-->
Karnataka Govt Order for fees for 2020-21: ಖಾಸಗಿ ಶಾಲೆಗಳ ಫೀಸ್: ಸರ್ಕಾರದಿಂದ ಮಹತ್ವದ ಆದೇಶ ಪ್ರಕಟ

Karnataka Govt Order for fees for 2020-21: ಖಾಸಗಿ ಶಾಲೆಗಳ ಫೀಸ್: ಸರ್ಕಾರದಿಂದ ಮಹತ್ವದ ಆದೇಶ ಪ್ರಕಟ

ಖಾಸಗಿ ಶಾಲೆಗಳ ಫೀಸ್: ಸರ್ಕಾರದಿಂದ ಮಹತ್ವದ ಆದೇಶ ಪ್ರಕಟ





2020-21ನೇ ಸಾಲಿನಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳು ಶಾಲಾ ಶುಲ್ಕವನ್ನು ವಿದ್ಯಾರ್ಥಿಗಳ ಪೋಷಕರಿಂದ ಪಡೆಯುವ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರ ಮಹತ್ವದ ಆದೇಶವನ್ನು ಪ್ರಕಟಿಸಿದೆ.



ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ 2020-21ನೇ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪೋಷಕರಿಂದ ಶೇ. 85ರಷ್ಟು ಬೋಧನಾ ಶುಲ್ಕವನ್ನು ಪಡೆಯಲು ಅನುಮತಿ ನೀಡಲಾಗಿದೆ.



ಈ ಶೈಕ್ಷಣಿಕ ಅವಧಿಯಲ್ಲಿ ಶೇ. 70ರಷ್ಟು ಬೋಧನಾ ಶುಲ್ಕವನ್ನು ಪಡೆಯುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಹೈಕೋರ್ಟ್‌ನ ದಿ. 16/09/2021ರ ಆದೇಶವನ್ನು ರಾಜ್ಯ ಸರ್ಕಾರ ಪರಿಷ್ಕರಿಸಿದ್ದು, ಶೇ. 85ರಷ್ಟು ಬೋಧನಾ ಶುಲ್ಕವನ್ನು ಪಡೆಯಲು ಅನುಮತಿ ನೀಡಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.



ಇದರ ಜೊತೆಗೆ ಐಚ್ಚಿಕ ಶುಲ್ಕ, ಶಾಲಾಭಿವೃದ್ಧಿ ಶುಲ್ಕ ಸೇರಿದಂತೆ ಯಾವುದೇ ಶುಲ್ಕವನ್ನು ಸ್ವೀಕರಿಸದಂತೆ ಸರ್ಕಾರದಲ್ಲಿ ಆದೇಶದಲ್ಲಿ ತಿಳಿಸಲಾಗಿದೆ. ಜೊತೆಗೆ ಟ್ರಸ್ಟ್, ಸೊಸೈಟಿಗಳಿಗೆ ವಂತಿಗೆ ಪಡೆಯದಂತೆ ತಾಕೀತು ಮಾಡಲಾಗಿದೆ.



ಒಂದು ವೇಳೆ, ಪೋಷಕರು ವಿದ್ಯಾರ್ಥಿಗಳ ಈ ಮೇಲಿನ ಶುಲ್ಕವನ್ನು ಪೂರ್ಣವಾಗಿ ಪಾವತಿಸಿದ್ದರೆ ಅದನ್ನು ಮುಂದಿನ ವರ್ಷದ ಶೈಕ್ಷಣಿಕ ಶುಲ್ಕಕ್ಕೆ ಹೊಂದಾಣಿಕೆ ಮಾಡಿಕೊಳ್ಳಲು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.



ಈ ಮೇಲಿನ ಆದೇಶ ಯಾ ಶುಲ್ಕ ತಕರಾರು ಇದ್ದಲ್ಲಿ ಅವುಗಳನ್ನು ಪರಿಹರಿಸಲು ಇಲಾಖಾ ನಿರ್ದೇಶಕರು, ಜಿಲ್ಲಾ ಹಂತಗಳ ಡಯಟ್ ಪ್ರಾಂಶುಪಾಲರು ಸೇರಿದಂತೆ ಹಿರಿಯ ಅಧಿಕಾರಿಗಳನ್ನು ಅಧ್ಯಕ್ಷರನ್ನಾಗಿಸಿ ಅಧಿಕಾರಯುಕ್ತ ಸಮಿತಿಗಳನ್ನು ರಚಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಕ್ತ ಆದೇಶ ಹೊರಡಿಸಿದೆ ಎಂದು ಅದು ಹೇಳಿದೆ.




ಈ ಆದೇಶದ ಪ್ರತಿಯ ವಿವರ ಹೀಗಿದೆ...

ಸರ್ಕಾರದ ಆದೇಶ ಸಂಖ್ಯೆ: ಇಪಿ33ಪಿಜಿಸಿ2021, ಬೆಂಗಳೂರು ದಿನಾಂಕ:11.11.2021



Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200