fine to bank, if ATM having no cash-RBI | ಎಟಿಎಂನಲ್ಲಿ ನಗದು ಇಲ್ಲದಿದ್ದರೆ ಬ್ಯಾಂಕ್‌ಗೆ ದಂಡ: ಆರ್‌ಬಿಐ ಆದೇಶ
Thursday, August 12, 2021
ಎಟಿಎಂ ಯಂತ್ರಗಳಲ್ಲಿ ಹಣ ಇಲ್ಲದೆ ಪರದಾಟ ಮಾಡುವ ಗ್ರಾಹಕರ ಸಂಕಷ್ಟ ಈಗ ಬ್ಯಾಂಕ್‌ಗಳಿಗೆ ದುಬಾರಿಯಾಗಿ ಪರಿಣಮಿಸಲಿದೆ. ಎಟಿಎಂನಲ್ಲಿ ಹಣ ಇಲ್ಲದಿದ್ದರೆ ಆ ಬ್ಯಾಂಕ್‌ಗೆ ದಂಡ ವಿಧಿಸುವ ಹೊಸ ನಿಯಮವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಜಾರಿಗೆ ತಂದಿದೆ.
2021ರ ಅಕ್ಟೋಬರ್ 1ರಿಂದ ಈ ನಿಯಮ ಜಾರಿಗೆ ಬಂದಿದೆ. ಒಂದು ತಿಂಗಳ ಅವಧಿಯಲ್ಲಿ ಒಟ್ಟು 10 ಗಂಟೆಗಳ ಕಾಲ ಹಣ ಇಲ್ಲದಿದ್ದರೆ ಆ ಎಟಿಎಂ ಸ್ಥಾಪಿಸಿದ ಬ್ಯಾಂಕ್‌ಗೆ 10 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು ಎಂದು ಆರ್‌ಬಿಐ ಹೇಳಿದೆ.
ಯಾವ ಎಟಿಎಂನಲ್ಲಿ ಹಣ ಇರುವುದಿಲ್ಲವೋ ಆ ಬ್ಯಾಂಕ್ ದಂಡವನ್ನು ಪಾವತಿಸಬೇಕು. ಈ ನಿಯಮ ವಿವಿಧ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿ ಇರುವ ಎಟಿಎಂಗಳಿಗೂ ಅನ್ವಯವಾಗುತ್ತದೆ.