Advocate is not responsible- Madras HC | ಕೇಸಿನ ವಾಯಿದೆಗೆ ಹಾಜರಾಗದಿದ್ದರೆ ಅದಕ್ಕೆ ವಕೀಲರನ್ನು ಜವಾಬ್ದಾರರನ್ನಾಗಿ ಮಾಡಲಾಗದು: ಮದ್ರಾಸ್ ಹೈಕೋರ್ಟ್ ತೀರ್ಪು
Monday, August 16, 2021
ಕೇಸಿನ ವಾಯಿದೆಗೆ ಹಾಜರಾಗದಿದ್ದರೆ ಅದಕ್ಕೆ ವಕೀಲರನ್ನು ಜವಾಬ್ದಾರರನ್ನಾಗಿ ಮಾಡಲಾಗದು: ಮದ್ರಾಸ್ ಹೈಕೋರ್ಟ್ ತೀರ್ಪು
ಯಾವುದೇ ಪ್ರಕರಣದಲ್ಲಿ ಪಕ್ಷಕಾರರು ಹಾಜರಾದೇ ಇದ್ದರೆ ಅದಕ್ಕೆ ಕೇಸು ನಡೆಸುವ ವಕೀಲರನ್ನು ಹೊಣೆಗಾರರನ್ನಾಗಿ ಮಾಡಲಾಗದು ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕೇಸಿನ ವಾಯಿದೆ ಮತ್ತು ಅದರ ವಿಚಾರಣಾ ಹಂತದ ಬಗ್ಗೆ ಪಕ್ಷಕಾರರು ಸೂಕ್ತ ಮಾಹಿತಿ ಪಡೆದುಕೊಳ್ಳಬೇಕು. ಮತ್ತು ಇದು ಅವರು ಜವಾಬ್ದಾರಿಯಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಎನ್. ಸೆಂಗೊಟ್ಟೈನ್ Vs ಷಣ್ಮುಘವಡಿವು (N. Sengottaiyan Vs Shanmughavadivu) Madras High Court Date : 01/11/2016 ಪ್ರಕರಣದಲ್ಲಿ ಮಾನ್ಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ಈ ಪ್ರಕರಣದಲ್ಲಿ ವಕೀಲರು ಕೇಸಿನ ವಾಯಿದೆಯ ದಿನಾಂಕವನ್ನು ಕಕ್ಷಿದಾರರಿಗೆ ತಿಳಿಸಿದ್ದರು ಎಂಬುದನ್ನು ಪಕ್ಷಕಾರರು ಒಪ್ಪಿಕೊಂಡಿದ್ದಾರೆ. ಆದರೆ, ವಿಚಾರಣಾ ದಿನಾಂಕದಂದು ಗೈರು ಹಾಜರಾಗಿದ್ದರು.