-->
ಜನನ ಮರಣ ನೋಂದಣಿ ತಿದ್ದುಪಡಿ: ಜೆಎಂಎಫ್‌ಸಿ ನ್ಯಾಯಾಲಯದ ಬದಲು ಎಸಿ ಕೋರ್ಟ್‌ ವ್ಯಾಪ್ತಿಗೆ

ಜನನ ಮರಣ ನೋಂದಣಿ ತಿದ್ದುಪಡಿ: ಜೆಎಂಎಫ್‌ಸಿ ನ್ಯಾಯಾಲಯದ ಬದಲು ಎಸಿ ಕೋರ್ಟ್‌ ವ್ಯಾಪ್ತಿಗೆ

ಜನನ ಮರಣ ನೋಂದಣಿ ತಿದ್ದುಪಡಿ: ಜೆಎಂಎಫ್‌ಸಿ ನ್ಯಾಯಾಲಯದ ಬದಲು ಎಸಿ ಕೋರ್ಟ್‌ ವ್ಯಾಪ್ತಿಗೆ

ಜನನ ಮತ್ತು ಮರಣ ನೋಂದಣಿ ತಿದ್ದುಪಡಿಗೆ ಸಂಬಂಧಿಸಿದ ನ್ಯಾಯಾಂಗದ ವ್ಯಾಪ್ತಿಯನ್ನು ಬದಲಾಯಿಸಲಾಗಿದೆ. ಕರ್ನಾಟಕ ಸರ್ಕಾರ ಈ ಬಗ್ಗೆ ಮಹತ್ವದ ಅಧಿಸೂಚನೆ ಪ್ರಕಟಿಸಿದೆ. 


ಜನನ ಮತ್ತು ಮರಣ ನೋಂದಣಿ ತಿದ್ದುಪಡಿಗೆ ಈ ಹಿಂದೆ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ (ಜೆಎಂಎಫ್‌ಸಿ) ನ್ಯಾಯಾಲಯದ ವ್ಯಾಪ್ತಿಗೆ ಇತ್ತು. ಅದಕ್ಕೆ ಬದಲಾಗಿ ಇನ್ನು ಮುಂದೆ ಉಪ ವಿಭಾಗಾಧಿಕಾರಿ ನ್ಯಾಯಾಲಯ (ಎಸಿ ಕೋರ್ಟ್‌)ಕ್ಕೆ ಪ್ರಕರಣಗಳನ್ನು ಇತ್ಯರ್ಥಪಡಿಸುವ ಅಧಿಕಾರವನ್ನು ನೀಡಲಾಗಿದೆ.ರಾಜ್ಯ ಸರ್ಕಾರ ಈ ಬಗ್ಗೆ ದಿನಾಂಕ 18-07-2022ರಂದು ಮಹತ್ವದ ಅಧಿಸೂಚನೆಯನ್ನು ಹೊರಡಿಸಿದ್ದು, ಇದರಲ್ಲಿ ದಾವೆಯ ಕಾರ್ಯವ್ಯಾಪ್ತಿಯನ್ನು ಬದಲಾಯಿಸಲಾಗಿದೆ.ಈ ಹಿಂದೆ ಜನನ ಅಥವಾ ಮರಣ ವಹಿಯಲ್ಲಿ ತಡ ನೋಂದಣಿ ಕುರಿತ ಯಾವುದೇ ವಿವಾದಗಳನ್ನು ಜುಡೀಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಬಗೆಹರಿಸಬಹುದಿತ್ತು.

ಅದರೆ, ಇನ್ನು ಮುಂದೆ ಇದನ್ನು ಮಾನ್ಯ ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲೇ ಬಗೆಹರಿಸಬೇಕಾಗಿದೆ.


ಅಧಿಸೂಚನೆಯ ವಿವರ

ಕರ್ನಾಟಕ ಸರ್ಕಾರದ ಅಧಿಸೂಚನೆ: No. PDS 66 SSM 2022 Dated: 18-07-2022ನಿಯಮದ ಕಲಮು 30 ಉಪ ಕಲಮು 1ರ ಅಡಿಯಲ್ಲಿ ಪ್ರದತ್ತ ಅಧಿಕಾರವನ್ನು ಚಲಾಯಿಸಿ ಈ ತಿದ್ದುಪಡಿ ಮಾಡಲಾಗಿದ್ದು, ನಿಯಮವನ್ನು ಇನ್ನು ಮುಂದೆ ಕರ್ನಾಟಕ ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ನಿಯಮ-2022 ಎಂದು ಬದಲಾಯಿಸಲಾಗಿದೆ.

Ads on article

Advertise in articles 1

advertising articles 2

Advertise under the article