MP HC Judgement on live in relationship- ವಯಸ್ಕರ ಮದುವೆ, ಲಿವ್ ಇನ್ ರಿಲೇಶನ್ ಗೆ ಯಾರೂ ಅಡ್ಡಿ ಬರಬಾರದು: ವಯಸ್ಕರಿಗೆ ತಮ್ಮ ಇಚ್ಚೆಯಂತೆ ಬದುಕುವ ಹಕ್ಕಿದೆ
ವಯಸ್ಕರ ಮದುವೆ, ಲಿವ್ ಇನ್ ರಿಲೇಶನ್ ಗೆ ಯಾರೂ ಅಡ್ಡಿ ಬರಬಾರದು: ವಯಸ್ಕರಿಗೆ ತಮ್ಮ ಇಚ್ಚೆಯಂತೆ ಬದುಕುವ ಹಕ್ಕಿದೆ
ಮದುವೆ ಅಥವಾ ಲಿವ್ ಇನ್ ಸಂಬಂಧದಲ್ಲಿ ಇಬ್ಬರು ಪ್ರಾಪ್ತ ವಯಸ್ಕರು ಜೊತೆಯಾಗಿ ವಾಸಿಸಲು ಸಿದ್ಧರಿದ್ದರೆ ಮೋರಲ್ ಪೊಲೀಸಿಂಗ್(ಅನೈತಿಕ ಗೂಂಡಾಗಿರಿ) ನಡೆಸುವಂತಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ.
ದೇಶದ ಪ್ರತಿಯೊಬ್ಬ ಪ್ರಾಪ್ತ ವಯಸ್ಕ ಪ್ರಜೆಗೂ ತನ್ನ ಸ್ವಂತ ಇಚ್ಚೆಯಂತೆ ಬದುಕುವ ಹಕ್ಕನ್ನು ಸಂವಿಧಾನ ನೀಡಿದೆ ಎಂದು ಏಕಸದಸ್ಯ ಪೀಠ ತೀರ್ಪಿನಲ್ಲಿ ಹೇಳಿದೆ.
ನಾನು ಸ್ವಂತ ಇಚ್ಚೆಯಂತೆ ಅರ್ಜಿದಾರರನ್ನು ಮದುವೆಯಾಗಿದ್ದು, ಮತಾಂತರಕ್ಕೆ ಅವರು ಯಾವತ್ತೂ ಬಲವಂತ ಮಾಡಿಲ್ಲ ಎಂದು 19 ವರ್ಷದ ಯುವತಿ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದರು.
ಆ ಬಳಿಕ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಾಲಯ ಯುವತಿಯ ಪೋಷಕರು ಮತ್ತು ದಂಪತಿಗೆ ಅಪಾಯವಾಗದಂತೆ ಮತ್ತು ಅವರಿಗೆ ಯಾರೂ ಬೆದರಿಕೆ ಒಡ್ಡದಂತೆ ಪೊಲೀಸರು ಕ್ರಮವಹಿಸಬೇಕು ಎಂದು ಇಲಾಖೆಗೆ ನಿರ್ದೇಶನ ನೀಡಿತು.