-->
ಸರ್ಕಾರಿ ನೌಕರರಿಗೆ ಭರ್ಜರಿ ಆಫರ್: 2023ರ ಮಾರ್ಚ್‌ಗೆ ಸಿಗಲಿದೆ ಸಿಹಿ ಸುದ್ದಿ

ಸರ್ಕಾರಿ ನೌಕರರಿಗೆ ಭರ್ಜರಿ ಆಫರ್: 2023ರ ಮಾರ್ಚ್‌ಗೆ ಸಿಗಲಿದೆ ಸಿಹಿ ಸುದ್ದಿ

ಸರ್ಕಾರಿ ನೌಕರರಿಗೆ ಭರ್ಜರಿ ಆಫರ್: 2023ರ ಮಾರ್ಚ್‌ಗೆ ಸಿಗಲಿದೆ ಸಿಹಿ ಸುದ್ದಿ





ಸರ್ಕಾರಿ ನೌಕರರು ಬಹು ಸಮಯದಿಂದ ನಿರೀಕ್ಷಿಸುತ್ತಿರುವ ವಿಚಾರವಿದು. ಕರ್ನಾಟಕ ಸರ್ಕಾರ ತನ್ನ ನೌಕರರ ವೇತನ ಪರಿಷ್ಕರಣೆ ಮಾಡಲು ಏಳನೇ ವೇತನ ಆಯೋಗವನ್ನು ರಚಿಸಿದೆ.



ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ನೇತೃತ್ವದಲ್ಲಿ ವೇತನ ಆಯೋಗವನ್ನು ರಚಿಸಲಾಗಿದ್ದು, ತ್ವರಿತವಾಗಿ ವಿಚಾರ ವಿಮರ್ಶೆ ಮಾಡಿ ಮಧ್ಯಂತರ ವರದಿಯನ್ನು ನೀಡುವಂತೆ ಆಯೋಗವನ್ನು ಸರ್ಕಾರ ಕೇಳಿಕೊಂಡಿದೆ. ಈ ಮಧ್ಯಂತರ ವರದಿಯನ್ನು 2023ರ ಮಾರ್ಚ್ ವೇಳೆ ಜಾರಿಗೊಳಿಸುವ ಭರವಸೆಯನ್ನೂ ಸರ್ಕಾರ ನೀಡಿದೆ.



ರಾಜ್ಯ ಸರ್ಕಾರಿ ನೌರರ ವೇತನ ಪರಿಷ್ಕರಣೆ ಮತ್ತು ಇತರ ಸೌಲಭ್ಯಗಳ ವಿಸ್ತರಣೆಗೆ ಈ ಆಯೋಗದ ವರದಿಯನ್ನು ಶಿಫಾರಸ್ಸನ್ನು ನಿರೀಕ್ಷಿಸಲಾಗಿದೆ.



ನವೆಂಬರ್ ಅಂತ್ಯದೊಳಗೆ ವೇತನ ಆಯೋಗವನ್ನು ರಚಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ. ಎರಡು ದಿನಗಳ ಹಿಂದಷ್ಟೇ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಅವರ ನೇತೃತ್ವದ ನಿಯೋಗದ ಜೊತೆ ಮುಖ್ಯಮಂತ್ರಿಯವರು ಮಾತುಕತೆ ನಡೆಸಿದ್ದರು.

ಏಳನೇ ವೇತನ ಆಯೋಗದ ಶಿಫಾರಸ್ಸಿನಿಂದ 13.5 ಲಕ್ಷ ಮಂದಿ ಹಾಲಿ ಹಾಗೂ ಮಾಜಿ ಸರ್ಕಾರಿ ನೌಕರರಿಗೆ ಅನುಕೂಲವಾಗಲಿದೆ.



ಸುಮಾರು ಆರು ಲಕ್ಷ ಮಂದಿ ಸರ್ಕಾರಿ ನೌಕರರು, ನಿಗಮ-ಮಂಡಳಿ, ಪ್ರಾಧಿಕಾರಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮೂರು ಲಕ್ಷ ಮಂದಿ ಮತ್ತು ಪಿಂಚಣಿ ಪಡೆಯುತ್ತಿರುವ 4.5 ಲಕ್ಷ ನಿವೃತ್ತರಿಗೆ ಈ ವೇತನ ಆಯೋಗದ ಶಿಫಾರಸ್ಸುಗಳು ಅನ್ವಯಿಸಲಿವೆ.



ಐದು ವರ್ಷಕ್ಕೂ ಕಡಿಮೆ ಅಂತರದಲ್ಲಿ ವೇತನ ಆಯೋಗ ರಚನೆಯಾಗುತ್ತಿರುವುದು ಇತಿಹಾಸಲ್ಲಿ ಇದೇ ಮೊದಲ ಬಾರಿ. ಒಂದು ಅಂದಾಜಿನ ಪ್ರಕಾರ, ಆಯೋಗದ ವರದಿಯಿಂದ ಶೇ. 40ರಷ್ಟು ವೇತನ ಹೆಚ್ಚಳ ಆಗುವ ನಿರೀಕ್ಷೆ ಇದೆ.




ಇದನ್ನೂ ಓದಿ

ಖಾಸಗಿ ಜಮೀನುಗಳಲ್ಲಿ ನೆಲೆಸಿದವರಿಗೂ ಹಕ್ಕುಪತ್ರ: ಮಹತ್ವದ ಸುತ್ತೋಲೆ


Ads on article

Advertise in articles 1

advertising articles 2

Advertise under the article