-->
HC stays trial against IPS Officer- ಸರ್ಕಾರಿ ನೌಕರರ ವಿರುದ್ಧ ಮಾನನಷ್ಟ ಪ್ರಕರಣ: ನಿಯಮ ಅನುಸರಿದಿದ್ದರೆ ವಿಚಾರಣೆಗೆ ತಡೆ- ಹೈಕೋರ್ಟ್ ಮಹತ್ವದ ತೀರ್ಪು

HC stays trial against IPS Officer- ಸರ್ಕಾರಿ ನೌಕರರ ವಿರುದ್ಧ ಮಾನನಷ್ಟ ಪ್ರಕರಣ: ನಿಯಮ ಅನುಸರಿದಿದ್ದರೆ ವಿಚಾರಣೆಗೆ ತಡೆ- ಹೈಕೋರ್ಟ್ ಮಹತ್ವದ ತೀರ್ಪು

ಸರ್ಕಾರಿ ನೌಕರರ ವಿರುದ್ಧ ಮಾನನಷ್ಟ ಪ್ರಕರಣ: ನಿಯಮ ಅನುಸರಿದಿದ್ದರೆ ವಿಚಾರಣೆಗೆ ತಡೆ- ಹೈಕೋರ್ಟ್ ಮಹತ್ವದ ತೀರ್ಪು


  • ಸರ್ಕಾರಿ ನೌಕರರ ವಿರುದ್ಧ ಮಾನನಷ್ಟ ಪ್ರಕರಣ
  • ಒಂದು ಅಧಿಕಾರಿ ವಿರುದ್ಧ ಇನ್ನೊಂದು ಅಧಿಕಾರಿಯ ದೂರು
  • ಮಾನನಷ್ಟ ಮೊಕದ್ದಮೆ ಹಾಕುವ ಮುನ್ನ ಯಾವ ಕ್ರಮ ಅನುಸರಿಸಬೇಕು...?
  • ಮಾನನಷ್ಟ ಪ್ರಕರಣ; ವಿಚಾರಣೆ ತಡೆ ಯಾಕೆ?- ಹೈಕೋರ್ಟ್ ನೀಡಿದ ಕಾರಣ ಇದು..
ಐಪಿಎಸ್ ಅಧಿಕಾರಿ ಡಿ.ರೂಪಾ ವಿರುದ್ಧ ನಿವೃತ್ತ ಡಿಜಿಪಿ ಎಚ್.ಎನ್ ಸತ್ಯನಾರಾಯಣ ರಾವ್ ದಾಖಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿ ಮಹತ್ವದ ಆದೇಶ ಹೊರಡಿಸಿದೆ.
ತಮ್ಮ ವಿರುದ್ಧದ ಮಾನನಷ್ಟ ಮೊಕದ್ದಮೆ ಕುರಿತ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದು ಮಾಡುವಂತೆ ಕೋರಿ IPS ಅಧಿಕಾರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಈ ತೀರ್ಪು ನೀಡಿದೆ.
ಮುಂದಿನ ವಿಚಾರಣೆವರೆಗೆ ಈ ತಡೆಯಾಜ್ಞೆ ನೀಡಲಾಗಿದ್ದು, ದೂರುದಾರ ಎಚ್. ಎನ್. ಸತ್ಯನಾರಾಯಣ ರಾವ್‌ ಅವರಿಗೆ ನೋಟಿಸ್ ಜಾರಿಗೊಳಿಸಿ ಆಕ್ಷೇಪಣೆಗೆ ಅವಕಾಶ ನೀಡಿದೆ.ತಡೆಯಾಜ್ಞೆಗೆ ಕಾರಣಗಳೇನು..?


1) ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 199 ಪ್ರಕಾರ ಸರ್ಕಾರಿ ನೌಕರರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬೇಕಾದರೆ ವಿಶೇಷ ನಿಯಮ ಅನುಸರಿಸಬೇಕು.


2) ಸರ್ಕಾರಿ ಅಭಿಯೋಜಕರ ಮೂಲಕವೇ ಸೆಷನ್ಸ್ ನ್ಯಾಯಾಲಯಕ್ಕೆ ಮಾನನಷ್ಟ ಮೊಕದ್ದಮೆ ದಾಖಲಿಸಬೇಕು.


