-->
Welfare Fund Scam- CBI investigation- ಬಾರ್ ಕೌನ್ಸಿಲ್ "ಕಲ್ಯಾಣ ನಿಧಿ" ಹಗರಣ: ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ

Welfare Fund Scam- CBI investigation- ಬಾರ್ ಕೌನ್ಸಿಲ್ "ಕಲ್ಯಾಣ ನಿಧಿ" ಹಗರಣ: ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ

ಬಾರ್ ಕೌನ್ಸಿಲ್ "ಕಲ್ಯಾಣ ನಿಧಿ" ಹಗರಣ: ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ






ಮಹತ್ವದ ಬೆಳವಣಿಗೆಯೊಂದರಲ್ಲಿ ಕೇರಳ ರಾಜ್ಯ ವಕೀಲರ ಪರಿಷತ್ತಿನ ₹7.5 ಕೋಟಿ ಕಲ್ಯಾಣ ನಿಧಿ ಹಗರಣದ ಕುರಿತು ಸಿಬಿಐ ತನಿಖೆಗೆ ಕೇರಳ ಹೈಕೋರ್ಟ್ ಆದೇಶಿಸಿದೆ.



ನಿಧಿಯ ಲೆಕ್ಕಪತ್ರ ಸಹಿತ ಎಲ್ಲ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಹೊತ್ತಿರುವ ಟ್ರಸ್ಟಿ ಸಮಿತಿಯ ಬಗ್ಗೆ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. 


ಅತ್ಯಂತ ಗುರುತರ ಜವಾಬ್ದಾರಿಯನ್ನು ಹೊಂದಿರುವ ವ್ಯವಸ್ಥಾಪನ ಸಮಿತಿಯು ವಕೀಲರ ಕಲ್ಯಾಣ ನಿಧಿಯ ಯಾವುದೇ ದಾಖಲೆಗಳನ್ನು ನಿರ್ವಹಿಸಿಲ್ಲ, ಲೆಕ್ಕಪತ್ರವನ್ನೂ ಇಟ್ಟಿಲ್ಲ ಹಾಗೂ ಶಾಸನಬದ್ಧ ಅಗತ್ಯವಾಗಿರುವ ಲೆಕ್ಕಪರಿಶೋಧನೆಯನ್ನು ಕಳೆದ ಒಂದು ದಶಕದಿಂದ ಸರಿಯಾಗಿ ಮಾಡಿಲ್ಲ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.



ಕೇರಳ ರಾಜ್ಯ ವಕೀಲರ ಪರಿಷತ್ತಿನ ಕಲ್ಯಾಣ ನಿಧಿಯಿಂದ ₹ 7.5 ಕೋಟಿಗೂ ಹೆಚ್ಚು ದುರುಪಯೋಗವನ್ನು ಒಳಗೊಂಡ ಹಗರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ-ಸಿಬಿಐಗೆ ಹಸ್ತಾಂತರಿಸುವಂತೆ ಕೇರಳ ಹೈಕೋರ್ಟ್ ಆದೇಶ ನೀಡಿದೆ.


(Adv ಖಾಲಿದ್ NA & Ors. v Union of India & Ors.)


ಹೈಕೋರ್ಟ್, ಕಳೆದ 10 ವರ್ಷಗಳ ಕಾಲ ನಿರಂತರವಾಗಿ ನಡೆದ ಈ ಹಗರಣದ ವ್ಯಾಪಕತೆ ಮತ್ತು ಅಗಾಧತೆಯನ್ನು ಪರಿಗಣಿಸಿತು. ಜೊತೆಗೆ, ವಕೀಲರ ಕಲ್ಯಾಣಕ್ಕಾಗಿ ಸಂಗ್ರಹಿಸಿದ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದ ಪ್ರಕರಣವನ್ನು ಪರಿಗಣಿಸಿ ಈ ಹಗರಣದ ಸಮಗ್ರ ತನಿಖೆಗೆ ಸಿಬಿಐ ಸೂಕ್ತ ಮತ್ತು ಅಗತ್ಯ ಎಂದು ನ್ಯಾಯಮೂರ್ತಿ ಸುನಿಲ್ ಥಾಮಸ್ ಅಭಿಪ್ರಾಯಪಟ್ಟರು.



ಈ ಹಗರಣ ಎಲ್ಲಾ ವಕೀಲರ ಕಲ್ಯಾಣಕ್ಕೆ ಮತ್ತು ಅವರ ಹಿತಾಸಕ್ತಿಗಳಿಗೆ ಅನ್ವಯಿಸುತ್ತದೆ, ಅವರು ತಮ್ಮ ಕೊಡುಗೆಯನ್ನು ಹೇಗೆ ದುರುಪಯೋಗಪಡಿಸಿಕೊಂಡರು ಎಂದು ತಿಳಿದುಕೊಳ್ಳುವ ಹಕ್ಕನ್ನು ವಕೀಲರು ಹೊಂದಿದ್ದಾರೆ ಎಂದು ಹೈಕೋರ್ಟ್ ಹೇಳಿತು.


'ಬಾರ್ ಕೌನ್ಸಿಲ್ ಮತ್ತು ವಕೀಲರ ಕಲ್ಯಾಣ ನಿಧಿ ಟ್ರಸ್ಟ್‌ನ ಬಗ್ಗೆ ಸಾರ್ವಜನಿಕರು ನಂಬಿಕೆ ಮತ್ತು ಗೌರವ ಇಟ್ಟುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ಹಗರಣ ಗಂಭೀರ ಸ್ವರೂಪದ ಅಪರಾಧವಾಗಿದ್ದು, ಅದರ ಆಳವಾದ ಕೃತ್ಯ ಮತ್ತು ವಿಕೃತ ಸ್ವರೂಪವನ್ನು ತನಿಖೆ ನಡೆಸಲು ವಿಶೇಷ ಸಂಸ್ಥೆಯ ಅಗತ್ಯವಿದೆ' ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ.


Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200