-->
Secretly recording Telphone calls of Wife- ಪತ್ನಿಯ ಮೊಬೈಲ್ ಕರೆ ರಹಸ್ಯ ಮುದ್ರಿಕೆ: ಸಾಕ್ಷಿಯಾಗಿ ನೀಡಿದ ಗಂಡನ ಕೃತ್ಯಕ್ಕೆ ಹೈಕೋರ್ಟ್ ಹೇಳಿದ್ದೇನು...?

Secretly recording Telphone calls of Wife- ಪತ್ನಿಯ ಮೊಬೈಲ್ ಕರೆ ರಹಸ್ಯ ಮುದ್ರಿಕೆ: ಸಾಕ್ಷಿಯಾಗಿ ನೀಡಿದ ಗಂಡನ ಕೃತ್ಯಕ್ಕೆ ಹೈಕೋರ್ಟ್ ಹೇಳಿದ್ದೇನು...?

ಪತ್ನಿಯ ಮೊಬೈಲ್ ಕರೆ ರಹಸ್ಯ ಮುದ್ರಿಕೆ: ಸಾಕ್ಷಿಯಾಗಿ ನೀಡಿದ ಗಂಡನ ಕೃತ್ಯಕ್ಕೆ ಹೈಕೋರ್ಟ್ ಹೇಳಿದ್ದೇನು...?






ರಹಸ್ಯವಾಗಿ ಪತ್ನಿಯ ಮೊಬೈಲ್ ಫೋನ್ ಕಾಲ್‌ಗಳನ್ನು ರೆಕಾರ್ಡ್ ಮಾಡುವುದು ಖಾಸಗಿತನದ ಉಲ್ಲಂಘನೆ. ಇದನ್ನು ಸಾಕ್ಷಿಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಪಂಜಾಬ್ ಮತ್ತು ಹರ್ಯಾಣ ಹೇಳಿದೆ.



ಸಾಕ್ಷ್ಯ ಅಧಿನಿಯಮದ ನಿಯಮಗಳನ್ನು ಪಾಲಿಸಲು ಕೌಟುಂಬಿಕ ನ್ಯಾಯಾಲಯ ಕಟ್ಟುನಿಟ್ಟಾಗಿ

ಏಕಾಂಗಿ ನ್ಯಾಯಾಧೀಶ ನ್ಯಾಯಮೂರ್ತಿ ಲಿಸಾ ಗಿಲ್ ಅವರು ಕೌಟುಂಬಿಕ ನ್ಯಾಯಾಲಯವು ಕಟ್ಟುನಿಟ್ಟಾದ ನಿಯಮಬದ್ಧವಾಗಿಲ್ಲದಿದ್ದರೂ, ತನ್ನ ಪತ್ನಿಯ ದೂರವಾಣಿ ಸಂಭಾಷಣೆಗಳ ರಹಸ್ಯ ಧ್ವನಿಮುದ್ರಣಗಳನ್ನು ಹೊಂದಿರುವ ಸಿಡಿಯನ್ನು ಸ್ವೀಕರಿಸವಂತಿಲ್ಲ ಎಂದು ಏಕ ಸದಸ್ಯ ಪೀಠ ಹೇಳಿದೆ.



ಯಾವುದೇ ವ್ಯಕ್ತಿಯಾಗಲಿ, ತನ್ನ ಪತ್ನಿಯ ದೂರವಾಣಿ ಸಂಭಾಷಣೆಗಳನ್ನು ರಹಸ್ಯವಾಗಿ ಆಕೆಗೆ ತಿಳಿಯದಂತೆ ರೆಕಾರ್ಡ್ ಮಾಡುವುದು ಆಕೆಯ ಖಾಸಗಿತನದ ಉಲ್ಲಂಘನೆಯಾಗುತ್ತದೆ. ಮತ್ತು ಅಂತಹ ಸಂಭಾಷಣೆಗಳ ಪ್ರತಿಗಳನ್ನು ಕೌಟುಂಬಿಕ ನ್ಯಾಯಾಲಯಗಳು ಸಾಕ್ಷಿಯಾಗಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದೆ.




ಕೌಟುಂಬಿಕ ನ್ಯಾಯಾಲಯವು ಕಟ್ಟುನಿಟ್ಟಾದ ಸಾಕ್ಷ್ಯಾಧಾರಗಳಿಗೆ ಬದ್ಧವಾಗಿಲ್ಲದಿದ್ದರೂ, ಪತ್ನಿಯ ದೂರವಾಣಿ ಸಂಭಾಷಣೆಯ ರಹಸ್ಯ ರೆಕಾರ್ಡಿಂಗ್‌ಗಳನ್ನು ಒಳಗೊಂಡಿರುವ ಸಿಡಿಯನ್ನು ಸಾಕ್ಷಿಯಾಗಿ ಸ್ವೀಕರಿಸಲು ಸ್ವಾತಂತ್ರ್ಯವಿಲ್ಲ. ಇದು ಪತ್ನಿಯ ಖಾಸಗಿತನದ ಹಕ್ಕಿನ ಸ್ಪಷ್ಟವಾದ ಉಲ್ಲಂಘನೆ ಎಂದು ಏಕ-ನ್ಯಾಯಾಧೀಶ ನ್ಯಾಯಮೂರ್ತಿ ಲಿಸಾ ಗಿಲ್ ಹೇಳಿದ್ದಾರೆ,