3) ಮಾನಹಾನಿ ವರದಿ ಪ್ರಕಟಗೊಂಡ ಆರು ತಿಂಗಳ ಒಳಗೆ ಮೊಕದ್ದಮೆ ದಾಖಲಿಸಬೇಕು.ಸತ್ಯನಾರಾಯಣ ಅವರು ಸರ್ಕಾರಿ ಸೇವಕರಾಗಿರುವ ಡಿ.ರೂಪಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವಾಗ ಈ ನಿಯಮ ಪಾಲಿಸಿಲ್ಲ ಎಂಬುದನ್ನು ರೂಪಾ ಪರ ವಕೀಲರು ನ್ಯಾಯಪೀಠಕ್ಕೆ ವಿವರಿಸಿದರು.


ಜೊತೆಗೆ, ಸರ್ಕಾರಿ ನೌಕರರೊಬ್ಬರು ಮತ್ತೋರ್ವ ಸರ್ಕಾರಿ ನೌಕರರ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಸುವುದು ಮಾನನಷ್ಟ ಪ್ರಕರಣದ ವ್ಯಾಪ್ತಿಗೆ ಬರುವುದಿಲ್ಲ. ತಮ್ಮ ಕರ್ತವ್ಯದ ಭಾಗವಾಗಿ ಈ ವರದಿ ಸಲ್ಲಿಸಿರುತ್ತಾರೆ. ಆದರೂ, ದೂರುದಾರರು ದಾಖಲಿಸಿದ ಮಾನನಷ್ಟ ಮೊಕದ್ದಮೆ ದೂರು ಪರಿಗಣಿಸಿ ಡಿ.ರೂಪಾ ವಿರುದ್ಧ ನ್ಯಾಯಾಲಯ ತನಿಖೆಗೆ ಆದೇಶಿಸಿರುವುದು, ಕಾಗ್ನಿಜೆನ್ಸ್ ತೆಗೆದುಕೊಂಡು ಸಮನ್ಸ್ ಜಾರಿ ಮಾಡಿರುವುದು ಕಾನೂನು ಬಾಹಿರ ಎಂದು ವಕೀಲರು ವಾದಿಸಿದರು.


ಘಟನೆಯ ವಿವರ
ರಾಜ್ಯ ಬಂಧೀಖಾನೆ ಇಲಾಖೆಯ ಡಿಜಿಐ ಆಗಿದ್ದ ಡಿ.ರೂಪಾ 2017ರ ಜುಲೈ 12ರಂದು ಸರ್ಕಾರಕ್ಕೆ ವರದಿ ಸಲ್ಲಿಸಿ, ಆಗಿನ ಬಂಧೀಖಾನೆ ಇಲಾಖೆ DGP ಆಗಿದ್ದ ಸತ್ಯನಾರಾಯಣ ರಾವ್ ವಿರುದ್ಧ ಭ್ರಷ್ಟಾಚಾರ ನಡೆಸಿದ ಬಗ್ಗೆ ಮಾಹಿತಿ ನೀಡಿದ್ದರು.DGP ಸತ್ಯನಾರಾಯನ ರಾವ್ ಅವರು 2 ಕೋಟಿ ರೂ. ಲಂಚ ಪಡೆದು ಜೈಲಿನಲ್ಲಿ ಬಂಧಿತ AIADMK ನಾಯಕಿ ಶಶಿಕಲಾ ಅವರಿಗೆ ವಿಶೇಷ ಸೌಲಭ್ಯ ಕಲ್ಪಿಸಿದ್ದಾರೆ ಎಂದು ವರದಿ ಮಾಡಿದ್ದರು. ಇದು ಸಾರ್ವಜನಿಕ ವಲಯದಲ್ಲಿ ಭಾರೀ ಸದ್ದು ಮಾಡಿತ್ತು.ಇದಾಗಿ, ಸತ್ಯನಾರಾಯಣ ರಾವ್ 2017ರ ಜುಲೈ 31ರಂದು ಸೇವೆಯಿಂದ ನಿವೃತ್ತರಾದರು. ಬಳಿಕ, ಡಿ.ರೂಪಾ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದು, ತಮ್ಮ ಘನತೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿ 2018ರ ಫೆಬ್ರವರಿ 5ರಂದು ಕೋರ್ಟ್ ಮೆಟ್ಟಿಲೇರಿದ್ದರು.


ನಗರದ 9ನೇ ACCM ನ್ಯಾಯಾಲಯಕ್ಕೆ 20 ಕೋಟಿ ರೂಪಾಯಿ ಮೊತ್ತಕ್ಕೆ ಖಾಸಗಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ದೂರು ದಾಖಲಿಸಿಕೊಡಿದ್ದ ACCM ಕೋರ್ಟ್ ಡಿ.ರೂಪಾ ಅವರಿಗೆ ಸಮನ್ಸ್ ಜಾರಿ ಮಾಡಿತ್ತು.

Ads on article

Advertise in articles 1

advertising articles 2

Advertise under the article