-->
Hijab is not part of Uniform- ಹಿಜಬ್ ಸಮವಸ್ತ್ರದ ಭಾಗವಲ್ಲ, ಅದಕ್ಕೆ ಅನುಮತಿ ನೀಡಿದರೆ ಜಾತ್ಯತೀತತೆ ಮೇಲೆ ಪರಿಣಾಮ: ಕೇರಳ ಸರ್ಕಾರ ಮಹತ್ವದ ಆದೇಶ

Hijab is not part of Uniform- ಹಿಜಬ್ ಸಮವಸ್ತ್ರದ ಭಾಗವಲ್ಲ, ಅದಕ್ಕೆ ಅನುಮತಿ ನೀಡಿದರೆ ಜಾತ್ಯತೀತತೆ ಮೇಲೆ ಪರಿಣಾಮ: ಕೇರಳ ಸರ್ಕಾರ ಮಹತ್ವದ ಆದೇಶ

ಹಿಜಬ್ ಸಮವಸ್ತ್ರದ ಭಾಗವಲ್ಲ, ಅದಕ್ಕೆ ಅನುಮತಿ ನೀಡಿದರೆ ಜಾತ್ಯತೀತತೆ ಮೇಲೆ ಪರಿಣಾಮ: ಕೇರಳ ಸರ್ಕಾರ ಮಹತ್ವದ ಆದೇಶ





ಹಿಜಬ್ ಅಥವಾ ಧಾರ್ಮಿಕ ಗುರುತನ್ನು ಎತ್ತಿ ತೋರಿಸುವ ಯಾವುದೇ ವಸ್ತ್ರವನ್ನು ಸಮವಸ್ತ್ರದ ಭಾಗವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಕೇರಳ ಸರ್ಕಾರ ಸ್ಪಷ್ಟಪಡಿಸಿದೆ.



ಸ್ಟುಡೆಂಟ್ ಪೊಲೀಸ್ ಕೆಡೆಟ್ - SPC ಯೋಜನೆಯ ಭಾಗವಾಗಿ ಹಿಜಬ್ ನ್ನು ಸಮವಸ್ತ್ರದ ಭಾಗವಾಗಿ ಪರಿಗಣಿಸಬೇಕು ಎಂದು ವಿದ್ಯಾರ್ಥಿನಿಯೊಬ್ಬರು ಸರ್ಕಾರಕ್ಕೆ ಮನವಿ ಮಾಡಿದ್ದರು.



SPC ಒಂದು ಸ್ವಯಂಪ್ರೇರಿತ ಸಹಪಠ್ಯ ಚಟುವಟಿಕೆ. ಅದು ಕಡ್ಡಾಯ ಶಿಕ್ಷಣ ಕಾರ್ಯಕ್ರಮವಲ್ಲ. ಸಮಾನ ಲಿಂಗ ನ್ಯಾಯ ಒದಗಿಸುವ, ಧಾರ್ಮಿಕೇತರ ತಾರತಮ್ಯ ಹೋಗಲಾಡಿಸುವ, ಧರ್ಮಾತೀತ ವಸ್ತ್ರಸಂಹಿತೆ ಇದಕ್ಕಿದೆ. ಧಾರ್ಮಿಕ ವಿಚಾರಗಳನ್ನು ಸಮವಸ್ತ್ರದ ವಿಚಾರದಲ್ಲಿ ತಳಕು ಹಾಕುವುದು ಜಾತ್ಯತೀತ ಅಸ್ತಿತ್ವವನ್ನು ಪ್ರಶ್ನಿಸಿದ ಹಾಗೆ. ಈ ಬೇಡಿಕೆಯನ್ನು ಪರಿಗಣಿಸಿದರೆ, ಇನ್ನಷ್ಟು ಬೇಡಿಕೆಗಳಿಗೆ ಪುಷ್ಟಿ ನೀಡಿದ ಹಾಗೆ. ಇದು ಜಾತ್ಯತೀತತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಸರ್ಕಾರ ಹೇಳಿದೆ.




ಸ್ಟುಡೆಂಟ್ ಪೊಲೀಸ್ ಕೆಡೆಟ್ ಸಮವಸ್ತ್ರದಲ್ಲಿ ತನ್ನ ಧರ್ಮಕ್ಕೆ ಅನುಗುಣವಾಗಿ ಪೂರ್ಣ ತೋಳಿನ ಉಡುಗೆ ಮತ್ತು ತಲೆಯನ್ನು ಮುಚ್ಚುವ ಸ್ಕಾರ್ಫ್ ಧರಿಸಲು 8ನೇ ತರಗತಿ ವಿದ್ಯಾರ್ಥಿನಿ ರಿಜಾ ನಹಾನ್ ಅನುಮತಿ ಕೋರಿದ್ದರು.




ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಕಾನೂನು, ಶಿಸ್ತು, ನಾಗರಿಕ ಪ್ರಜ್ಞೆ ರೂಪಿಸಲು ಮತ್ತು ಸಮಾಜದ ದುರ್ಬಲ ವರ್ಗಗಳ ಬಗ್ಗೆ ಸಹಾನುಭೂತಿ ಮೂಡಿಸಲು ಹಾಗೂ ಸಾಮಾಜಿಕ ಅನಿಷ್ಟಗಳಿಗೆ ಪ್ರತಿರೋಧ ಬೆಳೆಸುವ ಮೂಲಕ ಪ್ರಜಾಸತ್ತಾತ್ಮಕ ಸಮಾಜದ ಭವಿಷ್ಯದ ನಾಯಕರಾಗಿ ವಿಕಸನಗೊಳ್ಳಲು ತರಬೇತಿ ನೀಡುವ ಸಲುವಾಗಿ ಸ್ಟುಡೆಂಟ್ ಪೊಲೀಸ್ ಕೆಡೆಟ್ - SPC ಯೋಜನೆ ಪ್ರಾರಂಭಿಸಲಾಗಿದೆ ಎಂದು ಸರ್ಕಾರ ತನ್ನ ಆದೇಶದಲ್ಲಿ ವಿವರಿಸಿದೆ.


ಎಲ್ಲಾ ಭೇದ-ಭಾವಗಳನ್ನು ಮೀರಿ ರಾಷ್ಟ್ರವನ್ನು ಉನ್ನತ ಸ್ಥಾನದಲ್ಲಿರಿಸುವ ರೀತಿಯ ಪೀಳಿಗೆಯನ್ನು ಸೃಷ್ಟಿಸುವ ಮತ್ತು ಕಾನೂನಿನ ಆಳ್ವಿಕೆಯನ್ನು ಗೌರವಿಸಿ ಅದನ್ನು ಬಲವಾಗಿ ನಂಬುವ ಸಮಾಜವನ್ನು ಸೃಷ್ಟಿಸುವ ಗುರಿಯನ್ನು SPC ಹೊಂದಿದೆ. ಇದು ಪೋಲಿಸ್ ಮತ್ತು ವಿದ್ಯಾರ್ಥಿಗಳ ನಡುವಿನ ರಚನಾತ್ಮಕ ವೇದಿಕೆಯಾಗಿದೆ. ಕೇರಳ ಪೋಲೀಸ್‌ಗೆ ಪೂರಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸರ್ಕಾರ ಉಲ್ಲೇಖಿಸಿರುವ ರಾಜ್ಯ ಪೊಲೀಸ್‌ ಮುಖ್ಯಸ್ಥರ ಪತ್ರದಲ್ಲಿ ಹೇಳಿದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200