-->
E Filing in Courts from Jan, 2022- ಜನವರಿ 1ರಿಂದ ಇ-ಫೈಲಿಂಗ್ ಕಡ್ಡಾಯ; ಭೌತಿಕ ಫೈಲಿಂಗ್‌ಗೆ ಅನುಮತಿ ಇಲ್ಲ: ಸುಪ್ರೀಂ ಕೋರ್ಟ್

E Filing in Courts from Jan, 2022- ಜನವರಿ 1ರಿಂದ ಇ-ಫೈಲಿಂಗ್ ಕಡ್ಡಾಯ; ಭೌತಿಕ ಫೈಲಿಂಗ್‌ಗೆ ಅನುಮತಿ ಇಲ್ಲ: ಸುಪ್ರೀಂ ಕೋರ್ಟ್

ಜನವರಿ 1ರಿಂದ ಇ-ಫೈಲಿಂಗ್ ಕಡ್ಡಾಯ; ಭೌತಿಕ ಫೈಲಿಂಗ್‌ಗೆ ಅನುಮತಿ ಇಲ್ಲ: ಸುಪ್ರೀಂ ಕೋರ್ಟ್




  • 1-01-2022ರ ನಂತರ ಇ- ಫೈಲಿಂಗ್‌ ಕಡ್ಡಾಯ
  • ಸರ್ಕಾರದ ಅರ್ಜಿ/ಪ್ರಕರಣಗಳಿಗೆ ಅನ್ವಯ
  • ಎಲ್ಲ ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್‌ ತಾಕೀತು
  • ಎಲ್ಲ ಪಕ್ಷಕಾರರೂ ಇ-ಫೈಲಿಂಗ್ ನಲ್ಲೇ ಅರ್ಜಿ ಸಲ್ಲಿಸುವುದು
  • ಎನ್‌.ಐ. ಆಕ್ಟ್ ಸಹಿತ ಪ್ರಮುಖ ಅರ್ಜಿ/ದೂರುಗಳಿಗೂ ಅನ್ವಯ..!?


2022ರ ಜನವರಿ 1ರಿಂದ ಹೈಕೋರ್ಟ್‌ಗಳಲ್ಲಿ ಸರ್ಕಾರ ಸಲ್ಲಿಸುವ ಎಲ್ಲ ಅರ್ಜಿ ಮತ್ತು ಪ್ರಕರಣಗಳು ಇ ಫೈಲಿಂಗ್ ಮೂಲಕ ಸಲ್ಲಿಸುವಂತೆ ನೋಡಿಕೊಳ್ಳಬೇಕು ಎಂದು ಎಲ್ಲ ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.



ಈ ಅವಧಿ ಬಳಿಕ ಸರ್ಕಾರ ಭೌತಿಕವಾಗಿ ಪ್ರಕರಣ ಯಾ ಅರ್ಜಿ ಸಲ್ಲಿಸಿದರೆ ಅದಕ್ಕೆ ಅನುಮತಿ ಇಲ್ಲ ಎಂದು ಸುಪ್ರೀಂ ಕೋರ್ಟ್‌ನ ಇ-ಸಮಿತಿಯ ಅಧ್ಯಕ್ಷರಾದ ಮಾನ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ. ಈ ಬಗ್ಗೆ ದೇಶದ ಎಲ್ಲ ಹೈಕೋರ್ಟ್‌ ಗಳಿಗೆ ಬರೆದ ಪತ್ರದಲ್ಲಿ ಅವರು ತಿಳಿಸಿದ್ದಾರೆ.




ಆದಾಯ ತೆರಿಗೆ, ಮಧ್ಯಸ್ಥಿಕೆ, ವಾಣಿಜ್ಯ ದಾವೆ ಯಾ ವ್ಯಾಜ್ಯಕ್ಕೆ ಸಂಬಂಧಿಸಿದ ಕೆಲ ವರ್ಗಗಳಲ್ಲಿ ಹೈಕೋರ್ಟ್ ಸೂಕ್ತ ಎಂದು ಪರಿಗಣಿಸುವ ಯಾವುದೇ ವರ್ಗಗಳಲ್ಲಿ ಎಲ್ಲ ಪಕ್ಷಕಾರರಿಗೆ ಜನವರಿ ಒಂದರಿಂದ ಇ-ಫೈಲಿಂಗ್ ಮೂಲಕ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಲಿದೆ.




ಅಧೀನ ನ್ಯಾಯಾಲಯಗಳ ತೀರ್ಪು ಯಾ ಆದೇಶ ಪ್ರಶ್ನಿಸಿ ಸಲ್ಲಿಸಲಾಗುವ ಅರ್ಜಿಗಳು, ಮೇಲ್ಮನವಿಗಳು ಮತ್ತು ಮರು ಪರಿಶೀಲನಾ ಅರ್ಜಿಗಳಿಗೂ ಇದು ಅನ್ವಯವಾಗಲಿದೆ. ಅಂದರೆ, ಈ ಮೇಲಿನ ಎಲ್ಲ ಅರ್ಜಿಗಳೂ 2022ರ ಜನವರಿ 1ರಿಂದ ಇ-ಫೈಲಿಂಗ್ ಮೂಲಕವೇ ಕಡ್ಡಾಯವಾಗಿ ಸಲ್ಲಿಕೆಯಾಗಬೇಕಾಗಿದೆ.




ಮೇಲ್ಮನವಿ ಅಥವಾ ಮರುಪರಿಶೀಲನಾ ಅರ್ಜಿಯ ಇ-ಫೈಲಿಂಗ್ ಸಂದರ್ಭದಲ್ಲಿ ವಿಚಾರಣಾ ನ್ಯಾಯಾಲಯದ ಅಗತ್ಯ ದಾಖಲೆಯನ್ನು ಮೇಲ್ಮನವಿ / ಮರುಪರಿಶೀಲನಾ ನ್ಯಾಯಾಲಯದೊಂದಿಗೆ ಡಿಜಿಟಲ್ ಲಿಂಕ್ ಮಾಡಬಹುದು ಎಂದು ಇ ಸಮಿತಿ ತನ್ನ ಪತ್ರದಲ್ಲಿ ತಿಳಿಸಿದೆ.




ನೆಗೋಶಿಯೇಬಲ್ ಇನ್ಸ್‌ಟ್ರುಮೆಂಟ್ಸ್ ಕಾಯ್ದೆಯ ಸೆಕ್ಷನ್ 138ರ ಅಡಿಯಲ್ಲಿ ದಾಖಲಾಗುವ ಹಣ ಮರುಪಾವತಿ ದಾವೆ, ದೂರುಗಳು, ಜೀವನಾಂಶದ ಅರ್ಜಿಗಳುಇ, ಪರಸ್ಪರ ಸಮ್ಮತಿಯ ವಿಚ್ಚೇದನ ದೂರುಗಳು ಹಾಗೂ ಜಾಮೀನು ಅರ್ಜಿಗಳನ್ನು ಇ-ಫೈಲಿಂಗ್‌ಗೆ ಪರಿಗಣಿಸಬಹುದು ಎಂದು ಸಮಿತಿ ತನ್ನ ಪತ್ರದಲ್ಲಿ ತಿಳಿಸಿದೆ.





Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200