-->
New SOP by Karnataka High Court- ಕೊರೋನಾ ಭೀತಿ: 17-01-2022ರಿಂದ ರಾಜ್ಯದ ನ್ಯಾಯಾಲಯಗಳ ಕಲಾಪದಲ್ಲಿ ಮಹತ್ತರ ಬದಲಾವಣೆ

New SOP by Karnataka High Court- ಕೊರೋನಾ ಭೀತಿ: 17-01-2022ರಿಂದ ರಾಜ್ಯದ ನ್ಯಾಯಾಲಯಗಳ ಕಲಾಪದಲ್ಲಿ ಮಹತ್ತರ ಬದಲಾವಣೆ

ಕೊರೋನಾ ಭೀತಿ: 17-01-2022ರಿಂದ ರಾಜ್ಯದ ನ್ಯಾಯಾಲಯಗಳ ಕಲಾಪದಲ್ಲಿ ಮಹತ್ತರ ಬದಲಾವಣೆ


ಸೋಮವಾರದಿಂದ ರಾಜ್ಯದ ಎಲ್ಲ ವಿಚಾರಣೆ ನ್ಯಾಯಾಲಯಗಳ ಕಾರ್ಯಕಲಾಪದಲ್ಲಿ ಮಹತ್ತರ ಬದಲಾವಣೆ ಆಗಲಿದೆ. ಈ ಬಗ್ಗೆ ಕರ್ನಾಟಕ ಹೈಕೋರ್ಟ್ ಜನವರಿ 14 2022 ರಂದು ನೂತನ ಪ್ರಮಾಣಿತ ಕಾರ್ಯಾಚರಣೆಯ ವಿಧಾನ (SOP)ವನ್ನು ಪ್ರಕಟಿಸಿದೆ.ರಾಜ್ಯದ ಎಲ್ಲಾ ಜಿಲ್ಲಾ ನ್ಯಾಯಾಲಯಗಳು, ವಿಚಾರಣಾ ನ್ಯಾಯಾಲಯ (ಕೌಟುಂಬಿಕ ನ್ಯಾಯಾಲಯ, ಕಾರ್ಮಿಕ ನ್ಯಾಯಾಲಯ, ಸಣ್ಣ ಕಾರಣಗಳ ನ್ಯಾಯಾಲಯ ಮತ್ತು ಔದ್ಯಮಿಕ ಟ್ರಿಬಿನಲ್ ಒಳಗೊಂಡಂತೆ) ಗಳ ಕಾರ್ಯಕಲಾಪವನ್ನು ನಡೆಸುವ ಬಗ್ಗೆ ಹೊಸ ಅಧಿಸೂಚನೆಯನ್ನು ಪ್ರಕಟಿಸಿದೆ. ಮುಂದಿನ ಆದೇಶದ ವರೆಗೆ ಈ SOP ಅಧಿಸೂಚನೆ ಜಾರಿಯಲ್ಲಿರುತ್ತದೆ ಎಂದು ಕರ್ನಾಟಕ ಹೈಕೋರ್ಟ್ ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ.ಈ ಅಧಿಸೂಚನೆ ಪ್ರಕಾರ ಕಾರ್ಯಕಲಾಪದಲ್ಲಿ ಯಾವೆಲ್ಲ ಬದಲಾವಣೆಗಳನ್ನು ಮಾಡಲಾಗಿದೆ ಎಂಬುದರ ವಿವರ ಹೀಗಿದೆಕೇಸುಗಳನ್ನು ದಾಖಲಿಸುವ ಬಗ್ಗೆ: ಸಾಧ್ಯವಾದಷ್ಟು ಎಲ್ಲೆಡೆ ಈ ಫೈಲಿಂಗ್ ಮೂಲಕ ಕೇಸುಗಳನ್ನು ದಾಖಲಿಸಲಾಗುವುದು ಅಥವಾ ಆಯಾ ನ್ಯಾಯಾಲಯಗಳ ಅಧಿಕೃತ ಇಮೇಲ್ ಗೆ CIS ಸಾಫ್ಟ್‌ವೇರ್ ಮೂಲಕ ಯಾ ಸ್ಕ್ಯಾನ್ ಮಾಡಲಾದ ಪ್ರತಿಗಳನ್ನು ಕಳಿಸುವ ಮೂಲಕ ಆಯಾ ನ್ಯಾಯಾಲಯಗಳಲ್ಲಿ ಕೇಸುಗಳನ್ನು ದಾಖಲಿಸಬಹುದುಭೌತಿಕವಾಗಿ ಕೇಸುಗಳ ದಾಖಲಿಸುವ ಬಗ್ಗೆ: ಮುಖ್ಯ ಕಟ್ಟಡದ ಹೊರಗೆ ಅಗತ್ಯವಿರುಷ್ಟು ಪ್ರತ್ಯೇಕ ಕೌಂಟರ್ ಗಳನ್ನು ತೆರೆಯಲಾಗುವುದು. ಕ್ರಿಮಿನಲ್ ಮತ್ತು ಸಿವಿಲ್ ವ್ಯಾಜ್ಯಗಳಿಗೆ ಸಂಬಂಧಪಟ್ಟಂತೆ ಪ್ರತ್ಯೇಕ ಕೌಂಟರ್ ಗಳನ್ನು ವ್ಯವಸ್ಥೆ ಇರುತ್ತದೆ. ಕೋರ್ಟ್ ಶುಲ್ಕ, ನಕಲು ಅರ್ಜಿ ಸಹಿತ ಪಾವತಿಗಳಿಗೆ ಕೂಡ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಇರುತ್ತದೆ. ವಕೀಲರು ಯಾ ಅವರ ಸಿಬ್ಬಂದಿ ಗುರುತಿನ ಚೀಟಿಯೊಂದಿಗೆ ಸರದಿಯ ಸಾಲಿನಲ್ಲಿ ಸಾಮಾಜಿಕ ಅಂತರ ಕಾಪಾಡಿ ಈ ಕೌಂಟರ್‌ಗಳ ಪ್ರಯೋಜನ ಪಡೆಯಬಹುದು. 2020, 2021ರಲ್ಲಿ ಪ್ರತ್ಯೇಕ ಕೌಂಟರ್ ಮಾಡಲಾದ ಜಾಗವನ್ನೇ ಈ ಬಾರಿಯೂ ಆಯ್ಕೆ ಮಾಡಬಹುದು.ಭೌತಿಕವಾಗಿ ಕೇಸು ದಾಖಲಿಸುವ ನಿಟ್ಟಿನಲ್ಲಿ ಸ್ಥಳೀಯ ವಾತಾವರಣಕ್ಕೆ ಅನುಗುಣವಾಗಿ ಪ್ರತ್ಯೇಕವಾದ ವ್ಯವಸ್ಥೆಗಳನ್ನು ಅನುಸರಿಸುವುದು. ಅವುಗಳೆಂದರೆ;


ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಮೇಲುಸ್ತುವಾರಿ ನೋಡಿಕೊಳ್ಳಲು ಕೋರ್ಟ್‌ನಿಂದ ಸ್ವಯಂಸೇವಕರನ್ನು ನಿಯೋಜನೆ ಮಾಡಲಾಗುವುದು.


ಫೈಲಿಂಗ್ ಕೌಂಟರ್ ನಲ್ಲಿ ಮಾಸ್ಕ್ ಮತ್ತು ಗ್ಲೌಸ್ ಧರಿಸಿರುವಂತಹ ಸಿಬ್ಬಂದಿ ಯಾ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗುವುದು, ಕಾರ್ಯಕ್ರಮಕ್ಕೆ ಮುನ್ನ ಸ್ಯಾನಿಟೈಸರ್ ಗಳನ್ನು ಹಾಕಿ ಪ್ರದೇಶವನ್ನು ಸೋಂಕು ಹರಡದಂತೆ ವ್ಯವಸ್ಥೆ ಮಾಡಲಾಗುವುದು.ಫೈಲಿಂಗ್ ಕೌಂಟರ್ ನಲ್ಲಿ ವಕೀಲರು, ಅವರ ಕಚೇರಿ ಸಿಬ್ಬಂದಿ ಮತ್ತು ವೈಯಕ್ತಿಕವಾಗಿ ಕೇಸು ಪ್ರತಿನಿಧಿಸುವ ಪಕ್ಷಕಾರರಿಗೆ ಮಾತ್ರ ಅವಕಾಶ ಇರುತ್ತದೆಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಿಗೆ ಮಾತ್ರ ಕೋರ್ಟ್ ಆವರಣದಲ್ಲಿ ಪ್ರತ್ಯೇಕ ಕೌಂಟರ್ ಮಾಡುವ ಅಧಿಕಾರ ಇರುತ್ತದೆ.ಸರಕಾರಿ ವಕೀಲರು, ಸರಕಾರಿ ಅಭಿಯೋಜಕರು ಮತ್ತು ಸರಕಾರವನ್ನು ಪ್ರತಿನಿಧಿಸುವ ವಕೀಲರಿಗೆ ತಮ್ಮ ವಾದ ಪತ್ರ, ಆಕ್ಷೇಪಣೆ, ತಕರಾರು ಸಲ್ಲಿಸಲು ಪ್ರತ್ಯೇಕ ಕೌಂಟರ್ ವ್ಯವಸ್ಥೆ ಇರುತ್ತದೆಸಿವಿಲ್ ವ್ಯಾಜ್ಯಗಳು, ಹಿಂದೂ ವಿವಾಹ ಕಾಯ್ದೆ ಅಡಿಯಲ್ಲಿ ರಾಜಿ ಸಂಧಾನ ನಡೆಸುವ ಪಕ್ಷಕಾರರು ಹಾಗೂ ಕ್ರಿಮಿನಲ್ ಕೇಸುಗಳು ಶೂರಿಟಿ ಸ್ವೀಕೃತಿಗಾಗಿ ಕರ್ನಾಟಕ ಹೈಕೋರ್ಟ್ ಜುಲೈ 10 2020 ರಂದು ಮಾಡಿದ ಅಧಿಸೂಚನೆಯ ಪ್ರಕಾರ ವಿಶೇಷ/ ಪ್ರತ್ಯೇಕ ವ್ಯವಸ್ಥೆಯನ್ನು ಅನುಸರಿಸಲಾಗುವುದುಆಯಾ ದಿನದಲ್ಲಿ ಪಟ್ಟಿ ಮಾಡಲಾದ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಭಾಗವಹಿಸಲು ಮಾತ್ರ ವಕೀಲರು ಮತ್ತು ಅವರ ಸಹವರ್ತಿಗಳಿಗೆ ನ್ಯಾಯಾಲಯ ಪ್ರವೇಶದ ಅವಕಾಶ ಇರುತ್ತದೆ.ಕೋರ್ಟ್ ಕಟ್ಟಡದಲ್ಲಿ ನಿರ್ದಿಷ್ಟ ಸಂಖ್ಯೆಯ ಪ್ರವೇಶ ದ್ವಾರಗಳನ್ನು ತೆರೆಯಲಿದ್ದು, ಆ ಎಲ್ಲಾ ಪ್ರವೇಶ ದ್ವಾರಗಳಲ್ಲಿ ಈ ಹಿಂದಿನಂತೆ ಸೂಕ್ತ ಪರಿಶೀಲನೆ/ತಪಾಸಣೆ ಮಾಡಲಾಗುವುದು.ಎಲ್ಲಾ ವಕೀಲರು ತಮ್ಮ ಮೊಬೈಲ್ ಗಳಲ್ಲಿ ಟೆಲಿಗ್ರಾಂ ಆಪನ್ನು ಡೌನ್ಲೋಡ್ ಮಾಡುವ ಮೂಲಕ ಜಿಲ್ಲಾ ಹಾಗೂ ವಿಚಾರಣಾ ನ್ಯಾಯಾಲಯದ ಲಿಂಕುಗಳನ್ನು ಬಳಸಿ ಕಾರ್ಯಕಲಾಪ ದ ಹಂತವನ್ನು ತಿಳಿದುಕೊಳ್ಳಬಹುದುಗುರುತಿನ ಚೀಟಿ ಹೊಂದಿರುವ ವಕೀಲರು ಮತ್ತು ಅವರ ಸಿಬ್ಬಂದಿಗೆ ಮಾತ್ರ ನ್ಯಾಯಾಲಯದ ಪ್ರವೇಶಕ್ಕೆ ಅವಕಾಶ ಇರುತ್ತದೆ. ಇದರ ಹೊರತಾಗಿ ಬರುವ ವಕೀಲರು ಅವರ ಸಿಬ್ಬಂದಿ ಹಾಗೂ ವೈಯಕ್ತಿಕ ಪಕ್ಷಗಳಿಗೆ ನ್ಯಾಯಾಲಯ ಪ್ರವೇಶ ನಿರ್ಬಂಧ ಇರುತ್ತದೆ.ಆರೋಪಿಗಳನ್ನು ಹಾಜರುಪಡಿಸುವ ಪೊಲೀಸ್ ಅಧಿಕಾರಿಗಳಿಗೆ ಮಾತ್ರ ಪ್ರವೇಶದ ಅವಕಾಶ ಇರುತ್ತದೆಕೇಂದ್ರ ಸರಕಾರ, ರಾಜ್ಯ ಸರಕಾರ ಮತ್ತು ಮುಖ್ಯ ಕಾರ್ಯದರ್ಶಿ ಆರೋಗ್ಯ ಇಲಾಖೆ ಹೊರಡಿಸಿದ ಮಾರ್ಗಸೂಚಿ ಪ್ರಕಾರ ಕನಿಷ್ಠ ಆರು ಅಡಿಗಳ ಅಂತರ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ವಕೀಲರು ಅವರ ಸಿಬ್ಬಂದಿ ನ್ಯಾಯಾಲಯದಲ್ಲಿ ಕೇಸು ದಾಖಲಿಸಲು ಅವಕಾಶ ಇರುತ್ತದೆ.


