-->
Allahabad HC on Police discipline - ಪೊಲೀಸ್ ಪಡೆ ಜಾತ್ಯತೀತ ಆಗಿರಬೇಕು, ಗಡ್ಡ ಬಿಡುವುದು ಮೂಲಭೂತ ಹಕ್ಕಲ್ಲ- ಅಲಹಾಬಾದ್ ಹೈಕೋರ್ಟ್

Allahabad HC on Police discipline - ಪೊಲೀಸ್ ಪಡೆ ಜಾತ್ಯತೀತ ಆಗಿರಬೇಕು, ಗಡ್ಡ ಬಿಡುವುದು ಮೂಲಭೂತ ಹಕ್ಕಲ್ಲ- ಅಲಹಾಬಾದ್ ಹೈಕೋರ್ಟ್

ಪೊಲೀಸ್ ಪಡೆ ಜಾತ್ಯತೀತ ಆಗಿರಬೇಕು, ಗಡ್ಡ ಬಿಡುವುದು ಮೂಲಭೂತ ಹಕ್ಕಲ್ಲ- ಅಲಹಾಬಾದ್ ಹೈಕೋರ್ಟ್







ಪೊಲೀಸ್ ಪಡೆ ಜಾತಿ, ಧರ್ಮಗಳನ್ನು ಮೀರಿ ನಿಲ್ಲಬೇಕು. ಜಾತಿ ಧರ್ಮಗಳ ಹೆಸರಲ್ಲಿ ಪೊಲೀಸರು ಶಿಸ್ತು ಮೀರುವಂತಿಲ್ಲ. ಪೊಲೀಸರು ಜಾತ್ಯಾತೀತವಾಗಿರಬೇಕು, ಹಾಗಾಗಿ, ಧರ್ಮದ ಹೆಸರಲ್ಲಿ ಗಡ್ಡ ಬಿಡುವುದುದು ಅವರ ಮೂಲಭೂತ ಹಕ್ಕು ಅಲ್ಲ.


ಹಾಗಂತ ಅಲಹಾಬಾದ್ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.






ಉತ್ತರ ಪ್ರದೇಶದ ಪೊಲೀಸ್ ಸಿಬ್ಬಂದಿ ಮೊಹಮ್ಮದ್ ಫರ್ಮಾನ್ ಎಂಬವರು ಹಿರಿಯ ಅಧಿಕಾರಿಗಳ ಸೂಚನೆಯನ್ನು ಧಿಕ್ಕರಿಸಿ ಗಡ್ಡ ತೆಗೆದಿರಲಿಲ್ಲ. ಅವರು ಮೇಲಾಧಿಕಾರಿಗಳ ವಿರುದ್ಧ ಹೈಕೋರ್ಟ್‌ಗೆ ರಿಟ್ ಸಲ್ಲಿಸಿದ್ದರು.


ಇದರ ವಿಚಾರಣೆ ನಡೆಸಿದ ಹೈಕೋರ್ಟ್ ಈ ಮಹತ್ವದ ಆದೇಶ ನೀಡಿದೆ. ಪೊಲೀಸ್ ಪಡೆ ಶಿಸ್ತಿನ ಇಲಾಖೆ. ಶಿಸ್ತಿನ ಇಲಾಖೆಯಲ್ಲಿ ಗಡ್ಡ ಬಿಡುವುದು ಮೂಲಭೂತ ಹಕ್ಕು ಅಲ್ಲ ಎಂದು ತೀರ್ಪಿನಲ್ಲಿ ಹೇಳಿದೆ.


ಸಂವಿಧಾನದ 25ನೇ ವಿಧಿಯ ಪ್ರಕಾರ ಯಾವುದೇ ವ್ಯಕ್ತಿಗೆ ತನ್ನಿಚ್ಚೆಯಂತೆ ಬದುಕಲು ಹಕ್ಕಿದೆ. ಅವರಿಚ್ಚೆಯ ವೃತ್ತಿ, ಇಷ್ಟದ ಧರ್ಮ ಅನುಸರಿಸಲು ಹಕ್ಕಿದೆ. ಹಾಗಂತ ಎಲ್ಲ ಸಂದರ್ಭಗಳಲ್ಲಿ ಇಷ್ಟದ ಧರ್ಮ ಅನುಸರಿಸಲು ಹಕ್ಕು ಇರುವುದಿಲ್ಲ ಎಂದು ಅರ್ಜಿದಾರರ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದೆ.


Ads on article

Advertise in articles 1

advertising articles 2

Advertise under the article