RBI Guideline for ATM users- ATM ಬಳಕೆದಾರರಿಗೆ ಅಗತ್ಯ ಮಾಹಿತಿ: RBI ಆದೇಶದಿಂದ ಜೇಬಿಗೆ ಕತ್ತರಿ!!
ATM ಬಳಕೆದಾರರಿಗೆ ಅಗತ್ಯ ಮಾಹಿತಿ: RBI ಆದೇಶದಿಂದ ಜೇಬಿಗೆ ಕತ್ತರಿ!!
ಎಟಿಎಂ ಬಳಕೆದಾರರಿಗೆ ಇದು ಅಗತ್ಯದ ಮಾಹಿತಿ...ಜನವರಿ 1, 2022ರಿಂದ ಎಟಿಎಂನಿಂದ ಹಣ ಪಡೆದುಕೊಳ್ಳುವುದು ದುಬಾರಿ ಆಗಲಿದೆ.
ನಮ್ಮ ಖಾತೆಯಲ್ಲಿ ಇರುವ ನಮ್ಮದೇ ಹಣ ಪಡೆಯುವ ಕುರಿತಾಗಿ ಆರ್‌ಬಿಐ ಆದೇಶ ಹೊರಡಿಸಿದ್ದು, ಹೊಸ ನಿರ್ದೇಶನದಂತೆ ನಿಗದಿತ ಸಂಖ್ಯೆಗಿಂತ ಹೆಚ್ಚು ಬಾರಿ ಹಣ ಪಡೆಯುವ ಗ್ರಾಹಕರ ಖಾತೆಗೆ ಕನ್ನ ಬೀಳಲಿದೆ.
ಈ ಹಿಂದೆ, ಎಟಿಎಂ ಬಳಕೆದಾರರು ಬ್ಯಾಂಕಿನ ತಮ್ಮ ಖಾತೆಯಿಂದ ಹಣ ಪಡೆಯುವುದಾದರೆ ಮೊದಲ ಐದು ಪ್ರಯತ್ನಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಹೆಚ್ಚಿನ ಪ್ರತಿ ಪ್ರಯತ್ನಕ್ಕೆ ರೂ. 20 ಸೇವಾ ಶುಲ್ಕವನ್ನು ವಿಧಿಸಲಾಗುತ್ತಿದೆ.
ಇನ್ನು ಮುಂದೆ ಈ ಶುಲ್ಕದಲ್ಲಿ ಏರಿಕೆಯಾಗಲಿದ್ದು, ಹೊಸ ವರ್ಷದಿಂದ ನಿಗದಿತ ವ್ಯವಹಾರಕ್ಕಿಂತ ಹೆಚ್ಚಿನ ಪ್ರತಿ ವ್ಯವಹಾರಕ್ಕೆ ರೂ. 21 ವಿಧಿಸಲಾಗುತ್ತದೆ.
ಮೆಟ್ರೋ ನಗರದಲ್ಲಿ ನಿಗದಿತ ಮಿತಿಯನ್ನು ಮೂರಕ್ಕೆ ಇಳಿಸಲಾಗಿದೆ. ಅಲ್ಲದೆ, ಹಣ ವರ್ಗಾವಣೆಯ ವ್ಯವಹಾರವನ್ನು ಐದಕ್ಕೆ ಮಿತಿಗೊಳಿಸಲಾಗಿದೆ. ಹೆಚ್ಚಿನ ವ್ಯವಹಾರಕ್ಕೆ ಶುಲ್ಕ ವಿಧಿಸಲಾಗುತ್ತದೆ..