-->
Co-Op Societies Act- ಸಹಕಾರ ಸಂಘಗಳ ಅವ್ಯವಹಾರ: ಒಬ್ಬ ಸದಸ್ಯನ ದೂರಿಗೂ ವಿಚಾರಣೆ ನಡೆಸಬಹುದು- ಕರ್ನಾಟಕ ಹೈಕೋರ್ಟ್

Co-Op Societies Act- ಸಹಕಾರ ಸಂಘಗಳ ಅವ್ಯವಹಾರ: ಒಬ್ಬ ಸದಸ್ಯನ ದೂರಿಗೂ ವಿಚಾರಣೆ ನಡೆಸಬಹುದು- ಕರ್ನಾಟಕ ಹೈಕೋರ್ಟ್

ಸಹಕಾರ ಸಂಘಗಳ ಅವ್ಯವಹಾರ: ಒಬ್ಬ ಸದಸ್ಯನ ದೂರಿಗೂ ವಿಚಾರಣೆ ನಡೆಸಬಹುದು- ಕರ್ನಾಟಕ ಹೈಕೋರ್ಟ್






ಸಹಕಾರ ಸಂಘದ ಒಬ್ಬನೇ ಒಬ್ಬ ಸದಸ್ಯ ಹಣಕಾಸು ವ್ಯವಹಾರದ ಬಗ್ಗೆ ದೂರು ನೀಡಿದರೆ ಅದನ್ನು ಸಹಕಾರ ಸಂಘಗಳ ನಿಬಂಧಕರು ಗಂಭಿರವಾಗಿ ಪರಿಗಣಿಸಿ ವಿಚಾರಣೆ ಮಾಡಬಹುದು ಎಂದು ಹೈಕೋರ್ಟ್ ಹೇಳಿದೆ.




ಮೈಸೂರು ಅರ್ಥ್ ಮೂವರ್ಸ್ ಎಂಪ್ಲಾಯೀಸ್ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿ ಲಿ ತನ್ನ ವಿರುದ್ಧ ವಿಚಾರಣೆ ನಡೆಸಲು ಸಕ್ಷಮ ಪ್ರಾಧಿಕಾರವಾದ ಸಹಕಾರ ನಿಬಂಧಕರು ಜಾರಿ ಮಾಡಿರುವ ನೋಟಿಸ್ ರದ್ದುಪಡಿಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.




ಸಹಕಾರ ಸಂಘ ಸಲ್ಲಿಸಿದ್ದ ಆಕ್ಷೇಪಣಾ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಆರ್. ದೇವದಾಸ್ ಅವರಿದ್ದ ಪೀಠ ಈ ಮಹತ್ವದ ಆದೇಶ ಮಾಡಿದೆ.



ಸಹಕಾರ ನಿಬಂಧಕರು ನಡೆಸುವ ವಿಚಾರಣೆಯಲ್ಲಿ ತನ್ನ ವಾದ ಮಂಡಿಸಲು ಸೊಸೈಟಿಗೆ ಮುಕ್ತ ಅವಕಾಶವಿದೆ. ಒಬ್ಬ ಸದಸ್ಯ ದೂರು ನೀಡಿದರೂ ವಿಚಾರಣೆ ನಡೆಸುವ ಮತ್ತು ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಳ್ಳುವ ಅಧಿಕಾರವನ್ನು ಸಹಕಾರ ನಿಬಂಧಕರು ಹೊಂದಿದ್ದಾರೆ ಎಂಬುದಾಗಿ 2001ರಲ್ಲೇ ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು ನೀಡಿದೆ ಎಂಬುದನ್ನು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.




ಈ ಪ್ರಕರಣದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವ ಯಾವ ಅಗತ್ಯವೂ ಕಂಡುಬರುವುದಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಲಾಗಿದೆ.



ಘಟನೆಯ ವಿವರ

ಮೈಸೂರು ಅರ್ಥ್ ಮೂವರ್ಸ್ ಎಂಪ್ಲಾಯೀಸ್ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ವಿರುದ್ದ ಅದರ ಸದಸ್ಯರೊಬ್ಬರು ಹಣಕಾಸು ಅವ್ಯವಹಾರ ಕುರಿತು ಸಹಕಾರ ಇಲಾಖೆಗೆ ದೂರು ಸಲ್ಲಿಸಿದ್ದರು.



ದೂರನ್ನು ಪರಿಗಣಿಸಿದ ಮೈಸೂರಿನ ಸಹಕಾರ ಸಂಘಗಳ ಜಂಟಿ ನಿಬಂಧಕರು ಅರ್ಜಿದಾರ ಸೊಸೈಟಿಯ ಲೆಕ್ಕ ಪುಸ್ತಕಗಳ ಪರಿಶೀಲನೆ ನಡೆಸಲು 2015ರ ಜನವರಿ 2ರಂದು ಆದೇಶ ನೀಡಿದ್ದರು. ಅದಕ್ಕಾಗಿ ಅಧಿಕಾರಿಯೊಬ್ಬರನ್ನು ನೇಮಿಸಿದ್ದರು. ವಿಚಾರಣೆ ಹಿನ್ನೆಲೆಯಲ್ಲಿ ಸೊಸೈಟಿಗೆ ನೋಟಿಸ್ ಜಾರಿ ಮಾಡಲಾಗಿತ್ತು.



ಈ ನೋಟಿಸನ್ನು ವಜಾಗೊಳಿಸಬೇಕು ಎಂದು ಸಂಘ ಹೈಕೋರ್ಟ್ ಮೆಟ್ಟಿಲೇರಿತ್ತು. ನಿಯಮಗಳ ಪ್ರಕಾರ ಸಹಕಾರ ಸಂಘದ ಒಟ್ಟು ಸದಸ್ಯರ ಮೂರನೇ ಒಂದು ಭಾಗದಷ್ಟು ಸದಸ್ಯರು ಮನವಿ ಸಲ್ಲಿಸಿದಾಗ ಮಾತ್ರ ವಿಚಾರಣೆಗೆ ಆದೇಶಿಸಬಹುದು. ಈ ಪ್ರಕರಣದಲ್ಲಿ ಕೇವಲ ಒಬ್ಬ ಸದಸ್ಯ ದೂರು ನೀಡಿದ್ದು, ಆದೇಶ ಕಾನೂನು ಬಾಹಿರ ಎಂದು ವಾದಿಸಿತ್ತು. 




Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200