-->
Karnataka Govt order - ಹಾರ, ತುರಾಯಿ ಬದಲು ಕನ್ನಡ ಪುಸ್ತಕ ಕೊಡಿ: ಕರ್ನಾಟಕ ಸರ್ಕಾರ ಆದೇಶ

Karnataka Govt order - ಹಾರ, ತುರಾಯಿ ಬದಲು ಕನ್ನಡ ಪುಸ್ತಕ ಕೊಡಿ: ಕರ್ನಾಟಕ ಸರ್ಕಾರ ಆದೇಶ
ಹಾರ, ತುರಾಯಿ ಬದಲು ಕನ್ನಡ ಪುಸ್ತಕ ಕೊಡಿ: ಕರ್ನಾಟಕ ಸರ್ಕಾರ ಆದೇಶಸರ್ಕಾರ ಆಯೋಜಿಸುವ ಸಭೆ- ಸಮಾರಂಭಗಳಲ್ಲಿ ಹಾರ, ತುರಾಯಿ, ಹೂಗುಚ್ಚ, ಫಲಕ ಹಾಗೂ ಶಾಲುಗಳನ್ನು ಹಾಕುವ ಕ್ರಮಕ್ಕೆ ಕರ್ನಾಟಕ ಸರ್ಕಾರ ಕಡಿವಾಣ ಹಾಕಿದೆ.


ಸಭೆಗಳಲ್ಲಿ ಹೂಗುಚ್ಚ, ಹಾರ ಶಾಲುಗಳಿಂದ ಮಾಡುವ ಸನ್ಮಾನ ಸಾಕು. ಇವುಗಳ ಬದಲು ಕನ್ನಡ ಪುಸ್ತಕಗಳನ್ನು ನೀಡಿ ಎಂದು ರಾಜ್ಯ ಸರ್ಕಾರ ಆದೇಶ ನೀಡಿದೆ.


ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಆದೇಶ ಹೊರಡಿಸಿದ್ದು, ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಈ ಆದೇಶಕ್ಕೆ ಸಹಿ ಹಾಕಿದ್ದಾರೆ.


ಸಚಿವರಾದ ಬಳಿಕ ಸುನೀಲ್ ಕುಮಾರ್, ಆರ್. ಅಶೋಕ್, ಮುನಿರತ್ನ ಅವರು ಇದೇ ರೀತಿ ಮನವಿ ಮಾಡಿ ಹಾರ ತುರಾಯಿಗಳನ್ನು ನೀಡುವುದನ್ನು ನಯವಾಗಿ ವಿರೋಧಿಸಿದ್ದರು.

ಈ ಆದೇಶಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

Ads on article

Advertise in articles 1

advertising articles 2

Advertise under the article