ನ್ಯಾಯಪೀಠದ ಮುಂದೆ ಕೋಟ್ ಗೌನ್ ಧರಿಸದೆ ಹಾಜರು: ಯುವ ವಕೀಲರನ್ನು ತರಾಟೆಗೆ ತೆಗೆದುಕೊಂಡ ಕರ್ನಾಟಕ ಹೈಕೋರ್ಟ್
ನ್ಯಾಯಪೀಠದ ಮುಂದೆ ಕೋಟ್ ಗೌನ್ ಧರಿಸದೆ ಹಾಜರು: ಯುವ ವಕೀಲರನ್ನು ತರಾಟೆಗೆ ತೆಗೆದುಕೊಂಡ ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್ ಮುಂದೆ ಗೌನ್ ಧರಿಸದೆ ಕಲಾಪದಲ್ಲಿ ಭಾಗವಹಿಸಿದ ಯುವ ವಕೀಲರನ್ನು ನ್ಯಾಯಪೀಠ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಕರ್ನಾಟಕ ಹೈಕೋರ್ಟ್ ಮುಂದೆ ಗೌನ್ ಧರಿಸದೆ ಕಲಾಪದಲ್ಲಿ ಭಾಗವಹಿಸಿದ ಯುವ ವಕೀಲರನ್ನು ನ್ಯಾಯಪೀಠ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಗೌನ್ ಧರಿಸದೇ ನ್ಯಾಯಾಲಯದ ಮುಂದೆ ಬರಲು ನಿಮಗೆ ಎಷ್ಟು ಧೈರ್ಯ ಎಂದು ಯುವ ವಕೀಲೆಯನ್ನು ಹೈಕೋರ್ಟ್ ನ್ಯಾಯಪೀಠ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. “ರಾಜ್ಯ ವಕೀಲರ ಪರಿಷತ್‌ನಲ್ಲಿ ವಕೀಲರಾಗಿ ನೋಂದಣಿ ಮಾಡಿಕೊಂಡು ಮೂರು-ನಾಲ್ಕು ವರ್ಷ ಕಳೆದಿದೆ. ಆದರೂ ನ್ಯಾಯಪೀಠದ ಮುಂದೆ ಇದೇ ಚೇಷ್ಟೆ" ಎಂದು ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ನ್ಯಾಯಪೀಠ ಕಿಡಿಕಾರಿತು.
ಗೌನ್ ಧರಿಸದೇ ನ್ಯಾಯಾಲಯದ ಮುಂದೆ ಕಿರಿಯ ವಕೀಲೆಯೊಬ್ಬರನ್ನು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರು ಮಂಗಳವಾರ ತರಾಟೆಗೆ ತೆಗೆದುಕೊಂಡರು.
ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸುವಂತೆ ಕೋರಿ ಗೌನ್ ಧರಿಸದ ಮಹಿಳಾ ಯುವ ವಕೀಲರು ನ್ಯಾ. ಶ್ರೀಶಾನಂದ ಅವರ ಪೀಠದ ಮುಂದೆ ಮೆಮೊ ಸಲ್ಲಿಸಲು ಮುಂದಾದರು. “ನಿಮ್ಮ ಕೋಟ್ ಗೌನ್ ಎಲ್ಲಿ? ಅದೇ ಇಲ್ಲ? ಗೌನ್ ಇಲ್ಲದೇ ನ್ಯಾಯಾಲಯದ ಮುಂದೆ ಬರಲು ನಿಮಗೆ ಎಷ್ಟು ಧೈರ್ಯ?” ಎಂದು ನ್ಯಾಯಪೀಠ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿತು.
"ನಿಮ್ಮ ಹಿರಿಯ ವಕೀಲರು ಯಾರು? ಮೆಮೊ ಪಡೆದುಕೊಂಡು ಆ ಮೆಮೋವನ್ನು ರಿಜೆಕ್ಟ್ ಮಾಡಿ ಅದನ್ನು. ಏನು ನಿಮ್ಮ ಕತೆ? ಗೌನ್ ಇಲ್ಲದೇ ನ್ಯಾಯಾಲಯದ ಮುಂದೆ ಬರಲು ಎಷ್ಟು ಧೈರ್ಯ ನಿಮಗೆ? ಕೋರ್ಟ್ ಅಂದರೆ ಅಷ್ಟೊಂದು ತಮಾಷೆ ಎಂದುಕೊಂಡಿದ್ದೀರಾ? ನಿಮ್ಮ ಗೌನ್ ಎಲ್ಲಿ? ಆಫೀಸಿನಲ್ಲೇ ಬಿಟ್ಟು ಬಂದ್ರಾ?” ಎಂದು ನ್ಯಾಯಮೂರ್ತಿಗಳು ಕಿರಿಯ ವಕೀಲರಿಗೆ ಕಿವಿ ಹಿಂಡಿದರು.
"ಯಾವ ವರ್ಷದಲ್ಲಿ ನೋಂದಣಿಯಾಗಿದ್ದೀರಿ. ನೋಂದಣಿಯಾಗಿ ಮೂರು-ನಾಲ್ಕು ವರ್ಷವಾಗಿದೆ. ಆದರೂ ಇದೇ ಚೇಷ್ಟೆ. ಅವರ ಹೆಸರು ತೆಗೆದುಕೊಂಡು, ಅವರ ನೋಂದಣಿ ರದ್ದು ಮಾಡಲು ವಕೀಲರ ಪರಿಷತ್‌ಗೆ ಹೇಳಿ” ಎಂದು ಕೋರ್ಟ್ ಅಧಿಕಾರಿಯನ್ನು ಕುರಿತು ಹೇಳಿತು.
ಇದರಿಂದ ಬೆದರಿ ಹೋದ ಯುವ ವಕೀಲೆಯು ಬೇಷರತ್ ಕ್ಷಮೆ ಕೋರಿರು. ಇದನ್ನು ಪರಿಗಣಿಸಿ ಪೀಠವು ಅವರ ತುರ್ತು ವಿಚಾರಣೆಗೆ ಕೋರಿದ್ದ ಮೆಮೊವನ್ನು ಆಧರಿಸಿ ಅರ್ಜಿಯ ವಿಚಾರಣೆಯನ್ನು ಮೇ 7ಕ್ಕೆ ನಿಗದಿಪಡಿಸಲು ನಿರ್ದೇಶಿಸಿತು.