"ಹೆಂಡತಿಯ ದೂರವಾಣಿ ಸಂಭಾಷಣೆಗಳನ್ನು ಅವಳಿಗೆ ತಿಳಿಯದೆ ರೆಕಾರ್ಡ್ ಮಾಡುವುದು ಆಕೆಯ ಖಾಸಗಿತನದ ಉಲ್ಲಂಘನೆಯಾಗುತ್ತದೆ. ಕೌಟುಂಬಿಕ ನ್ಯಾಯಾಲಯವು ಕಟ್ಟುನಿಟ್ಟಾದ ಸಾಕ್ಷ್ಯಾಧಾರದ ನಿಯಮಗಳಿಗೆ ಬದ್ಧವಾಗಿಲ್ಲದ ಕಾರಣ, ಸಿಡಿಯನ್ನು ಸ್ವೀಕರಿಸಲು ಸ್ವಾತಂತ್ರ್ಯವಿದೆ ಎಂದು ಹೇಳಲಾಗುವುದಿಲ್ಲ'' ಎಂದು ಕೋರ್ಟ್ ಹೇಳಿದೆ.



ಸಂಭಾಷಣೆಗಳನ್ನು ಒಳಗೊಂಡಿರುವ CD ಸಾಕ್ಷ್ಯವು ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ತನಗೆ ನೀಡಿದ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗಿದೆ. ಈ ಸಂಭಾಷಣೆ ತನ್ನ ಅರಿವು ಅಥವಾ ಸಮ್ಮತಗಿ ಇಲ್ಲದೆ ರೆಕಾರ್ಡ್ ಮಾಡಲಾಗಿದೆ ಎಂದು ಮಹಿಳೆ ವಾದಿಸಿದರು



ಮಾನ್ಯ ಕೌಟುಂಬಿಕ ನ್ಯಾಯಾಲಯವು ಭಾರತೀಯ ಸಾಕ್ಷ್ಯ ಕಾಯಿದೆಯ ಸೆಕ್ಷನ್ 65ನ್ನು ನಿರ್ಲಕ್ಷಿಸಿದೆ. ಮೊಬೈಲ್ ಫೋನ್ ಮೂಲಕ ರೆಕಾರ್ಡ್ ಮಾಡಿದ್ದರೆ, ಅದರ ರೆಕಾರ್ಡಿಂಗ್ ಮತ್ತು ನಕಲುಗಳ ಸಿಡಿಗಳನ್ನು ಅದರ ಪುರಾವೆಯಾಗಿ ಸ್ವೀಕರಿಸಲಾಗುವುದಿಲ್ಲ. ಇಲ್ಲಿ ಸಾಕ್ಷ್ಯ ಅಧಿನಿಯಮದ ಕಲಂ 65-ಬಿ'ಯನ್ನು ಅನುಸರಿಸಿಲ್ಲ" ಎಂದು ಅವರು ವಾದಿಸಿದರು.



ನ್ಯಾಯಾಲಯದ ಮುಂದೆ ಹಾಜರುಪಡಿಸಲು ಬಯಸಿದ ಸಂಭಾಷಣೆಯು ನ್ಯಾಯಾಲಯಕ್ಕೆ ವಿಚ್ಛೇದನ ಅರ್ಜಿ ಸಲ್ಲಿಸುವ ವರ್ಷದ ಮೊದಲು ಮಾಡಲಾಗಿದೆ ಎಂದು ಆರೋಪಿಸಲಾಗಿದೆ ಮತ್ತು ಅಂತಹ ಸಂಭಾಷಣೆಗಳ ಸತ್ಯಾಸತ್ಯತೆಯನ್ನು ಸರಿಯಾಗಿ ತೆಗೆದುಕೊಂಡರೂ ಸಹ ದೃಢೀಕರಿಸಲಾಗುವುದಿಲ್ಲ. ಅರ್ಜಿದಾರರ ಸಮ್ಮತಿ ಅಥವಾ ಜ್ಞಾನವಿಲ್ಲದೆ ದಾಖಲಾದ ಸಾಕ್ಷ್ಯಗಳಲ್ಲಿ ಅದೂ ಸ್ವೀಕಾರಾರ್ಹವಲ್ಲ ಎಂದು ಹೈಕೋರ್ಟ್ ಹೇಳಿದೆ.



ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿರ್ಬರ್ಟೀಸ್ Vs ಭಾರತದ ಸರ್ಕಾರ (1997 1 SCC 301)

ವಿಶಾಲ್ ಕೌಶಿಕ್ Vs ಕೌಟುಂಬಿಕ ನ್ಯಾಯಾಲಯ ಮತ್ತು ಇನ್ನೊಬ್ಬರು (ರಾಜಸ್ತಾನ ಹೈಕೋರ್ಟ್)

ಈ ಪ್ರಕರಣಗಳನ್ನು ಉಲ್ಲೇಖಿಸಿದ ಮಾನ್ಯ ನ್ಯಾಯಾಲಯ ವಿಚಾರಣಾ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಬದಿಗಿರಿಸಿತು.

Ads on article

Advertise in articles 1

advertising articles 2

Advertise under the article