-->
NI Act- Cheque dishonour for Stop Payment | "ಪಾವತಿ ತಡೆ" ಕಾರಣಕ್ಕೆ ಚೆಕ್ ಅಮಾನ್ಯ ಪ್ರಕರಣ- ಎರಡು ಹೈಕೋರ್ಟ್ ತೀರ್ಪುಗಳ ಕುರಿತು

NI Act- Cheque dishonour for Stop Payment | "ಪಾವತಿ ತಡೆ" ಕಾರಣಕ್ಕೆ ಚೆಕ್ ಅಮಾನ್ಯ ಪ್ರಕರಣ- ಎರಡು ಹೈಕೋರ್ಟ್ ತೀರ್ಪುಗಳ ಕುರಿತು

NI Act | "ಪಾವತಿ ತಡೆ" ಕಾರಣಕ್ಕೆ ಚೆಕ್ ಅಮಾನ್ಯ ಪ್ರಕರಣ- ಎರಡು ಹೈಕೋರ್ಟ್ ತೀರ್ಪುಗಳ ಕುರಿತು
ಚೆಕ್ ಅಮಾನ್ಯ ಪ್ರಕರಣದಲ್ಲಿ ಪಾವತಿ ತಡೆ (Stop Payment) ಸೂಚನೆಯನ್ನು ಚೆಕ್‌ ನೀಡಿದಾತ ನೀಡಿದರೂ Negotiable Instruments Act ನಡಿ ದೂರು ದಾಖಲಿಸಬಹುದೇ...??


ಅದೇ ರೀತಿ, ಹಲವು ಚೆಕ್‌ಗಳ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ಲೀಗಲ್ ನೋಟೀಸ್ ಮತ್ತು ಖಾಸಗಿ ದೂರನ್ನು ದಾಖಲಿಸಬಹುದೇ...??


ಈ ಮೇಲಿನ ಎರಡು ಪ್ರಕರಣಕ್ಕೆ ಸಂಬಂಧಿಸಿದ ಎರಡು ಮಹತ್ವದ ಪ್ರಕರಣಗಳನ್ನು ಎರಡು ಹೈಕೋರ್ಟ್‌ಗಳು ಇತ್ಯರ್ಥ ಪಡಿಸಿವೆ.


1) ಗೋವಿಂದರಾಜ್ Vs ಅಶ್ವಿನಿ ಬರೈ


K. Govinda raj Vs Ashwin Barai


Madras High Court ಮದ್ರಾಸ್ ಹೈಕೋರ್ಟ್ (Date: 19-08-1997)


1998 CriLJ 11


2) ಯುನಿಕ್ ಇನ್‌ಫೊವೇಸ್‌ ಪ್ರೈ. ಲಿ. Vs ಎಂ. ಪಿ.ಎಸ್. ಟೆಲಿಕಾಂ ಪ್ರೈ ಲಿ.


Unique Infoways Pvt. Ltd. Vs M/s MPS Telecom Pvt Ltd (19 March, 2019)


ದಿಲ್ಲಿ ಹೈಕೋರ್ಟ್


ಎರಡು ಪ್ರಕರಣಗಳಲ್ಲಿ ಆರೋಪಿ/ಪ್ರತಿವಾದಿಯು ಚೆಕ್ ಮಾನ್ಯ ಮಾಡದಂತೆ ತನ್ನ ಬ್ಯಾಂಕ್‌ಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ Payment Stopped by Drawer ಎಂಬ ಷರಾದೊಂದಿಗೆ ಚೆಕ್ ಅಮಾನ್ಯಗೊಂಡಿತ್ತು.ಇನ್ನೊಂದು ಪ್ರಮುಖ ವಿಚಾರ ಎಂದರೆ, ಈ ಮೇಲಿನ ಎರಡೂ ಪ್ರಕರಣಗಳೂ ತಲಾ ಆರು ಚೆಕ್‌ಗಳ ಅಮಾನ್ಯ ಪ್ರಕರಣವಾಗಿದ್ದು, ಒಂದೇ ಲೀಗಲ್ ನೋಟೀಸ್ ಮತ್ತು ಒಂದೇ ಖಾಸಗಿ ದೂರನ್ನು ದಾಖಲಿಸಲಾಗಿತ್ತು.ಎರಡೂ ಪ್ರಕರಣಗಳಲ್ಲೂ ಮಾನ್ಯ ಹೈಕೋರ್ಟ್ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿತ್ತು. ಅಲ್ಲದೆ, ದೂರುದಾರರ ಪರ ತೀರ್ಪು ನೀಡಿತ್ತು.
Ads on article

Advertise in articles 1

advertising articles 2

Advertise under the article