-->
Age certification of juvinile within 15 days: Delhi HC- ಬಾಲ ಆರೋಪಿಗಳ ವಯಸ್ಸಿನ ದೃಢೀಕರಣಕ್ಕೆ 15 ದಿನ ಗಡುವು: ದೆಹಲಿ ಹೈಕೋರ್ಟ್

Age certification of juvinile within 15 days: Delhi HC- ಬಾಲ ಆರೋಪಿಗಳ ವಯಸ್ಸಿನ ದೃಢೀಕರಣಕ್ಕೆ 15 ದಿನ ಗಡುವು: ದೆಹಲಿ ಹೈಕೋರ್ಟ್

ಬಾಲ ಆರೋಪಿಗಳ ವಯಸ್ಸಿನ ದೃಢೀಕರಣಕ್ಕೆ 15 ದಿನ ಗಡುವು: ದೆಹಲಿ ಹೈಕೋರ್ಟ್





ಬಾಲ ಆರೋಪಿಗಳ ವಿರುದ್ಧದ ತನಿಖೆ ಮಾಡುವ ಅಧಿಕಾರಿಗಳು ಆ ಆರೋಪಿಯ ವಯಸ್ಸಿನ ಪುರಾವೆಗೆ ಸಂಬಂಧಿಸಿದ ದಾಖಲೆಗಳನ್ನು ಹಾಗೂ ವಯಸ್ಸು ಪತ್ತೆ ಪರೀಕ್ಷೆಯ ದಾಖಲೆಯನ್ನು ಬಾಲ ನ್ಯಾಯ ಮಂಡಳಿ (ಜೆಜೆಬಿ) ನಿರ್ದೇಶಿಸಿದ ದಿನಾಂಕದಿಂದ 15 ದಿನಗಳ ಒಳಗೆ ಖಚಿತಪಡಿಸಬೇಕು ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.




"ಕಾನೂನಿನ ಜೊತೆ ಸಂಘರ್ಷದಲ್ಲಿರುವ ಬಾಲಾಪರಾಧಿಗಳಿಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳಲ್ಲಿ ಆರೋಪಿತರ ಅಪರಾಧದ ಸ್ವರೂಪವನ್ನು ಲೆಕ್ಕಿಸದೆ, ವಯಸ್ಸಿನ ಪುರಾವೆಗೆ ಸಂಬಂಧಿಸಿದ ದಾಖಲೆಗಳನ್ನು ತನಿಖಾಧಿಕಾರಿ ಸಲ್ಲಿಸಿದ 15 ದಿನಗಳಲ್ಲಿ ಪರಿಶೀಲಿಸಿ, ಬಾಲಾಪರಾಧಿಗಳ ವಯಸ್ಸನ್ನು ನಿರ್ಧರಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದನ್ನು ಬಾಲ ನ್ಯಾಯ ಮಂಡಳಿ (ಜೆಜೆಬಿ) ಖಚಿತಪಡಿಸಬೇಕಿದೆ" ಎಂದು ದೆಹಲಿ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.




ನ್ಯಾ. ಸಿದ್ಧಾರ್ಥ್‌ ಮೃದುಲ್‌ ಮತ್ತು ನ್ಯಾ. ಅನೂಪ್‌ ಜೈರಾಮ್‌ ಭಂಭಾನಿ ಈ ತೀರ್ಪು ನೀಡಿದ್ದಾರೆ.




ತನಿಖಾಧಿಕಾರಿಗಳ ಕೋರಿಕೆ ಪರಿಗಣಿಸಿ ಆದ್ಯತೆ ಮೇರೆಗೆ ಬಾಲ ಆರೋಪಿಯ ವಯಸ್ಸು ಪರಿಶೀಲನೆ ನಡೆಸಬೇಕು ಎಂದು ಶಿಕ್ಷಣ ಸಂಸ್ಥೆಗಳು ಮತ್ತು ಇತರೆ ಇಲಾಖೆಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.



"ಬಾಲ ಆರೋಪಿಯ ವಯಸ್ಸು ದೃಢೀಕರಣ ಕುರಿತು ತನಿಖಾಧಿಕಾರಿ ಮನವಿ ಮಾಡಿದ ಎಲ್ಲಾ ವ್ಯಕ್ತಿಗಳು ಯಾ ಸಂಸ್ಥೆಗಳು, ಸರ್ಕಾರಿ ಅಧಿಕಾರಿಗಳು, ವೈದ್ಯಾಧಿಕಾರಿಗಳು ಆದ್ಯತೆ ಮೇರೆಗೆ ನೀಡಬೇಕು. ತೀರ್ಪಿನಲ್ಲಿ ನಿಗದಿಗೊಳಿಸಿದ ಸಮಯದ ಮಿತಿಯಲ್ಲಿ ದೃಢೀಕರಿಸುವ ಸಂಬಂಧ ಅಗತ್ಯ ಕ್ರಮ ಮತ್ತು ಪ್ರಕ್ರಿಯೆ ಅನುಸರಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸುತ್ತದೆ" ಎಂದು ತೀರ್ಪು ಹೇಳಿದೆ.






Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200