-->
Food is right of a person- Gujarat HC- ಮಾಂಸಾಹಾರ ಮಳಿಗೆ ಜಪ್ತಿ ಪ್ರಕರಣ: ಆಹಾರದ ಹಕ್ಕನ್ನು ಪ್ರಶ್ನಿಸಲು ಆಡಳಿತಕ್ಕೆ ಹಕ್ಕಿಲ್ಲ- ಗುಜರಾತ್ ಹೈಕೋರ್ಟ್

Food is right of a person- Gujarat HC- ಮಾಂಸಾಹಾರ ಮಳಿಗೆ ಜಪ್ತಿ ಪ್ರಕರಣ: ಆಹಾರದ ಹಕ್ಕನ್ನು ಪ್ರಶ್ನಿಸಲು ಆಡಳಿತಕ್ಕೆ ಹಕ್ಕಿಲ್ಲ- ಗುಜರಾತ್ ಹೈಕೋರ್ಟ್

ಮಾಂಸಾಹಾರ ಅಂಗಡಿಗಳ ಜಪ್ತಿ ಪ್ರಕರಣ: ಏನು ತಿನ್ನಬೇಕು ಎಂದು ಪ್ರಶ್ನಿಸಲು ಆಡಳಿತಕ್ಕೆ ಹಕ್ಕಿಲ್ಲ- ಗುಜರಾತ್ ಹೈಕೋರ್ಟ್






ನೀವು ಮಾಂಸಾಹಾರ ಇಷ್ಟಪಡುವುದಿಲ್ಲ. ಅದು ನಿಮ್ಮ ದೃಷ್ಟಿಕೋನ. ಆದರೆ, ನಾನು ಹೊರಗೆ ಏನು ತಿನ್ನಬೇಕು ಎಂಬುದನ್ನು ನೀವು ತಾಕೀತು ಮಾಡುವ ಹಾಗಿಲ್ಲ...


ಇದು ಅಹ್ಮದಾಬಾದ್ ನಗರ ಪಾಲಿಕೆ ಅಧಿಕಾರಿಗಳಿಗೆ ಹೈಕೋರ್ಟ್ ಚಾಟಿ ಬೀಸಿದ ಪರಿ...



ಅಹ್ಮದಾಬಾದ್ ನಗರದಲ್ಲಿ ಮಾಂಸಾಹಾರ ಮಾರಾಟ, ವ್ಯಾಪಾರ ಮಾಡುತ್ತಿರುವ ಆಹಾರ ಮಳೀಗೆಗಳ ಮೇಲೆ ಸ್ಥಳೀಯ ಮಹಾನಗರ ಪಾಲಿಕೆ ದಾಳಿ ನಡೆಸಿ ಆಹಾರ ಸಾಮಾಗ್ರಿಗಳನ್ನು ವಶಕ್ಕೆ ತೆಗೆದುಕೊಂಡ ಪ್ರಕರಣದ ವಿಚಾರಣೆ ನಡೆಸಿದ ಗುಜರಾತ್ ಹೈಕೋರ್ಟ್, ಸ್ಥಳೀಯಾಡಳಿತದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.



ಪ್ರಕರಣ: ದಿಲೀಪ್ ಗಟುಭಾಯಿ ರೋಟ್ Vs ಗುಜರಾತ್ ಸರ್ಕಾರ



ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿರೇನ್ ವೈಷ್ಣವ್ ಸ್ಥಳೀಯಾಡಳಿತದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.



ನಿಮ್ಮ ಮೂಲಭೂತ ಸಮಸ್ಯೆ ಏನು..? ನೀವು ಮಾಂಸಾಹಾರ ಇಷ್ಟಪಡದಿರುವುದು ನಿಮ್ಮ ದೃಷ್ಟಿಕೋನ. ನಾನು ಏನು ತಿನ್ನಬೇಕು ಎಂಬ ವಿಷಯದಲ್ಲಿ ನೀವು ಹೇಗೆ ಮಧ್ಯಪ್ರವೇಶ ಮಾಡುತ್ತೀರಿ. ಇದು ನನ್ನ ಆಹಾರದ ಹಕ್ಕಿನ ಉಲ್ಲಂಘನೆಯಲ್ಲವೇ..? ಎಂದು ನಗರ ಪಾಲಿಕೆಯನ್ನು ಕಟುವಾಗಿ ಪ್ರಶ್ನಿಸಿದರು.



ಜನರು ತಮ್ಮಿಷ್ಟದನ್ನು ತಿನ್ನುವುದನ್ನು ನೀವು ತಡೆಯಲು ಹೇಗೆ ಸಾಧ್ಯ? ಅಧಿಕಾರದಲ್ಲಿ ಇದ್ದವರು ಇದನ್ನು ಮಾಡಬಯಸುತ್ತಾರೆ ಎಂದರೆ ಹಾಗೆ ಮಾಡಬಹುದೇ..? ಎಂದು ಪೀಠ ತರಾಟೆಗೆ ತೆಗೆದುಕೊಂಡಿತು.


ಮಾರಾಟಗಾರರ ಸರಕು ಮತ್ತು ಸಾಮಾಗ್ರಿಗಳನ್ನು ಅವರಿಗೆ ಮರಳಿಸಬೇಕು ಎಂದು ನಿರ್ದೇಶಿಸಿ ಪಾಲಿಕೆಗೆ ಎಚ್ಚರಿಕೆ ನೀಡಿ ಅರ್ಜಿದಾರರ ಪ್ರಕರಣವನ್ನು ವಿಲೇವಾರಿ ಮಾಡಿತು.






Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200