-->
ಸಹಾಯಕ ಸರ್ಕಾರಿ ಅಭಿಯೋಜಕರು, ಸರ್ಕಾರಿ ವಕೀಲರ ಮೌಖಿಕ ಪರೀಕ್ಷೆಗೆ ದಿನ ನಿಗದಿ

ಸಹಾಯಕ ಸರ್ಕಾರಿ ಅಭಿಯೋಜಕರು, ಸರ್ಕಾರಿ ವಕೀಲರ ಮೌಖಿಕ ಪರೀಕ್ಷೆಗೆ ದಿನ ನಿಗದಿ

ಸಹಾಯಕ ಸರ್ಕಾರಿ ಅಭಿಯೋಜಕರು, ಸರ್ಕಾರಿ ವಕೀಲರ ಮೌಖಿಕ ಪರೀಕ್ಷೆಗೆ ದಿನ ನಿಗದಿ

ಸಹಾಯಕ ಸರ್ಕಾರಿ ಅಭಿಯೋಜಕರು, ಸರ್ಕಾರಿ ವಕೀಲರ ಮೌಖಿಕ ಪರೀಕ್ಷೆಗೆ ದಿನ ನಿಗದಿ ಮಾಡಿ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ಪ್ರಕಟಣೆ ಹೊರಡಿಸಿದೆ.ಅಧಿಸೂಚನೆ ಸಂಖ್ಯೆ: ಡಿಪಿಎನ್/ನೇ.ಸ./09/2019-2020 ದಿನಾಂಕ 15-10-2022ರ ಪ್ರಕಾರ ಅರ್ಹ ಅಭ್ಯರ್ಥಿಗಳು ದಿನಾಂಕ 02-11-2022ರಿಂದ 05-11-2022 ಮತ್ತು 07-11-2022ರಿಂದ 10-11-2022ರ ವರೆಗೆ ಬೆಂಗಳೂರಿನಲ್ಲಿ ಮೌಖಿಕ ಪರೀಕ್ಷೆಗಳು ನಡೆಯಲಿದೆ.ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬೇಕಾದ ದಿನಾಂಕ, ಸ್ಥಳ ಮತ್ತು ಸಮಯವನ್ನು ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ತಮ್ಮ ಅರ್ಜಿಯಲ್ಲಿ ಕಾಣಿಸಿರುವ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಲಾಗುವುದು.ಮೌಖಿಕ ಪರೀಕ್ಷೆ ನಿಗದಿಪಡಿಸಲಾಗಿರುವ ದಿನಾಂಕವಾನ್ನು ಅನಿವಾರ್ಯ ಆಡಳಿತಾತ್ಮಕ ಕಾರಣಗಳಿಗಾಗಿ ಮಾರ್ಪಡಿಸುವ ಯಾ ಮುಂದೂಡುವ ಅಧಿಕಾರ ಆಯ್ಕೆ ಸಮಿತಿಗೆ ಇರುತ್ತದೆ.ಅಭ್ಯರ್ಥಿಗಳು ತಮ್ಮ ಸ್ವಂತ ವೆಚ್ಚದಲ್ಲಿ ಸಂದರ್ಶನಕ್ಕೆ ಹಾಜರಾಗತಕ್ಕದ್ದು. ಮೂಲ ದಾಖಲೆಗಳ ಸ್ವಯಂ ದೃಢೀಕೃತ ದಾಖಲೆಗಳ ದ್ವಿ ಪ್ರತಿಗಳನ್ನು ಮತ್ತು ಮೌಖಿಕ ಪರೀಕ್ಷೆಗೆ ಅಭ್ಯರ್ಥಿಗಳನ್ನು ಆಹ್ವಾನಿಸಿ ಕಳುಹಿಸಿರುವ ಮೂಲ ಪತ್ರವನ್ನು ಪರಿಶೀಲನೆಗಾಗಿ ಆಯ್ಕೆ ಸಮಿತಿ ಮುಂದೆ ತಪ್ಪದೆ ಹಾಜರುಪಡಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Ads on article

Advertise in articles 1

advertising articles 2

Advertise under the article