆಯ ಪಲಠಾಣಾ ತಾಲ್ಲೂಕಿನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯೆ ಕೆಲಸಮಾಡುತ್ತಿದ್ದರು.
ವೈದ್ಯೆ ಉಲ್ಲೇಖಿಸಿದ ಅಧಿಕಾರಿಯನ್ನು ಅಮಾನತುಗೊಳಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತುಷಾರ್ ದೋಷಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ.
ಸತಾರ ಜಿಲ್ಲೆಯ ಸಬ್ ಇನ್‌ಸ್ಪೆಕ್ಟರ್ ಗೋಪಾಲ್ ಬದನೆ ಹಲವು ಬಾರಿ ಅತ್ಯಾಚಾರವೆಸಗಿ, ಲೈಂಗಿಕ ಕಿರುಕುಳ ನೀಡಿದ್ದಾರೆ. ಸಾಫ್ಟ್‌ವೇರ್ ಎಂಜಿನಿಯರ್ ಪ್ರಶಾಂತ್ ಬನಕರ್ ಮಾನಸಿಕ ಕಿರುಕುಳ ನೀಡಿದ್ದರು.
ಅಸ್ವಾಭಾವಿಕ ಸಾವಿನ ಪ್ರಕರಣದ ವೈದ್ಯಕೀಯ ವರದಿಯನ್ನು ಬದಲಾಯಿಸಲು ಹಾಗೂ ವೈದ್ಯಕೀಯ ಪರೀಕ್ಷೆಗಾಗಿ ಆರೋಪಿಗಳನ್ನು ಆಸ್ಪತ್ರೆಗೆ ಕರೆತಂದ ವೇಳೆ ವರದಿಯನ್ನು ಮಾರ್ಪಡಿಸುವಂತೆ ಒತ್ತಾಯಿಸಲಾಗುತ್ತಿತ್ತು' ಎಂದು ವೈದ್ಯೆಯು ಅಂಗೈನಲ್ಲಿ ಬರೆದಿದ್ದಾರೆ.
“ಆರೋಪಿ ಗೋಪಾಲ್ ವಿರುದ್ಧ ಅತ್ಯಾಚಾರ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆಯು ಅಂಗೈನಲ್ಲಿ ಬರೆದ ಎಲ್ಲಾ ಆರೋಪಗಳ ಕುರಿತಂತೆ, ತನಿಖೆ ನಡೆಸಲಾಗುವುದು' ತಿಳಿಸಿದ್ದಾರೆ.