-->
IPC Sec 420: ಮದುವೆ ಭರವಸೆ ಉಲ್ಲಂಘಿಸುವುದು ವಂಚನೆಯಲ್ಲ: ಕರ್ನಾಟಕ ಹೈಕೋರ್ಟ್

IPC Sec 420: ಮದುವೆ ಭರವಸೆ ಉಲ್ಲಂಘಿಸುವುದು ವಂಚನೆಯಲ್ಲ: ಕರ್ನಾಟಕ ಹೈಕೋರ್ಟ್

IPC Sec 420: ಮದುವೆ ಭರವಸೆ ಉಲ್ಲಂಘಿಸುವುದು ವಂಚನೆಯಲ್ಲ: ಕರ್ನಾಟಕ ಹೈಕೋರ್ಟ್






ಮದುವೆಯಾಗುವ ಭರವಸೆಯನ್ನು ನೀಡಿ ಬಳಿಕ ಅದನ್ನು ಉಲ್ಲಂಘಿಸುವುದು ಭಾರತೀಯ ದಂಡ ಸಂಹಿತೆಯ ಕಲಂ. 420ರ ಅಡಿಯಲ್ಲಿ ವಂಚನೆಯ ಅಪರಾಧವಾಗುವುದಿಲ್ಲ ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.



ವೆಂಕಟೇಶ್ ಎಂಬಾತ ಪಿರ್ಯಾಧಿ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಆಕೆಯನ್ನು ಪ್ರೀತಿಸಿ, ನಂತರ ವಿವಾಹವಾಗದೇ, ಬೇರೊಬ್ಬ ಯುವತಿಯನ್ನು ಮದುವೆಯಾಗಿದ್ದ. ನಂತರ ಪಿರ್ಯಾದಿಯು ಯುವಕ ತನಕ ಮೋಸ‌ ಮಾಡಿರುವುದಾಗಿ ನೊಂದ ಯುವತಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಳು.



ಆ ದೂರನ್ನು ರದ್ದುಪಡಿಸಬೇಕು ಎಂದು ಕೋರಿ ಪ್ರಕರಣದ ಆರೋಪಿ ವೆಂಕಟೇಶ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.



ಕೇವಲ ಮದುವೆಯಾಗುವ ಭರವಸೆ ನೀಡಿ ಬಳಿಕ ಅದನ್ನು ಪಾಲಿಸದೆ ಇರುವುದು ಭಾರತೀಯ ದಂಡ ಸಂಹಿತೆಯ ಕಲಂ. 415ರ ಅಡಿಯಲ್ಲಿ ವಂಚನೆಯಾಗುವುದಿಲ್ಲ. ಅದೂ ಅಲ್ಲದೆ, ಈ ಕಲಂಗಳನ್ನು ವಿಧಿಸಲು ಯಾವುದೇ ರೀತಿಯ ಅಂಶಗಳು ದೂರಿನಲ್ಲಿ ಇಲ್ಲ ಎಂದು ವಾದಿಸಿದ ಅರ್ಜಿದಾರ ಪರ ವಕೀಲರು, ಆರೋಪಿಯುವ ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದಾರೆ. ಆದರೆ, ಪೊಲೀಸರು ಈ ದೂರಿನ ಬಗ್ಗೆ ಯಾವುದೇ ತನಿಖೆಯನ್ನು ನಡೆಸಿಲ್ಲ ಎಂದು ಮಾಹಿತಿ ನೀಡಿದರು.



ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಟರಾಜನ್ ಅವರಿದ್ದ ಏಕ ಸದಸ್ಯ ಪೀಠವು, ಮದುವೆಯಾಗುವ ಭರವಸೆಯನ್ನು ಉಲ್ಲಂಘಿಸುವುದು ಭಾರತೀಯ ದಂಡ ಸಂಹಿತೆಯ ಕಲಂ. 420ರ ಅಡಿಯಲ್ಲಿ ವಂಚನೆಯ ಅಪರಾಧವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟು ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌( ಪ್ರ.ವ.ವ)ಯನ್ನು ರದ್ದುಗೊಳಿಸಿದೆ.



K.U.Prabhu Raj Vs. State by Sub Inspector of Police, A.W.P.S. Tambaram and another ಪ್ರಕರಣದಲ್ಲಿ ಮಾನ್ಯ ಮದ್ರಾಸ್ ಹೈಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿತು.




(that, not abiding with the promise of marriage will not amount to the offence of chearing under sec 420 of the indian penal code)


Ads on article

Advertise in articles 1

advertising articles 2

Advertise under the article