-->
Keral HC advice lawyers- ನ್ಯಾಯಾಲಯದ ತೀರ್ಪನ್ನು ಓದದೆ ವಕೀಲರು ನ್ಯಾಯಾಂಗದ ಟೀಕೆ ಮಾಡಬಾರದು: ಕೇರಳ ಹೈಕೋರ್ಟ್‌

Keral HC advice lawyers- ನ್ಯಾಯಾಲಯದ ತೀರ್ಪನ್ನು ಓದದೆ ವಕೀಲರು ನ್ಯಾಯಾಂಗದ ಟೀಕೆ ಮಾಡಬಾರದು: ಕೇರಳ ಹೈಕೋರ್ಟ್‌

ನ್ಯಾಯಾಲಯದ ತೀರ್ಪನ್ನು ಓದದೆ ವಕೀಲರು ನ್ಯಾಯಾಂಗದ ಟೀಕೆ ಮಾಡಬಾರದು: ಕೇರಳ ಹೈಕೋರ್ಟ್‌







ವಕೀಲರು ನ್ಯಾಯಾಲಯದ ಯಾವುದೇ ತೀರ್ಪನ್ನು ಓದದೆ, ವಿನಾ ಕಾರಣ ಅದನ್ನು ಟೀಕಿಸಬಾರದು. ವಕೀಲರು ನ್ಯಾಯಾಂಗ ರಕ್ಷಕರಾಗಬೇಕು ಎಂದು ಕೇರಳ ಉಚ್ಚ ನ್ಯಾಯಾಲಯ ಹೇಳಿದೆ.



ಮಲಯಾಳಿ ಚಲನಚಿತ್ರ 'ಚುರುಲಿ' ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿದ ಕೇರಳ ಹೈಕೋರ್ಟ್‌, ತೀರ್ಪನ್ನು ಓದುವ ಮೊದಲು ಮುಖ್ಯವಾಹಿನಿ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್ ಮಾಡುವುದನ್ನು ತಡೆಯುವಂತೆ ವಕೀಲರಿಗೆ ಮನವಿ ಮಾಡಿದೆ.



ನ್ಯಾಯವಾದಿಗಳು ನ್ಯಾಯಾಂಗದ ಮುಖವಾಣಿಯಂತೆ ಕಾರ್ಯನಿರ್ವಹಿಸಬೇಕು ಮತ್ತು ತೀರ್ಪಿನ ನ್ಯಾಯಯುತ ರಚನಾತ್ಮಕ ಟೀಕೆಯಲ್ಲಿ ಮಾತ್ರ ತೊಡಗಬೇಕು ಎಂದು ಕೇರಳ ಹೈಕೋರ್ಟ್‌ ನ್ಯಾ. ಕುಂಞಿಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.



"ಕೆಲವು ವಕೀಲರು ನ್ಯಾಯಾಲಯದ ತೀರ್ಪನ್ನು ನೋಡದೆ, ಓದದೆ ಮತ್ತು ಅದನ್ನು ಪರಾಮರ್ಶಿಸದೆ ತಮ್ಮ ಅಭಿಪ್ರಾಯಗಳನ್ನು ಮಾಡುತ್ತಿದ್ದಾರೆ. ಅವರ ಈ ಕ್ರಮ ನಿಜಕ್ಕೂ ಆಶ್ಚರ್ಯಕರವಾಗಿದೆ ಎಂದು ಹೈಕೋರ್ಟ್ ಖೇದ ವ್ಯಕ್ತಪಡಿಸಿದೆ.



ಕೆಲವು ವಕೀಲರು ನ್ಯಾಯಾಲಯದ ತೀರ್ಪಿನ ಬಗ್ಗೆ ಬೆಳಿಗ್ಗೆ 10.15 ಕ್ಕೆ ಅಥವಾ 11 ಗಂಟೆಗೆ ತೀರ್ಪು ಪ್ರಕಟವಾಗುತ್ತದೆ ಎಂದು ಪ್ರತಿಕ್ರಿಯಿಸಲು ಪ್ರಾರಂಭಿಸುತ್ತಾರೆ. ನ್ಯಾಯಪೀಠ ಮತ್ತು ವಕೀಲರು ಒಂದು ನಾಣ್ಯದ ಎರಡು ಮುಖಗಳಿದಂತೆ, ವಕೀಲರು ನ್ಯಾಯಾಂಗದ ಮುಖವಾಣಿಯಾಗಿರಬೇಕು, ತೀರ್ಪಿನ ಬಗ್ಗೆ ಸಕಾರಾತ್ಮಕ, ರಚನಾತ್ಮಕ ಹಾಗೂ ನ್ಯಾಯಯುತ ಟೀಕೆಗಳು ಸದಾ ಸ್ವಾಗತಾರ್ಹ. ಆದರೆ ತೀರ್ಪನ್ನು ಓದಿದ ನಂತರವೇ ಟೀಕೆಗಳನ್ನು ಪ್ರಾರಂಭಿಸಬೇಕು ಎಂದು ನ್ಯಾಯಪೀಠವು ವಕೀಲ ಸಮುದಾಯಕ್ಕೆ ಮನವಿ ಮಾಡಿದೆ.


Ads on article

Advertise in articles 1

advertising articles 2

Advertise under the article