-->
Action sought on Doctor | ವಿಮೆ ಹಣಕ್ಕಾಗಿ ಸುಳ್ಳು ಪ್ರಮಾಣ ಪತ್ರ: ವೈದ್ಯರ ವಿರುದ್ಧ ತನಿಖೆಗೆ ಹೈಕೋರ್ಟ್ ನಿರ್ದೇಶನ | 6-07-2021

Action sought on Doctor | ವಿಮೆ ಹಣಕ್ಕಾಗಿ ಸುಳ್ಳು ಪ್ರಮಾಣ ಪತ್ರ: ವೈದ್ಯರ ವಿರುದ್ಧ ತನಿಖೆಗೆ ಹೈಕೋರ್ಟ್ ನಿರ್ದೇಶನ | 6-07-2021




ವಿಮೆ ಹಣಕ್ಕಾಗಿ ಸುಳ್ಳು ಪ್ರಮಾಣ ಪತ್ರ: ವೈದ್ಯರ ವಿರುದ್ಧ ತನಿಖೆಗೆ ಹೈಕೋರ್ಟ್ ನಿರ್ದೇಶನ 


ಓರಿಯಂಟರ್ ಇನ್ಶೂರೆನ್ಸ್‍ ಕಂಪೆನಿ Vs ಹನುಮಂತಪ್ಪ


ಕರ್ನಾಟಕ ಹೈಕೋರ್ಟ್ (ಧಾರವಾಡ ಪೀಠ)


MFA No 20815 of 2009


Justice P Krishna Bhat


Order Dated; 6-07-2021


ಈ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರು ನೀಡಿದ ಪ್ರಮಾಣ ಪತ್ರ ದೋಷಯುಕ್ತವಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, ವೈದ್ಯರ ದುರ್ನಡತೆ ಮತ್ತು ಕರ್ತವ್ಯ ಲೋಪದ ಬಗ್ಗೆ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಕರ್ನಾಟಕ ವೈದ್ಯಕೀಯ ಮಂಡಳಿಗೆ ನಿರ್ದೇಶನ ನೀಡಿದೆ.


ಪ್ರಕರಣದಲ್ಲಿ ವೈದ್ಯ ಡಾ. ಉಮಾನಾಥ್ ಆರ್. ಉಳ್ಳಾಲ್ ಅವರು ಗಾಯದ ಪ್ರಮಾಣ ಪತ್ರ(wound certificate) ಮತ್ತು ಅಂಗವೂನತ್ವ ಪ್ರಮಾಣ ಪತ್ರ (disability certificate) ನೀಡಿರುತ್ತಾರೆ.


ಎರಡೂ ಪ್ರಮಾಣಪತ್ರಗಳು ಒಂದಕ್ಕಿಂತ ಒಂದು ಭಿನ್ನವಾಗಿದ್ದು, ತದ್ವಿರುದ್ದ ಅಭಿಪ್ರಾಯದಿಂದ ಕೂಡಿರುತ್ತದೆ ಎಂಬುದನ್ನು ಹೈಕೋರ್ಟ್ ಗಮನಿಸಿದೆ.


ವಿಮೆ ಹಣ ಪಡೆಯಲು ಸುಳ್ಳು ವೈದ್ಯಕೀಯ ಪ್ರಮಾಣ ಪತ್ರ ನೀಡಿಕೆ ಆರೋಪದ ಹಿನ್ನೆಲೆಯಲ್ಲಿ ವೃತ್ತಿಪರ ದುರ್ನಡತೆ ತೋರಿರುವ ವೈದ್ಯರ ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕರ್ನಾಟಕ ವೈದ್ಯಕೀಯ ಮಂಡಳಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.


ಅಲ್ಲದೆ, ವಿಮಾ ಪರಿಹಾರವನ್ನು ರದ್ದುಗೊಳಿಸಿದ್ದು, ವಿಮಾ ಕಂಪೆನಿ ಹಣ ಜಮೆ ಮಾಡಿದ್ದರೆ ಅದನ್ನು ಆ ಕಂಪೆನಿಗೆ ಹಿಂತಿರುಗಿಸುವಂತೆ ಸೂಚನೆ ನೀಡಿದೆ.


Issuance of False medical certificate for claiming insurance money. High Court has issue direction to KMC to hold enquiry about the professional misconduct of doctor.




Read the Judgement:

Ads on article

Advertise in articles 1

advertising articles 2

Advertise under the article