-->
Karnataka High Court Judgement on invoking SC ST Act | ಎಸ್‌ಸಿ, ಎಸ್‌ಟಿ ದೌರ್ಜನ್ಯ ಕಾಯ್ದೆ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

Karnataka High Court Judgement on invoking SC ST Act | ಎಸ್‌ಸಿ, ಎಸ್‌ಟಿ ದೌರ್ಜನ್ಯ ಕಾಯ್ದೆ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ಎಸ್‌ಸಿ, ಎಸ್‌ಟಿ ದೌರ್ಜನ್ಯ ಕಾಯ್ದೆ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು





ಬೆಂಗಳೂರು : ದಲಿತ ದೌರ್ಜನ್ಯ ಕಾಯ್ದೆ (ಎಸ್‌ಸಿ ಎಸ್‌ಟಿ ಅಟ್ರಾಸಿಟಿ ಕಾಯ್ದೆ)ಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.



ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರು ದಾಖಲಿಸುವ ಎಲ್ಲ ಕೇಸ್‌ಗಳಲ್ಲೂ ಅಟ್ರಾಸಿಟಿ ಕಾಯ್ದೆಯಡಿ FIR ದಾಖಲಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.



ಎಸ್ ಸಿ/ಎಸ್ಟಿ ಜಾತಿಗೆ ಸೇರಿದವರು ದಾಖಲಿಸುವ ಎಲ್ಲ ಪ್ರಕರಣಗಳಲ್ಲೂ ಪ್ರಕರಣದ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ಆಮೇಲೆ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬೇಕು. ದಲಿತರು ಸಂತ್ರಸ್ತರಾಗಿರುವ ಎಲ್ಲ ಅಪರಾಧ ಪ್ರಕರಣಗಳಲ್ಲೂ ಆರೋಪಿಯ ವಿರುದ್ಧ ಎಸ್ ಸಿ. ಎಸ್ ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಪೀಠ ಆದೇಶ ನೀಡಿದೆ.



ಜಾತೀಯ ದಾಳಿ ನಡೆಸುವ ಉದ್ದೇಶವಿಲ್ಲದ ಕೃತ್ಯಗಳು ಸಂಭವಿಸಿದಾಗ ಆರೋಪಿಯ ವಿರುದ್ಧ ಕೇವಲ ಆ ಘಟನೆಗೆ ಸಂಬಂಧಿಸಿದ ಐಪಿಸಿ ಸೆಕ್ಷನ್ ಗಳ ಪ್ರಕಾರ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.



ಅಸ್ಪೃಶ್ಯತೆಯನ್ನು ಹೋಗಲಾಡಿಸುವ ಸದುದ್ದೇಶದಿಂದ ದಲಿತ ದೌರ್ಜನ್ಯ ತಡೆ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ದಲಿತರ ಹಿತ ಕಾಯುವುದು ಮತ್ತು ಆದಿವಾಸಿ, ಮೂಲ ಪಂಗಡಗಳ ರಕ್ಷಣೆಯನ್ನು ಮಾಡುವುದು ಮತ್ತು ಆ ವರ್ಗಗಳಿಗೆ ಆಗುತ್ತಿರುವ ತಾರತಮ್ಯವನ್ನು ನಿವಾರಿಸುವುದು ಕಾಯ್ದೆಯ ಸದುದ್ದೇಶವಾಗಿದೆ. 



ಅದಕ್ಕಾಗಿಯೇ ಸೆಕ್ಷನ್ 3ರನ್ವಯ ಪ್ರಕರಣ ದಾಖಲಿಸಲಾಗುತ್ತಿದೆ. ಆದರೆ, ಕೇವಲ ಆ ಜಾರಿಗೆ ಸೇರಿದ ವ್ಯಕ್ತಿ ಸಂತ್ರಸ್ತ ಯಾ ದೂರುದಾರ ಎಂಬ ಕಾರಣಕ್ಕೆ ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸುವ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿ ಶ್ರೀನಿವಾಸ ಹರೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.




Ads on article

Advertise in articles 1

advertising articles 2

Advertise under the article