-->
ವೀಲುನಾಮೆಯ ದೃಢೀಕರಣ ಹೇಗೆ..?: ನ್ಯಾಯಾಲಯದಲ್ಲಿ ವೀಲು ಪತ್ರದ ಸಾಕ್ಷಿಯ ವಿಚಾರಣೆಯ ಮಹತ್ವವೇನು..?

ವೀಲುನಾಮೆಯ ದೃಢೀಕರಣ ಹೇಗೆ..?: ನ್ಯಾಯಾಲಯದಲ್ಲಿ ವೀಲು ಪತ್ರದ ಸಾಕ್ಷಿಯ ವಿಚಾರಣೆಯ ಮಹತ್ವವೇನು..?

ವೀಲುನಾಮೆಯ ದೃಢೀಕರಣ ಹೇಗೆ..? ನ್ಯಾಯಾಲಯದಲ್ಲಿ ವೀಲು ಪತ್ರದ ಸಾಕ್ಷಿಯ ವಿಚಾರಣೆಯ ಮಹತ್ವವೇನು..?

ಯಾವುದೇ ವೀಲುನಾಮೆ, ವಿಲ್ ಅಥವಾ ಮರಣಶಾಸನವನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಿಸಲು ಈ ದಾಖಲೆ ಪತ್ರಕ್ಕೆ ಸಾಕ್ಷಿಯಾಗಿ ಸಹಿ ಹಾಕಿರುವ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಸಾಕ್ಷಿಗಳಲ್ಲಿ ಒಬ್ಬರನ್ನಾದರೂ ವಿಚಾರಣೆ ಮಾಡಲೇಬೇಕು.ಒಂದು ವೇಳೆ, ಸಾಕ್ಷಿಗಳಲ್ಲಿ ಯಾರಾದರೂ ಮೃತಪಟ್ಟಿದ್ದರೆ, ಅಂತಹ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡುವುದು ಉತ್ತಮ. ಮರಣಪತ್ರ (Death Certificate) ದಾಖಲೆಯನ್ನು ಸಲ್ಲಿಸಿದರೆ ಉತ್ತಮ.ಮೃತಪಟ್ಟ ಸಾಕ್ಷಿಗಳ ಪತ್ನಿ, ಪತಿ ಯಾ ಮಕ್ಕಳು ಸಮೀಪದ ಸಂಬಂಧಿಗಳನ್ನು ಸಾಕ್ಷಿಗಳನ್ನಾಗಿ ಮಾಡಿ ಸಾಕ್ಷಿಯಾಗಿ ಸಹಿ ಮಾಡಿದ ವ್ಯಕ್ತಿಯ ಸಹಿಯನ್ನು ಗುರುತಿಸಬೇಕು.ಇನ್ನು ಒಬ್ಬ ಸಾಕ್ಷಿ ಬದುಕಿದ್ದರೆ ಅವರ ಸಾಕ್ಷಿ ವಿಚಾರಣೆ ಮಾಡಲೇ ಬೇಕಾಗುತ್ತದೆ. ಒಂದು ವೇಳೆ, ಆ ಬದುಕಿದ್ದ ಸಾಕ್ಷಿ ನ್ಯಾಯಾಲಯಕ್ಕೆ ಬಂದು ಸಾಕ್ಷಿ ಹೇಳುವ ಪರಿಸ್ಥಿತಿ ಇಲ್ಲ ಎಂದಾದರೆ ಪರ್ಯಾಯ ಸಾಕ್ಷಿಗಳ ಮೂಲಕ ನ್ಯಾಯಾಲಯಕ್ಕೆ ಪ್ರಸ್ತುತಪಡಿಸಬಹುದು.ಈ ಸಾಕ್ಷಿಯ ವಯಸ್ಸು, ಆರೋಗ್ಯ, ಅವರ ಮಾನಸಿಕ ಮತ್ತು ದೈಹಿಕ ಸ್ಥಿತಿಯ ಬಗ್ಗೆ ಅವರ ಮಕ್ಕಳಲ್ಲಿ ಯಾರಾದರೂ ಒಬ್ಬರ ಮೂಲಕ ನ್ಯಾಯಾಲಯದಲ್ಲಿ ಹೇಳಿಸಬಹುದು. ಇಲ್ಲವೇ, ಅವರಿಗೆ ಸಾಕ್ಷಿ ಹೇಳುವ ನಿಟ್ಟಿನಲ್ಲಿ ಕೋರ್ಟ್ ಕಮಿಷನರ್ ಮೂಲಕ ಸಾಕ್ಷಿ ಹೇಳಿಸಿ ಸಾಬೀತುಪಡಿಸಬಹುದು.ಹೀಗೆ, ಸಾಕ್ಷಿದಾರರ ಮಕ್ಕಳಲ್ಲಿ ಯಾರಾದರೂ ಒಬ್ಬರ ಮೂಲಕ ಸಾಕ್ಷಿಯ ಸಹಿಯನ್ನು ಗುರುತಿಸಲು ಅವಕಾಶ ಕೊಡದಿದ್ದರೆ ಸಾಕ್ಷಿ ಮುಂದೆ ತೀರಿಕೊಂಡ ನಂತರವಾದರೂ ಅವರ ಮಕ್ಕಳಲ್ಲಿ ಯಾರಾದರೂ ಒಬ್ಬರ ಮೂಲಕ ಈ ಎಲ್ಲ ಪ್ರಯತ್ನವನ್ನು ಮಾಡಬೇಕಾಗುತ್ತದೆ.ವಿಲ್ ಸಾಕ್ಷಿಗಳ ವಿಚಾರಣೆಯ ಬಗ್ಗೆ ವಿಲ್ ದೃಢಪಡಿಸುವ ಪ್ರಕರಣದಲ್ಲಿ ವಿಚಾರಣೆ ಹೇಗೆ ಮಾಡಬಹುದು ಎಂಬ ಬಗ್ಗೆ ಸುಪ್ರೀಂ ಕೋರ್ಟ್ ಇತ್ತೀಚಿನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಈ ತೀರ್ಪುಗಳ ಸಾರಾಂಶವನ್ನು ಓದಿ ವೀಲುನಾಮೆಯ ದೃಢೀಕರಣ ಹೇಗೆ ಎಂಬುದನ್ನು ತಿಳಿಯಬಹುದಾಗಿದೆ.

Ads on article

Advertise in articles 1

advertising articles 2

Advertise under the article