FIR copy granted under RTI - ಮಾಹಿತಿ ಹಕ್ಕು ಕಾಯ್ದೆಯಡಿ FIR, ಪೊಲೀಸರ ತನಿಖಾ ವರದಿ ಪಡೆಯಬಹುದು: ಕರ್ನಾಟಕ ಹೈಕೋರ್ಟ್
Saturday, October 16, 2021
ಮಾಹಿತಿ ಹಕ್ಕು ಕಾಯ್ದೆಯಡಿ FIR, ಪೊಲೀಸರ ತನಿಖಾ ವರದಿ ಪಡೆಯಬಹುದು: ಕರ್ನಾಟಕ ಹೈಕೋರ್ಟ್
ತನಿಖೆ ಪೂರ್ಣಗೊಂಡ ನಂತರ ಪೊಲೀಸರ ತನಿಖಾ ವರದಿ ಸಹಿತ FIR ಹಾಗೂ ಇತರ ದಾಖಲೆಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆಯಬಹುದು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ನ್ಯಾ. ಎನ್.ಎಸ್. ಸಂಜಯಗೌಡ ಅವರ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಮಲ್ಲೇಶಪ್ಪ Vs CBI ಪ್ರಕರಣಕ್ಕೆ ಸಂಬಂಧಿಸಿ RTIನಡಿ ತನಿಖಾ ವರದಿ ನೀಡುವಂತೆ ರಾಜ್ಯ ಮಾಹಿತಿ ಹಕ್ಕು ಆಯೋಗ ನೀಡಿದ ಆದೇಶ ಪ್ರಶ್ನಿಸಿ ಸಿಐಡಿ ಮಾಹಿತಿ ಹಕ್ಕು ಅಧಿಕಾರಿ ಮತ್ತು ಪೊಲೀಸ್ ಮಹಾನಿರ್ದೇಶಕರು ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟ್ ಈ ಆದೇಶ ನೀಡಿದೆ.
ಯಾವುದೇ ಅಗತ್ಯ ನಾಗರಿಕರಿಗೆ ಆರ್‌ಟಿಐ ಅಡಿಯಲ್ಲಿ ಪೊಲೀಸರ ತನಿಖಾ ವರದಿ ಪ್ರತಿ ಪಡೆಯುವ ಹಕ್ಕು ಇದೆ ಎಂದು ಹೇಳಿತು.