-->
How to apply Survival certificate | ಮೃತರ ಜೀವಿತಾವಧಿ ಸದಸ್ಯರ ಪ್ರಮಾಣ ಪತ್ರಕ್ಕೆ ಅರ್ಜಿ

How to apply Survival certificate | ಮೃತರ ಜೀವಿತಾವಧಿ ಸದಸ್ಯರ ಪ್ರಮಾಣ ಪತ್ರಕ್ಕೆ ಅರ್ಜಿ


----------- ತಾಲೂಕು ತಹಶೀಲ್ದಾರರ ಸನ್ನಿಧಾನಕ್ಕೆಶ್ರೀಮತಿ ನಯನ (ಹೆಸರು ಬದಲಾಯಿಸಿ)


ಪ್ರಾಯ ಸುಮಾರು ೬೦ ವರ್ಷ, (ಬದಲಾಯಿಸಿ)


ಕೋಂ. ದಿ. ಜಗದೀಶ್ (ಹೆಸರು ಬದಲಾಯಿಸಿ)


# (ವಿಳಾಸ ಬರೆಯಿರಿ),                                                                          ----- ಅರ್ಜಿದಾರರು


ಮಂಗಳೂರು – ೫೭೫೦೦೩ (ವಿಳಾಸ ಬದಲಾಯಿಸಿ)ವಿಷಯ: ದಿವಂಗತ ಜಗದೀಶ್‌ರವರ ಉತ್ತರಜೀವಿತ (ಜೀವಿತಾವಧಿ ಸದಸ್ಯರ) ಪ್ರಮಾಣ ಪತ್ರ ಕೋರಿ ಅರ್ಜಿ.


೧. ಅರ್ಜಿದಾರರು ಶಾಶ್ವತವಾಗಿ ಮೇಲಿನ ವಿಳಾಸದಲ್ಲಿ ವಾಸವಾಗಿರುವುದಾಗಿದೆ. ಅರ್ಜಿದಾರರ ಪತಿ ಶ್ರೀ. ಜಗದೀಶ್ ರವರು ದಿನಾಂಕ ೦೫/೦೫/೨೦೨೧ರಂದು ಮರಣ ಹೊಂದಿರುತ್ತಾರೆ.೨. ಸದರಿ ಶ್ರೀ. ಜಗದೀಶ್‌ರವರಿಗೆ ಈ ಕೆಳಗೆ ನಮೂದಿಸಿರುವ ವಾರೀಸುದಾರರು ಇರುತ್ತಾರೆ.


೧. ಶ್ರೀಮತಿ. ನಯನ, ಪತ್ನಿ ವಯಸ್ಸು೬೦ ವರ್ಷ


೩. ಈ ಮೇಲಿನವರನ್ನು ಹೊರತುಪಡಿಸಿ ಬೇರೆಯಾವುದೇ ವಾರೀಸುದಾರರು ಇರುವುದಿಲ್ಲ. ದಿ. ಜಗದೀಶ್‌ರವರ ಮರಣ ಪ್ರಮಾಣ ಪತ್ರವನ್ನು ಈ ಪ್ರಮಾಣ ಪತ್ರದೊಂದಿಗೆ ಲಗತ್ತೀಕರಿಸಿದೆ.


೪. ಮೃತರ ಮರಣ ಸಮರ್ಥನಾ ಪತ್ರ ಮತ್ತು ನನ್ನ ಪ್ರಮಾಣ ಪತ್ರವನ್ನು ಈ ಅರ್ಜಿಯೊಂದಿಗೆ ಲಗತ್ತೀಕರಿಸಿದೆ.


೫. ಮೃತರ ಉತ್ತರಜೀವಿತ ಪ್ರಮಾಣ ಪತ್ರವು ಮೃತರ ಹೆಸರಿನಲ್ಲಿರುವ ಸ್ಥಿರಾಸ್ತಿಯ ಖಾತಾ ಬದಲಾವಣೆ ಮಾಡಲು ಕಂದಾಯ ಇಲಾಖೆಯಲ್ಲಿ ಹಾಜರುಪಡಿಸಲು ಅಗತ್ಯವಿರುತ್ತದೆ. ಆದುದರಿಂದ ಮೃತರ ಉತ್ತರ ಜೀವಿತ ಪ್ರಮಾಣ ಪತ್ರವನ್ನು ದಯಪಾಲಿಸಬೇಕಾಗಿ ಪ್ರಾರ್ಥನೆ.ಇಂತೀತಮ್ಮ ವಿಶ್ವಾಸಿ,


ಶ್ರೀಮತಿ ನಯನ

ಮಂಗಳೂರು


/೦೭/೨೦೨೧

==========================================================


ಪ್ರಮಾಣ ಪತ್ರಶ್ರೀಮತಿ. ನಯನ, ಪ್ರಾಯ ಸುಮಾರು ೬೦ ವರ್ಷ, ಕೋಂ. ದಿ. ಶ್ರೀ. ಜಗದೀಶ್, ವಾಸ:-# ಕೊಡಿಯಾಲ್‌ಬೈಲ್, ಮಂಗಳೂರು - ೫೭೫೦೦೩, ಎಂಬಲ್ಲಿ ವಾಸವಾಗಿರುವ ನಾನು ಸತ್ಯ ಪ್ರಮಾಣ ಮಾಡಿ ಹೇಳುವುದೇನೆಂದರೆ:-


೧. ನಾನು ಹೇಳುವುದೇನೆಂದರೆ, ನಾನು ಈ ಮೇಲಿನ ವಿಳಾಸದಲ್ಲಿ ಶಾಶ್ವತವಾಗಿ ವಾಸವಾಗಿರುವುದಾಗಿದೆ. ನನ್ನ ಪತಿ ಶ್ರೀ. ಜಗದೀಶ್ ‌ರವರು ದಿನಾಂಕ ೦೫/೦೫/೨೦೨೧ರಂದು ಮರಣ ಹೊಂದಿರುತ್ತಾರೆ.


೨. ನಾನು ಹೇಳುವುದೇನೆಂದರೆ, ನನ್ನ ಪತಿ ಶ್ರೀ. ಜಗದೀಶ್ ‌ರವರಿಗೆ ಈ ಕೆಳಗೆ ನಮೂದಿಸಿರುವ ವಾರೀಸುದಾರರುಇರುತ್ತಾರೆ.


೧. ಶ್ರೀಮತಿ. ನಯನ, ಪತ್ನಿ ವಯಸ್ಸು೬೦ ವರ್ಷ೨. ನಾನು ಹೇಳುವುದೇನೆಂದರೆ, ಈ ಮೇಲಿನವರನ್ನು ಹೊರತುಪಡಿಸಿ ಬೇರೆಯಾವುದೇ ವಾರೀಸುದಾರರು ಇರುವುದಿಲ್ಲ. ನನ್ನ ಪತಿಯ ಮರಣ ಪ್ರಮಾಣ ಪತ್ರವನ್ನು ಈ ಪ್ರಮಾಣ ಪತ್ರದೊಂದಿಗೆ ಲಗತ್ತೀಕರಿಸಿದೆ.


೩. ನಾನು ಹೇಳುವುದೇನೆಂದರೆ, ಮೃತರ ಮರಣ ಸಮರ್ಥನಾ ಪತ್ರ ಈ ಅರ್ಜಿಯೊಂದಿಗೆ ಲಗತ್ತೀಕರಿಸಿದೆ.


೪. ನಾನು ಹೇಳುವುದೇನೆಂದರೆ, ಮೃತರ ಉತ್ತರಜೀವಿತ ಪ್ರಮಾಣ ಪತ್ರವು ಮೃತರ ಹೆಸರಿನಲ್ಲಿರುವ ಸ್ಥಿರಾಸ್ಥಿಯ ಖಾತಾ ಬದಲಾವಣೆ ಮಾಡಲುಕಂದಾಯಇಲಾಖೆಯಲ್ಲಿ ಹಾಜರುಪಡಿಸಲು ಅಗತ್ಯವಿರುತ್ತದೆ. ಆದುದರಿಂದ ಮೃತರ ಉತ್ತರಜೀವಿತ (ಜೀವಿತಾವಧಿ ಸದಸ್ಯರ) ಪ್ರಮಾ ಪತ್ರವನ್ನು ದಯಪಾಲಿಸಬೇಕಾಗಿ ಪ್ರಾರ್ಥನೆ.ಮೇಲೆ ಹೇಳಿರುವುದೆಲ್ಲಾ ಸತ್ಯ


 ಪ್ರಮಾಣೀಕರ್ತರುಮೇಲೆ ಹೇಳಿರುವ ವಿಚಾರಣೆಗಳನ್ನು ಸಾಕ್ಷಿಗೆಗೊತ್ತಿರುವ ಭಾಷೆಯಾದಕನ್ನಡದಲ್ಲಿ ಓದಿ ಹೇಳಲಾಗಿ, ಜುಲೈ……ರ……. ನೇ ದಿನದಂದು ಎಲ್ಲಾ ಸರಿ ಇರುತ್ತದೆ ಎಂದು ಈ ಮೂಲಕ ಪ್ರಮಾಣೀಕರಿಸಿರುತ್ತಾರೆ

Ads on article

Advertise in articles 1

advertising articles 2

Advertise under the article