-->
ಸರಕಾರಿ ನೌಕರರ ಸಂಘದ 33 ಸೆಂಟ್ಸ್ ಜಮೀನು ವಿವಾದ- ಎಸಿ ಕೋರ್ಟ್ ಆದೇಶಕ್ಕೆ ತಡೆಯಾಜ್ಞೆ

ಸರಕಾರಿ ನೌಕರರ ಸಂಘದ 33 ಸೆಂಟ್ಸ್ ಜಮೀನು ವಿವಾದ- ಎಸಿ ಕೋರ್ಟ್ ಆದೇಶಕ್ಕೆ ತಡೆಯಾಜ್ಞೆ


ದ. ಕ. ಜಿಲ್ಲಾ ಸರಕಾರಿ ನೌಕರರ ಸಂಘದ  33 ಸೆಂಟ್ಸ್ ಜಮೀನನ್ನು ಸರಕಾರಕ್ಕೆ ನಿಹಿತಪಡಿಸಿದ  ಎ.ಸಿ.ಕೋಟಿ೯ನ      ಆದೇಶಕ್ಕೆ ತಡೆಯಾಜ್ಞೆ ನೀಡಿದ ಮ೦ಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯ

ನಗರದ ಹೃದಯಭಾಗದಲ್ಲಿ ಮಿನಿ ವಿಧಾನಸೌಧ ಕಟ್ಟಡದ ಬಳಿಯಿರುವ ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸ೦ಘದ ಸ್ವಾಧೀನ ಮತ್ತು ಒಡೆತನಕ್ಕೊಳಪಟ್ಟ ಮ೦ಗಳೂರು ತಾಲೂಕು ಅತ್ತಾವರ ಗ್ರಾಮದ ಸರ್ವೆ ನಂ.278/2B ಗೆ ಒಳಪಟ್ಟ 33 ಸೆಂಟ್ಸ್ ಸ್ಥಳದ ಪಹಣಿಯನ್ನು ರದ್ದುಪಡಿಸಿ ಸರಕಾರದ ಹೆಸರಿಗೆ ನಿಹಿತ ಪಡಿಸುವಂತೆ ಹಾಗೂ ಸದರಿ ಸ್ಥಿರಾಸ್ಥಿಯಲ್ಲಿರುವ ಕಟ್ಟಡವನ್ನು ಜಿಲ್ಲಾ ಸಂಘದ ಸ್ವಾಧೀನತೆಯಿಂದ ಬಿಡಿಸಿ ಸರಕಾರದ ವಶಕ್ಕೆ ಪಡೆದು ಅಕ್ರಮ ಎಸಗಿದ ಸಂಬಂಧಪಟ್ಟ ಜಿಲ್ಲಾ ಪದಾಧಿಕಾರಿಗಳ ವಿರುದ್ಧ ಭೂ ಕಂದಾಯ ಕಾಯ್ದೆ 192 ಎ ಪ್ರಕಾರ ಕ್ರಮ ಕೈಗೊಳ್ಳಲು ಮ೦ಗಳೂರಿನ ತಹಸೀಲ್ದಾರ್ ರವರಿಗೆ ಮಂಗಳೂರಿನ ಸಹಾಯಕ ಆಯುಕ್ತರು ಮತ್ತು ಉಪವಿಭಾಗ ದಂಡಾಧಿಕಾರಿಗಳ ನ್ಯಾಯಾಲಯ ದಿನಾ೦ಕ 30.11.2021 ರ೦ದು ಆದೇಶ ನೀಡಿತ್ತು.

1958 ರಲ್ಲಿ ಮೈಸೂರಿನ ಉಪವಿಭಾಗಾಧಿಕಾರಿಯವರ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸಂಘಕ್ಕೆ ಮಂಜೂರಾದ 33  ಸೆಂಟ್ಸ  ಜಮೀನಿನ ದಾಖಲಾತಿಯು ಅತ್ತಾವರ  ಗ್ರಾಮದ ಸಪ್ಲಿಮೆಂಟ್ ಅಡ೦ಗಲ್ ನಲ್ಲಿ ನಮೂದಿಸಲ್ಪಟ್ಟಿದೆ. ಜಮೀನಿನ ಪಹಣಿಯನ್ನು ಜಿಲ್ಲಾ ಸಂಘದ ಹೆಸರಿಗೆ MR No.10/91-92 ದಿನಾ೦ಕ 9.9.1991ರಲ್ಲಿ ದಾಖಲಿಸಲಾಯಿತು. 

ಜಮೀನಿನ ಒಡೆತನದ  ವಿವಾದದ ಕುರಿತು ಕಂದಾಯ ನಿರೀಕ್ಷಕರ ವರದಿಯನ್ನು ಪಡೆದ ತಾಲ್ಲೂಕು ತಹಶೀಲ್ದಾರರು ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ಪ್ರಕರಣ ಸಂಖ್ಯೆ LND/PDR/117/2018-19 ರ ಪ್ರಕಾರ ಮೇಲ್ಮನವಿ ದಾಖಲಿಸಿದರು. ವಿಚಾರಣೆಯ ವೇಳೆಯಲ್ಲಿ ಮಂಜೂರಾತಿ ಆದೇಶವನ್ನು ಹಾಜರುಪಡಿಸಿಲ್ಲ ವೆಂಬ ಕಾರಣಕ್ಕೆ ಜಮೀನು ಸರಕಾರಕ್ಕೆ ಸೇರಿದ ಜಮೀನು ಆಗಿರುವುದೆ೦ಬ  ನಿಷ್ಕರ್ಷೆಗೆ ಬಂದ ಎ.ಸಿ. ಕೋರ್ಟ್ ಜಮೀನಿನ ಒಡೆತನವನ್ನು ಸರಕಾರಕ್ಕೆ ನಿಹಿತಪಡಿಸಿ ದಿನಾಂಕ 30.11.2021 ರಂದು ಆದೇಶ ಹೊರಡಿಸಿತು.

ಕಳೆದ ಆರು ದಶಕಗಳಿಂದ ತನ್ನ ಸ್ವಾಧೀನದಲ್ಲಿದ್ದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಕಟ್ಟಡ ಸಹಿತ ಸ್ಥಿರಾಸ್ತಿಯನ್ನು ರಕ್ಷಿಸಿಕೊಳ್ಳಲು ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಎ.ಸಿ. ಕೋರ್ಟಿನ ಆದೇಶ ರದ್ದುಪಡಿಸುವಂತೆ ಜಿಲ್ಲಾ ಸಂಘವು ದಾವೆ ಹೂಡಿತ್ತು. ಸದರಿ ದಾವೆಯಲ್ಲಿ ಸಲ್ಲಿಸಲಾದ ಮಧ್ಯಂತರ ಅರ್ಜಿಯ ಮೇಲೆ ಆದೇಶ ಹೊರಡಿಸಿದ ನ್ಯಾಯಾಲಯವು ದಾವೆಯ ಮುಂದಿನ ವಾಯಿದೆ ವರೆಗೆ ಎ.ಸಿ. ಕೋರ್ಟಿನ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200