ಪಕ್ಷಕಾರರು ಅನಗತ್ಯವಾಗಿ ನ್ಯಾಯಾಲಯಕ್ಕೆ ಆಗಮಿಸದಂತೆ ತಡೆಯುವ ಜವಾಬ್ದಾರಿ ಆಯಾ ವಕೀಲರ ಸಂಘಕ್ಕೆ ಇರುತ್ತದೆ


ಅಗತ್ಯದ ಸಂದರ್ಭದಲ್ಲಿ ಮಾತ್ರ ನ್ಯಾಯಾಲಯಕ್ಕೆ ಹಾಜರಾಗುವಂತೆ ವಕೀಲರ ಸಂಘ ಪಕ್ಷಕಾರರಿಗೆ ಮನವಿ ಮಾಡಬೇಕು


ಯಾವುದೇ ರೀತಿಯ ಸಾಂಸ್ಕೃತಿಕ ಚಟುವಟಿಕೆಗಳು ಕ್ರೀಡಾ ಚಟುವಟಿಕೆಗಳಿಗೆ ವಕೀಲ ಸಂಘದಲ್ಲಿ ಅವಕಾಶ ಇರುವುದಿಲ್ಲನ್ಯಾಯಾಲಯ ಪ್ರವೇಶಿಸುವ ಎಲ್ಲ ವ್ಯಕ್ತಿಗಳನ್ನು ಥರ್ಮಲ್ ಸ್ಕ್ಯಾನಿಂಗ್ ಗೆ ಒಳಪಡಿಸಲಾಗುವುದು ಕೋವಿಡ್ ಗುಣ ಲಕ್ಷಣಗಳು ಕಂಡುಬಂದಲ್ಲಿ ಅಂಥವರ ಪ್ರವೇಶ ನಿರಾಕರಿಸಲಾಗುವುದುತುರ್ತು ಸಂದರ್ಭದಲ್ಲಿ ಮಾತ್ರ ನ್ಯಾಯಾಲಯಗಳು ಹೈಬ್ರಿಡ್ ಮಾದರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಿಯರಿಂಗ್ ಮಾಡಬಹುದುತುರ್ತು ವಾದ ಮಂಡನೆಗೆ ವಕೀಲರು ಇಮೇಲ್ ಮೂಲಕ ಜಿಲ್ಲಾ ಮತ್ತು ಪ್ರಧಾನ ಸತ್ರ ನ್ಯಾಯಾಧೀಶರಿಗೆ ಮನವಿ ಮಾಡಬಹುದುನ್ಯಾಯಾಲಯದ ಆವರಣದಲ್ಲಿ ಕ್ಯಾಂಟೀನ್ ಅಥವಾ ಯಾವುದೇ ಫುಡ್ ಕೌಂಟರ್ ಗೆ ಅವಕಾಶ ಇರುವುದಿಲ್ಲ.ಟೈಪಿಸ್ಟ್‌ಗಳು, ಜೆರಾಕ್ಸ್/ನಕಲು ಪ್ರತಿ ಆಪರೇಟರ್‌ಗಳು ನೋಟರಿ ಪಬ್ಲಿಕ್‌ಗಳು ಓತ್ ಕಮಿಷನರ್‌ಗಳ ಕೋರ್ಟ್ ಪ್ರವೇಶಕ್ಕೆ ಅನುಮತಿ ಇರುವುದಿಲ್ಲ.


ಆದರೆ ಜಿಲ್ಲಾ ಪ್ರಧಾನ ನ್ಯಾಯಾಧೀಶರು ನಿರ್ಧರಿಸಿದರೆ ರೋಟೇಶನ್ ಮಾದರಿಯಲ್ಲಿ ಶೇಕಡ 50ರಷ್ಟು ಈ ಸೇವೆಯನ್ನು ಬಳಸಲು ಅವಕಾಶ ಇರುತ್ತದೆ.ಸ್ಥಳಿಯ ಪರಿಸ್ಥಿತಿಗಳಿಗೆ ತಕ್ಕಂತೆ, ಅಗತ್ಯ ಕಂಡುಬಂದರೆ ಇದಕ್ಕಿಂತ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಲು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಅಧಿಕಾರವನ್ನು ನೀಡಲಾಗಿದೆ.

Ads on article

Advertise in articles 1

advertising articles 2

Advertise under the article