-->
Delhi HC upholds termination of SBI employee - ಗ್ರಾಹಕರ ಠೇವಣಿ ವಂಚನೆ: ಎಸ್‌ಬಿಐ ಉದ್ಯೋಗಿ ವಜಾ ಎತ್ತಿಹಿಡಿದ ದೆಹಲಿ ಹೈಕೋರ್ಟ್

Delhi HC upholds termination of SBI employee - ಗ್ರಾಹಕರ ಠೇವಣಿ ವಂಚನೆ: ಎಸ್‌ಬಿಐ ಉದ್ಯೋಗಿ ವಜಾ ಎತ್ತಿಹಿಡಿದ ದೆಹಲಿ ಹೈಕೋರ್ಟ್

ಗ್ರಾಹಕರ ಠೇವಣಿ ವಂಚನೆ: ಎಸ್‌ಬಿಐ ಉದ್ಯೋಗಿ ವಜಾ ಎತ್ತಿಹಿಡಿದ ದೆಹಲಿ ಹೈಕೋರ್ಟ್


ಹಿರಿಯ ನಾಗರಿಕರು ಇಟ್ಟ ಠೇವಣಿಯನ್ನು ತನ್ನ ಖಾತೆಗೆ ಜಮೆ ಮಾಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉದ್ಯೊಗಿಯ ವಜಾ ಮಾಡಿದ ಆದೇಶವನ್ನು ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿದೆ.







ಹಿರಿಯ ನಾಗರಿಕರು ಬ್ಯಾಂಕ್‌ನಲ್ಲಿ ಇಟ್ಟಿರುವ ಠೇವಣಿಗಳನ್ನು ವಂಚಿಸುವ ಘಟನೆಗಳು ಜನರಿಗೆ ವ್ಯವಸ್ಥೆಯಲ್ಲಿ ಇರುವ ನಂಬಿಕೆ ಮತ್ತು ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡುತ್ತವೆ. 


ಇದು ಕೇವಲ ವಿತ್ತೀಯ ನಷ್ಟ ಮಾತ್ರವಲ್ಲ. ಜೊತೆಗೆ ಗ್ರಾಹಕರ ಸದ್ಭಾವನೆ (goodwill) ಕಳೆದುಕೊಳ್ಳುತ್ತದೆ ಎಂದು ದೆಹಲಿ ಹೈಕೋರ್ಟ್ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.


Assistant General Manager State Bank of India Vs Ashok Kumar Bhatia (Delhi High Court)


ಹಿರಿಯ ನಾಗರಿಕ ಗ್ರಾಹಕರೊಬ್ಬರ ಠೇವಣಿ ಹಣವನ್ನು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೋಕ್ ಕುಮಾರ್ ಭಾಟಿಯಾ ಎಂಬವರನ್ನು ಎಸ್‌ಬಿಐ ವಜಾ ಮಾಡಿತ್ತು. 1983ರಲ್ಲಿ ಬ್ಯಾಂಕಿಗೆ ಸೇರಿದ್ದ ಭಾಟಿಯಾ, ಹಿರಿಯ ನಾಗರಿಕರ ವೈಯಕ್ತಿಕ ಖಾತೆಗಳನ್ನು ನಿರ್ವಹಿಸುವ ಏಕಗತವಾಕ್ಷಿ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು.



ಈ ಸಂದರ್ಭದಲ್ಲಿ ಹಿರಿಯ ನಾಗರಿಕರ ಹಣವನ್ನು ತಮ್ಮ ಖಾತೆಯಲ್ಲಿ ಜಮೆ ಮಾಡಿ ವಂಚನೆ ಎಸಗಿದ್ದರು. ಈತನ ತಪ್ಪು ಬಯಲಿಗೆ ಬರುತ್ತಿದ್ದಂತೆಯೇ ಆತ ಬಡ್ಡಿ ಸಹಿತ ಠೇವಣಿಯನ್ನು ಸಂಬಂಧಪಟ್ಟ ಗ್ರಾಹಕರಿಗೆ ಗಿಸಿದ್ದ.



ಆದರೂ ಆತನನ್ನು ಸೇವೆಯಿಂದ ವಜಾ ಮಾಡಲಾಗಿತ್ತು. ತನ್ನ ಕೃತ್ಯದಿಂದ ಬ್ಯಾಂಕಿಗೆ ಯಾವುದೇ ನಷ್ಟ ಆಗಿಲ್ಲ ಎಂದು ವಾದ ಮಾಡಿದ್ದ ಭಾಟಿಯಾ ಕೇಂದ್ರ ಸರ್ಕಾರದ ಔದ್ಯಮಿಕ ವಿವಾದಗಳು ಮತ್ತು ಕಾರ್ಮಿಕ ನ್ಯಾಯಾಲಯದ ಮೆಟ್ಟಿಲೇರಿದ್ದ. 201ರಲ್ಲಿ ವಜಾ ಆದೇಶವನ್ನು ರದ್ದುಗೊಳಿಸಿ ಆತನನ್ನು ವೇತನ ಸಹಿತ ಸೇವೆಗೆ ಮರು-ಸೇರಿಸಿಕೊಳ್ಳುವಂತೆ ಟ್ರಿಬ್ಯೂನಲ್ ಆದೇಶ ನೀಡಿತ್ತು.


ಈ ಆದೇಶವನ್ನು ಪ್ರಶ್ನಿಸಿ SBI ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು. ಇದು ಕೇವಲ ಆರ್ಥಿಕ ಅಪರಾಧವಲ್ಲ. ಅದರ ಜೊತೆಗೆ ಸಂಸ್ಥೆಯ ಸದ್ಭಾವನೆಗೂ ಆತ ಧಕ್ಕೆ ತಂದಿದ್ದಾನೆ ಎಂದು ವಜಾ ಆದೇಶವನ್ನು ಖಾಯಂ ಗೊಳಿಸಿತು.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200