-->
ಸರ್ಕಾರಿ ಕಾಮಗಾರಿ: ಎಂಪಿ, ಎಂಎಲ್‌ಎ ಫ್ಲೆಕ್ಸ್‌, ಫೋಟೋ ಹಾಕಿದರೆ FIR ದಾಖಲಿಸಿ- ಹೈಕೋರ್ಟ್‌ ಖಡಕ್ ಸೂಚನೆ

ಸರ್ಕಾರಿ ಕಾಮಗಾರಿ: ಎಂಪಿ, ಎಂಎಲ್‌ಎ ಫ್ಲೆಕ್ಸ್‌, ಫೋಟೋ ಹಾಕಿದರೆ FIR ದಾಖಲಿಸಿ- ಹೈಕೋರ್ಟ್‌ ಖಡಕ್ ಸೂಚನೆ

ಸರ್ಕಾರಿ ಕಾಮಗಾರಿ: ಎಂಪಿ, ಎಂಎಲ್‌ಎ ಫ್ಲೆಕ್ಸ್‌, ಫೋಟೋ ಹಾಕಿದರೆ FIR ದಾಖಲಿಸಿ- ಹೈಕೋರ್ಟ್‌ ಖಡಕ್ ಸೂಚನೆ

ಸರ್ಕಾರಿ ಯೋಜನೆಗಳಲ್ಲಿ ಅನುದಾನ ನೀಡಿದ ಎಂಪಿ, ಎಂಎಲ್‌ಎ ಸಹಿತ ಜನಪ್ರತಿನಿಧಿಗಳ ಫೋಟೋ ಫ್ಲೆಕ್ಸ್ ಹಾಕುವುದು ರೂಢಿ. ಇದಕ್ಕೀಗ ಬ್ರೇಕ್ ಬಿದ್ದಿದೆ.ಸರ್ಕಾರಿ ವೆಚ್ಚದಲ್ಲಿ ಅಥವಾ ಸರ್ಕಾರದ ನೆರವಿನಿಂದ ಕೈಗೊಳ್ಳುವ ಯಾವುದೇ ಯೋಜನೆಗಳಲ್ಲಿ ಜನಪ್ರತಿನಿಧಿಗಳ ಫೋಟೋ ಹಾಕಿದರೆ ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳಿ ಎಂದು ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ.ಒಂದು ವೇಳೆ, ಇಂತಹ ಫ್ಲೆಕ್ಸ್‌ಗಳನ್ನು ಈಗಾಗಲೇ ಅಳವಡಿಸಿದ್ದರೆ ತಕ್ಷಣ ತೆರವುಗೊಳಿಸಿ ಎಂದು ಸೂಚಿಸಿರುವ ನ್ಯಾಯಪೀಠ, ಇಂತಹ ಫ್ಲೆಕ್ಸ್‌ಗಳು, ಅಭಿನಂದನಾ ಫೋಟೋಗಳು ಕಂಡುಬಂದರೆ ಅಂಥವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಖಡಕ್ ಸೂಚನೆ ನೀಡಿದೆ.ಸಾರ್ವಜನಿಕರು ನೀಡಿದ ತೆರಿಗೆ ಹಣದಿಂದ ಸರ್ಕಾರಿ ಕಾಮಗಾರಿಗಳು ನಡೆಯುತ್ತವೆ. ಅದನ್ನು ಈ ರಾಜಕಾರಣಿಗಳು ತಾವೇ ತಮ್ಮ ಕೈಯಿಂದ ಖರ್ಚು ಮಾಡಿದಂತೆ ಕಾಮಗಾರಿಯನ್ನು ನಾವೇ ನಡೆಸಿದ್ದೇವೆ ಎಂಬಂತೆ ಫೋಸ್ ನೀಡುತ್ತಿದ್ದಾರೆ. 

ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಇಂತಹ ವರಸೆಗಳು ಎಗ್ಗಿಲ್ಲದೆ ನಡೆಯುತ್ತದೆ. ಇದಕ್ಕೀಗ ಬ್ರೇಕ್ ಬಿದ್ದಿದ್ದು, ಜನ ನಿರುಮ್ಮಳರಾಗುವಂತೆ ಮಾಡಿದೆ.Ads on article

Advertise in articles 1

advertising articles 2

Advertise under the article