-->
IPC Sec 153 A, 295 A - ಧರ್ಮ ದ್ವೇಷದ ಭಾಷಣ; ಕಲಾವಿದರಿಗೆ ಸಿಗುವ ರಕ್ಷಣೆ ಕ್ರೈಸ್ತ ಪಾದ್ರಿಗೆ ಸಿಗಲಾರದು- ಮದ್ರಾಸ್ ಹೈಕೋರ್ಟ್

IPC Sec 153 A, 295 A - ಧರ್ಮ ದ್ವೇಷದ ಭಾಷಣ; ಕಲಾವಿದರಿಗೆ ಸಿಗುವ ರಕ್ಷಣೆ ಕ್ರೈಸ್ತ ಪಾದ್ರಿಗೆ ಸಿಗಲಾರದು- ಮದ್ರಾಸ್ ಹೈಕೋರ್ಟ್

ಧರ್ಮ ದ್ವೇಷದ ಭಾಷಣ; ಕಲಾವಿದರಿಗೆ ಸಿಗುವ ರಕ್ಷಣೆ ಕ್ರೈಸ್ತ ಪಾದ್ರಿಗೆ ಸಿಗಲಾರದು- ಮದ್ರಾಸ್ ಹೈಕೋರ್ಟ್





ಧಾರ್ಮಿಕ ಸಮುದಾಯದ ವಿರುದ್ಧ ದ್ವೇಷಕಾರಿ ಭಾಷಣ ಮಾಡಿದಾಗ ಭಾರತೀಯ ದಂಡ ಸಂಹಿತೆ ಸೆಕ್ಷನ್ 153 ಎ ಮತ್ತು 295 ಎ ಅನ್ವಯವಾಗುತ್ತದೆ. ಇದನ್ನು ನಿರ್ಧರಿಸಲು 'ಭಾಷಷ ಮಾಡಿದ್ದು ಯಾರು?' ಎಂಬ ಅಂಶ ಪ್ರಸ್ತುತವಾಗುತ್ತದೆ ಎಂದು ಮದ್ರಾಸ್‌ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.



ಫಾದರ್‌ ಪಿ ಜಾರ್ಜ್‌ ಪೊನ್ನಯ್ಯ Vs ಪೊಲೀಸ್‌ ಇನ್ಸ್‌ಪೆಕ್ಟರ್, ಆರುಮನೈ ಪಿ.ಎಸ್.

Fr. P. George Ponnaiah v. The Inspector of Police, Arumanai P.S.



ತಮ್ಮ ವಿರುದ್ಧ ದಾಖಲಿಸಿರುವ FIR ರದ್ದುಪಡಿಸುವಂತೆ ಕೋರಿ ಕ್ಯಾಥೊಲಿಕ್‌ ಪಂಥದ ಧರ್ಮಗುರು ಪಿ. ಜಾರ್ಜ್ ಪೊನ್ನಯ್ಯ ಸಲ್ಲಿಸಿದ್ದ ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಜಿ ಆರ್‌ ಸ್ವಾಮಿನಾಥನ್ ನೇತೃತ್ವದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.



"ಸ್ಟ್ಯಾಂಡ್ ಅಪ್ ಹಾಸ್ಯ ಕಲಾವಿದರಾದ ಮುನಾವರ್ ಫಾರೂಖಿ ಅಥವಾ ಅಲೆಕ್ಸಾಂಡರ್‌ ಬಾಬು ವೇದಿಕೆಯಲ್ಲಿ ಹಾಸ್ಯ ಮಾಡುತ್ತಾರೆ. ಆ ಸಂದರ್ಭದಲ್ಲಿ ಅವರು ಇತರರನ್ನು ಕೇಂದ್ರೀಕರಿಸಿ ಹಾಸ್ಯ ಮಾಡುವ ತಮ್ಮ ಮೂಲಭೂತ ಹಕ್ಕನ್ನು ಬಳಸುತ್ತಿರುತ್ತಾರೆ. ಅಲ್ಲಿ ಆಗ ಅವರ ಧಾರ್ಮಿಕ ಗುರುತು ಅಪ್ರಸ್ತುತವಾಗುತ್ತದೆ. ಇಂತಹ ಸಂದರ್ಭಗಳಲ್ಲೇ 'ಯಾರು?' ಮತ್ತು 'ಎಲ್ಲಿ?' ಎಂಬ ಪರೀಕ್ಷೆ ಮುಖ್ಯವಾಗುತ್ತದೆ. ಹಾಸ್ಯ ಕಲಾವಿದರ ವಿಷಯದಲ್ಲಿ ಐಪಿಸಿ ಸೆಕ್ಷನ್ 295 ಎ ಬಳಸಲಾಗದು. ಏಕೆಂದರೆ, ಅಲ್ಲಿ ದ್ವೇಷಭಾವನೆ ಗೌಣವಾಗಿರುತ್ತದೆ' ಎಂದು ಪೀಠ ಅಭಿಪ್ರಾಯಪಟ್ಟಿತು. ಇದೇ ಭಾವವನ್ನು ಅರ್ಜಿದಾರರಿಗೆ ನೀಡಲಾಗದು. ಇಲ್ಲಿ ಅವರು ಹಿಂದೂ ಧಾರ್ಮಿಕ ನಂಬಿಕೆಗಳನ್ನು ಅವಹೇಳನ ಮಾಡುವಂತಿಲ್ಲ ಎಂದು ತೀರ್ಪಿನಲ್ಲಿ ಹೇಳಲಾಗಿದೆ.



'ಕ್ರೈಸ್ತ ಧರ್ಮಗುರುಗಳು ಹಿಂದೂ ಧಾರ್ಮಿಕ ಭಾವನೆಗಳನ್ನು ಕೆರಳಿಸಿ, ದ್ವೇಷ ಭಾವನೆಗೆ ಪ್ರೇರಣೆ ನೀಡುವಂತಹ ಭಾಷಣ ಮಾಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಅದರಿಂದ ಅವರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 295 ಎ/ 153 ಎ/ 505 (2) ಅಡಿ ದಾಖಲಾಗಿರುವ ಅಪರಾಧಗಳನ್ನು ವಜಾ ಮಾಡಲಾಗದು' ಎಂದು ಪೀಠ ಹೇಳಿತು.



ಯಾವುದೇ ಒಂದು ಕ್ರಿಯೆಗೆ ಸಮನಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇದ್ದೇ ಇರುತ್ತದೆ ಎಂಬ ನ್ಯೂಟನ್ ಸಿದ್ಧಾಂತದಂತೆ ಇತರ ಧರ್ಮಗಳೂ ಧರ್ಮ ದ್ವೇಷ ಸಾರುವ ಇದೇ ದಾರಿಯನ್ನು ಅನುಸರಿಸಬಹುದು. ಆಗ ಕಾನೂನು ಮೂಕ ಪ್ರೇಕ್ಷಕನಂತೆ ಸುಮ್ಮನೆ ಕೂರಲಾಗದು ಎಂದು ತೀರ್ಪು ಹೇಳಿದೆ.


For advertisment kindly contact: 9483456040



For advertisment kindly contact: 9483456040

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200