-->
Hindu Law- ಎರಡನೇ ಪತ್ನಿ ಮಕ್ಕಳೂ ಅನುಕಂಪದ ನೌಕರಿಗೆ ಅರ್ಹರು: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

Hindu Law- ಎರಡನೇ ಪತ್ನಿ ಮಕ್ಕಳೂ ಅನುಕಂಪದ ನೌಕರಿಗೆ ಅರ್ಹರು: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು


ಎರಡನೇ ಪತ್ನಿ ಮಕ್ಕಳೂ ಅನುಕಂಪದ ನೌಕರಿಗೆ ಅರ್ಹರು: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು




ಎರಡನೇ ಪತ್ನಿ ಮಕ್ಕಳು ಕೂಡ ಅನುಕಂಪದ ಆಧಾರದಲ್ಲಿ ತಂದೆಯ ನೌಕರಿ ಪಡೆಯಲು ಅರ್ಹರು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.



ಪೋಷಕರ ಸಂಬಂಧ ಅನಧಿಕೃತ ಇರಬಹುದು. ಆದರೆ, ಅವರ ಮಕ್ಕಳು ಅನಧಿಕೃತ ಅಲ್ಲ. ಹೀಗಾಗಿ ಎರಡನೇ ಪತ್ನಿ ಮಕ್ಕಳಿಗೂ ಅನುಕಂಪದ ಆಧಾರದ ಮೇಲೆ ನೌಕರಿ ಪಡೆಯಲು ಸಂಪೂರ್ಣ ಅಧಿಕಾರ ಇದೆ ಎಂದು ನ್ಯಾಯಪೀಠ ಹೇಳಿದೆ.



ಹಿರಿಯ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದ್ದು, ಆದೇಶ ಹೊರಡಿಸಿದ ಎರಡು ತಿಂಗಳಲ್ಲಿ ಉದ್ಯೋಗ ನೀಡಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಹೇಳಿದೆ.


ಪ್ರಕರಣ: ಕೆ. ಸಂತೋಷ್‌ Vs ಬೆಸ್ಕಾಂ ಪ್ರಕರಣ

K. Santhosha Vs. The Karnataka Power Transmission Corporation Limited and Ors.

ಕರ್ನಾಟಕ ಹೈಕೋರ್ಟ್ WRIT APPEAL No.2495/2019 (S – RES) dated 24-06-2021


1954ರ ವಿಶೇಷ ವಿವಾಹ ಕಾಯ್ದೆಯಿಂದಾಗಿ ಮದುವೆ ಸಂಬಂಧಿಸಿದ ಕಾನೂನುಗಳನ್ನು ಏಕರೂಪಗೊಳಿಸಲಾಗಿದೆ. ಭಾರತೀಯ ಸಂವಿಧಾನದ ಕಲಂ 44 ಹಾಗೂ ವಿ.ಆರ್. ತ್ರಿಪಾಠಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಹೈಕೋರ್ಟ್ ನ್ಯಾಯಪೀಠ ಉಲ್ಲೇಖಿಸಿದೆ.





ಪ್ರಕರಣದ ಹಿನ್ನೆಲೆ

2014ರಲ್ಲಿ ಬೆಸ್ಕಾಂ ಉದ್ಯೋಗಿ ರಾಮನಗರದ ನಿವಾಸಿ ಮೃತಪಟ್ಟಿದ್ದರು. ಅವರ ಎರಡನೇ ಪತ್ನಿ ಮಗ ಸಂತೋಷ್ ಅನುಕಂಪದ ಆಧಾರದಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಬೆಸ್ಕಾಂ 2015ರಲ್ಲಿ ತಿರಸ್ಕರಿಸಿತ್ತು. ಕೆಪಿಟಿಸಿಎಲ್ ಸುತ್ತೋಲೆಯ ಕಾರಣ ನೀಡಿ ಬೆಸ್ಕಾಂ ಅರ್ಜಿ ತಿರಸ್ಕರಿಸಿತ್ತು.



ಬೆಸ್ಕಾಂ ನಿರ್ಣಯ ಹಾಗೂ ಕೆಪಿಟಿಸಿಎಲ್‌ನ ಸುತ್ತೋಲೆಯನ್ನು ಪ್ರಶ್ನಿಸಿ ಸಂತೋಷ್ ನ್ಯಾಯಾಲಯದ ಮೊರೆ ಹೋಗಿದ್ದರು.


ಏಕ ಸದಸ್ಯ ಪೀಠ ಬೆಸ್ಕಾಂ ಕ್ರಮವನ್ನು ಸಮರ್ಥಿಸಿತ್ತು. ಇದನ್ನು ಪ್ರಶ್ನಿಸಿ ಸಂತೋಷ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದರು. 



Read Judgement:

ಪ್ರಕರಣ: ಕೆ. ಸಂತೋಷ್‌ Vs ಬೆಸ್ಕಾಂ ಪ್ರಕರಣ


Ads on article

Advertise in articles 1

advertising articles 2

Advertise under the article