matrimonial cruelty by wife- Kerala HC: ಪರ ಪುರುಷನ ಜೊತೆ ಅಕ್ರಮ ಫೋನ್ ಸಂಪರ್ಕ: ಪತಿ ಪರವಾಗಿ ತೀರ್ಪು; ಹೈಕೋರ್ಟ್
ಪರ ಪುರುಷನ ಜೊತೆ ಅಕ್ರಮ ಫೋನ್ ಸಂಪರ್ಕ: ಪತಿ ಪರವಾಗಿ ತೀರ್ಪು; ಹೈಕೋರ್ಟ್
ಪತಿ ಸತತವಾಗಿ ಎಚ್ಚರಿಕೆಯನ್ನು ನೀಡಿದರೂ ಅದನ್ನು ಲೆಕ್ಕಿಸದೆ ಅಪರಾತ್ರಿಯಲ್ಲಿ ಅಥವಾ ಹೊತ್ತಲ್ಲದ ಹೊತ್ತಿನಲ್ಲಿ ಪತ್ನಿಯು ಮತ್ತೊಬ್ಬ ಪುರುಷನಿಗೆ ಪದೇ ಪದೇ ಫೋನ್ ಮಾಡುವುದು ವೈವಾಹಿಕ ಕ್ರೌರ್ಯ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಇತ್ತೀಚೆಗೆ ತನ್ನ ಗಂಡನ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಅನ್ಯ ಪುರುಷನಿಗೆ ರಹಸ್ಯ ಫೋನ್ ಕರೆಗಳನ್ನು ಮಾಡುವುದು ವೈವಾಹಿಕ ಕ್ರೌರ್ಯಕ್ಕೆ ಸಮಾನವಾಗಿದೆ ಎಂದು ದಂಪತಿಗೆ ವಿಚ್ಛೇದನ ನೀಡಿ ತೀರ್ಪು ನೀಡುವಾಗ ಹೈಕೋರ್ಟ್ ಹೇಳಿತು.
ಕೇರಳ ಹೈಕೋರ್ಟ್ ನ್ಯಾಯಾಧೀಶರಾದ ಜಸ್ಟಿಸ್ ಕೌಸರ್ ಎಡಪಾಗ್ತ್ ಈ ತೀರ್ಪು ನೀಡಿದ್ದಾರೆ. ತಮ್ಮ ತೀರ್ಪಿನಲ್ಲಿ, ವೈವಾಹಿಕ ಜೀವನದ ಪುನಃಸ್ಥಾಪನೆಯಾಗದ ಹೊರತು ಈ ಕ್ರೌರ್ಯವನ್ನು ಕೇವಲ ರಾಜಿ ಮಾಡಿಕೊಳ್ಳುವುದಕ್ಕೆ ಸಮ್ಮತಿಸುವುದಿಲ್ಲ ಎಂಬುದಾಗಿ ಗಮನಿಸಿದರು.
ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಪತಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಮೇಲ್ಮನವಿಯ ಮೇಲೆ ಈ ತೀರ್ಪು ನೀಡಲಾಗಿದೆ. ವ್ಯಭಿಚಾರ ಮತ್ತು ಕ್ರೌರ್ಯದ ಆಧಾರದ ಮೇಲೆ ಮದುವೆಯನ್ನು ವಿಸರ್ಜಿಸಬೇಕು ಎಂದು ಪತಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಅದನ್ನು ಕೌಟುಂಬಿಕ ನ್ಯಾಯಾಲಯ ವಜಾ ಮಾಡಿತ್ತು.
ಮದುವೆಯಾದ ಪೂರ್ವದಲ್ಲೂ ಮಹಿಳೆಯು ಗಂಡನ ವಿರುದ್ಧ ನಾನಾ ಅನಿಷ್ಟ ಕೃತ್ಯಗಳನ್ನು ಎಸಗಿದ್ದು, ಈ ಕೃತ್ಯಗಳು ಪತಿಯ ಬದುಕನ್ನು ನರಕವನ್ನಾಗಿಸಿದೆ ಎಂಬುದು ಪತಿಯನ್ನು ಪ್ರತಿನಿಧಿಸಿದ ವಕೀಲರು ವಾದ ಮಾಡಿದ್ದರು. ಆಕೆ ತನ್ನ ಮದುವೆಗೆ ಮುನ್ನ ಹಾಗೂ ತದನತರ ಎರಡನೇ ಪ್ರತಿವಾದಿಯೊಂದಿಗೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದಾರೆ ಎಂಬುದಾಗಿ ಆರೋಪಿಸಲಾಗಿದೆ.